ಮಂಜೇಶ್ವರದಲ್ಲಿ ರಕ್ಷಿತಾರಣ್ಯ ಘೋಷಣೆಗೆ ವ್ಯಾಪಕ ವಿರೋಧ: ನಾಗರಿಕರು ಹೋರಾಟದತ್ತ
ಮಂಜೇಶ್ವರ: ಮಂಜೇಶ್ವರ ಗ್ರಾ. ಪಂ. ವ್ಯಾಪ್ತಿಯಲ್ಲಿರುವ ಮಾಣಿಂಜಬೈಲು, ಗುಡ್ಡೆ, ಡೋನ್ ಬಾಸ್ಕೋ ಹಾಗೂ ಗೋವಿಂದ ಪೈ ಕಾಲೇಜು ರಸ್ತೆಗಳ ನಿವಾಸಿಗಳು ಇದೀಗ ಕೆರಳ ಸರಕಾರದ ರಕ್ಷಿತಾರಣ್ಯ ಘೋಷಣೆಯಿಂದ ದಿಗ್ಬ್ರಾಂತರಾಗಿದ್ದಾರೆ.
ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಗ್ರೇಸಿಂಗ್ ಗ್ರೌಂಡಿನಲ್ಲಿ 13 ಎಕ್ರೆ 43 ಸೆಂಟ್ಸ್ ಸ್ಥಳದಲ್ಲಿ ಸೋಶಿಯಲ್ ಫಾರೆಸ್ಟ್ನವರಿಗೆ ಅಕೇಶಿಯಾ ಸಸಿ ನೆಡಲು ಐದು ಎಕ್ರೆ ಸ್ಥಳವನ್ನು ಮಂಜೇಶ್ವರ ಗ್ರಾ. ಪಂ. ಅನುಮತಿ ನೀಡಿದೆ. ಈ ವ್ಯಾಪ್ತಿಯಲ್ಲಿ ಮಾಣಿಂಜ ಬೈಲು, ಗುಡ್ಡೆ, ಡೋನ್ ಬಾಸ್ಕೋ ಹಾಗೂ ಗೋವಿಂದ ಪೈ ಕಾಲೇಜು ರಸ್ತೆಗಳು ಒಳಗೊಂಡಿವೆ. ಅಲ್ಲದೆ ಮಂಜೇಶ್ವರ ರಾ. ಹೆದ್ದಾರಿಯಿಂದ ಗೇರುಕಟ್ಟೆ ಹೋಗುವ ರಸ್ತೆ, ಗುಡ್ಡೆಯಿಂದ ಗುತ್ತು ರಸ್ತೆ, ಹಾಗೂ ಗುಡ್ಡೆಯಿಂದ ಪರಿಶಿಷ್ಟ ಜಾತಿ ಪಂಗಡಗಳ ಕಾಲನಿಗೆ ಹಾದು ಹೋಗುವ ರಸ್ತೆಯೂ ರಕ್ಷಿತಾರಣ್ಯ ವ್ಯಾಪ್ತಿಗೆ ಒಳಗೊಂಡಿದೆ. ಕಳೆದ ಸುಮಾರು 100 ವರ್ಷಗಳಿಂದ ಪರಂಪರಾಗತವಾಗಿ ಜನರು ಕೃಷಿಗಾಗಿ ಉಪಯೋಗಿಸುವ ಗುಡ್ಡ ಹಳ್ಳಗಳು, ತೋಟ, ಗದ್ದೆಗಳು ಇದರಲ್ಲಿ ಒಳಗೊಂಡಿದೆ.
ರಕ್ಷಿತಾರಣ್ಯ ಪ್ರದೇಶ ಘೋಷಣೆ ಜಾರಿಗೊಂಡಲ್ಲಿ ಈ ಪ್ರದೇಶದ ಮೂರು ವಾಡರ್ಿನ ಕೃಷಿಕರು, ಶಾಲಾ ವಿದ್ಯಾಥರ್ಿಗಳು, ಇತರ ಎಲ್ಲಾ ವಿಭಾಗದ ಕೂಲಿಯಾಳುಗಳು ಕೂಡಾ ಸಂಕಷ್ಟದಲ್ಲಿ ಸಿಲುಕಲಿರುವುದಾಗಿ ಊರವರು ಭೀತಿ ವ್ಯಕ್ತಪಡಿಸಿದ್ದಾರೆ. ಈ ಪ್ರದೇಶದಲ್ಲಿ ಅಂಗನವಾಡಿ, ಖಾಸಗಿ ಹಾಗೂ ಸರಕಾರಿ ಶಾಲೆಗಳು, ಆರೋಗ್ಯ ಕೇಂದ್ರ ಮಸೀದಿ ಕ್ಷೇತ್ರಗಳು ಎಲ್ಲವೂ ರಕ್ಷಿತಾರಣ್ಯ ಘೋಷಣೆಯ ಪಟ್ಟಿಯಲ್ಲಿ ಸೇರಿಕೊಂಡಿವೆ.
ಜನ ಬಳಕೆಯ ಯಾವುದೇ ಕೇಂದ್ರಕ್ಕಾಗಲೀ, ಸ್ಥಳೀಯ ಕುಟೂಮಬಗಳಿಗೆ, ಸಾರ್ವಜನಿಕ ಬಳಕೆಯ ರಸ್ತೆಗಳಿಗೆ ಯಾವುದೇ ನಿರ್ಬಂಧವನ್ನು ಹೇರದೆ ಯಥಾ ಸ್ಥಿತಿ ಕಾಪಾಡುವಂತೆ ಇಲ್ಲಿಯ ನಾಗರಿಕರು ಹೋರಾಟ ಸಮಿತಿಗೂ ರೂಪು ನೀಡಿದ್ದಾರೆ. ಸಾಮಾಜಿಕ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿರುವ ಈ ಭೂಮಿಯನ್ನು ರಕ್ಷಿತಾರಣ್ಯ ಪ್ರದೇಶವಾಗಿ ಘೋಷಿಸುವ ಬಗ್ಗೆ ಸರಕಾರ ಈಗಾಗಲೇ ಆದಿಸೂಚನೆ ಹೊರಡಿಸಿದ್ದು, ಪರಿಸರವಾಸಿಗಳು ಈ ಪ್ರದೇಶದಲ್ಲಿ ಇರಬಹುದಾದ ತಮ್ಮ ಹಕ್ಕು ಅವಕಾಶಗಳ ಬಗ್ಗೆ ನಿಧರ್ಿಷ್ಟ ದಿನದಲ್ಲಿ ದಾಖಲೆ ಸಹಿತ ಹಾಜರುಪಡಿಸುವಂತೆ ಕಾಞಂಗಾಡ್ ಅರಣ್ಯ ಸೆಟ್ಲ್ ಮೆಂಟ್ ಅಧಿಕಾರಿಗಳು ಹಾಗೂ ಕಂದಾಯ ವಿಭಾಗೀಯ ಅಧಿಕಾರಿಗಳು ನೋಟಿ ಜಾರಿ ಮಾಡಿದ್ದಾರೆ.
ಪ್ರಸ್ತಾವಿತ ಪ್ರದೇಶವನ್ನು ಹಾದು ಹೋಗಬೇಕಾದ ಅನಿವಾರ್ಯತೆ ಇರುವವರು ಎಲ್ಲರೂ ಹೋರಾಟ ಸಮಿತಿಯಲ್ಲಿ ಭಾಗಿಯಾಗಿದ್ದಾರೆ. ಯಾವುದೇ ಕಾರಣಕ್ಕೂ ಸ್ಥಳೀಯರಿಗೆ ತೊಂದರೆಯಾದರೆ ಸರಕಾರದ ನಿಲುವಿನ ವಿರುದ್ದ ಯಾವುದೇ ಬೆಲೆ ತೆತ್ತಾದರೂ ಎದುರಿಸುವುದಾಗಿ ಊರವರು ಹೇಳುತಿದ್ದಾರೆ.