ಚಿಪ್ಪಾರಿನಲ್ಲಿ ಕೃಷಿ ದಿನಾಚರಣೆ
ಉಪ್ಪಳ: ಪೈವಳಿಕೆ ಚಿಪ್ಪಾರಿನ ಹಿಂದೂ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವದ ಅಂಗವಾಗಿ ಕೃಷಿ ದಿನಾಚರಣೆ ಮತ್ತು ಸನ್ಮಾನ ಸಮಾರಂಭ ಇತ್ತೀಚೆಗೆ ಜರಗಿತು. ಕೃಷಿ ವಿಚಾರ ಸಂಕಿರಣವನ್ನು ನಿವೃತ್ತ ಜಿಲ್ಲಾ ಕೃಷಿ ಅಧಿಕಾರಿ ತಿರುಮಲೇಶ್ವರ ಭಟ್ ಪೆರ್ಲ ಉದ್ಘಾಟಿಸಿ ವಿಷಯ ಮಂಡಿಸಿದರು.
ವಿದ್ಯಾಲಯಗಳಲ್ಲಿ ಕೃಷಿ ಸಂಕಿರಣ ಮತ್ತು ಕೃಷಿಕರನ್ನು ಸನ್ಮಾನಿಸುವ ಕಾರ್ಯಕ್ರಮಗಳನ್ನು ಮಾಡುವುದರಿಂದ ಮಕ್ಕಳಲ್ಲಿ ಕೃಷಿಯ ಬಗೆಗಿನ ಒಲವು ಮತ್ತು ಅರಿವನ್ನು ಉಂಟುಮಾಡಿ ಕೃಷಿ ಬದುಕಿನ ಸ್ಪೂತರ್ಿ ಉಂಟಾಗುವುದು ಎಂದು ಉಪಜಿಲ್ಲಾ ವಿದ್ಯಾಧಿಕಾರಿ ದಿನೇಶ್. ವಿ ನುಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಖಲೀಲ್ ನಾರ್ಣಕಟ್ಟ ವಹಿಸಿದ್ದರು. ಪ್ರಗತಿಪರ ಕೃಷಿಕ ಗೋಪಾಲಕೃಷ್ಣ ಭಟ್ ಅಡ್ಕತ್ತಿಮಾರು, ಫೆಲಿಕ್ಸ್ ಡಿ'ಸೋಜ ಅಮ್ಮೇರಿ ಕಜೆ, ಬಾಪಕುಂಞಿ ಚಿಪ್ಪಾರು ಇವರುಗಳನ್ನು ತಾಳ್ತಾಜೆ ಶಂಕರನಾರಾಯಣ ಭಟ್ ಸನ್ಮಾನಿಸಿದರು. ಆಡಳಿತ ಮಂಡಳಿಯ ಸದಸ್ಯ ಸೀತಾರಾಮ ಬಲ್ಲಾಳ್ ಚಿಪ್ಪಾರು, ಮಾತೃಸಂಘದ ಅಧ್ಯಕ್ಷೆ ಜಯಲಕ್ಷ್ಮಿ, ನಿವೃತ್ತ ಮುಖ್ಯೋಪಾಧ್ಯಾಯ ಕೃಷ್ಣ ಶೆಟ್ಟಿಗಾರ್ ಮಾತಾನಾಡಿದರು. ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ಜಯರಾಮ ಅಮ್ಮೇರಿ, ಜಯಶ್ರೀ ಚಿಪ್ಪಾರು, ಪ್ರಮೀಳಾ ಕುರುವೇರಿ ಉಪಸ್ಥಿತರಿದ್ದರು. ಈ ಸಂಧರ್ಭದಲ್ಲಿ ಸೀತಾರಾಮ ಬಲ್ಲಾಳ್ ಮತ್ತು ಮನೆಯವರು ಓಂದು ಲಕ್ಷ ರೂ,ಗಳನ್ನು ಶಾಲಾ ಶತಮಾನೋತ್ಸವ ನಿಧಿಗೆ ದೇಣಿಗೆ ನೀಡಿದರು. ಮುಖ್ಯೋಪಾಧ್ಯಾಯ ದಾಸಪ್ಪ ಶೆಟ್ಟಿ ಸ್ವಾಗತಿಸಿ, ಶೇಖರ ಶೆಟ್ಟಿ ವಂದಿಸಿದರು. ಚಂದ್ರಶೇಖರ್ ಭಟ್ ಕಾರ್ಯಕ್ರಮ ನಿರೂಪಿಸಿದರು.
ಶಾಲಾ ಶತಮಾನೋತ್ಸವ ಕಾರ್ಯಕ್ರಮಗಳ ಅಂಗವಾಗಿ ದಿ. ಸುಬ್ರಾಯ ಭಟ್ ಪ್ರತಿಷ್ಠಾನ ತಾಳ್ತಜೆ ಇವರಿಂದ " ಊರ್ವಶಿ ಶಾಪ " ಎಂಬ ಕಥಾ ಭಾಗದ ತಾಳಮದ್ದಳೆ ಈ ಸಂದರ್ಭ ನಡೆಯಿತು.