HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                   ಅ.9 ರಿಂದ 17 ಕೋಳ್ಯೂರಿನಲ್ಲಿ  'ಯಕ್ಷಗಾನ ನವಾಹ - 2018'
     ಮಂಜೇಶ್ವರ :ಕೋಳ್ಯೂರಿನ ಶ್ರೀ ಮಹಾಗಣಪತಿ ಶಂಕರನಾರಾಯಣ ಸಾಂಸ್ಕೃತಿಕ ಕಲಾ ಪ್ರತಿಷ್ಠಾನದ ವತಿಯಿಂದ ವಾಷರ್ಿಕ ನವರಾತ್ರಿ ಸಮಯದಲ್ಲಿ ಜರಗುವಂತೆ ಈ ವರ್ಷ  "ಯಕ್ಷಗಾನ ನವಾಹ - 2018" ಅ. 9 ಮಂಗಳವಾರದಿಂದ ಅಕ್ಟೋಬರ 17ನೇ ಬುಧವಾರದವರೆಗೆ ಶ್ರೀ ಶಂಕರನಾರಾಯಣ ದೇವಸ್ಥಾನ ಕೋಳ್ಯೂರಿನಲ್ಲಿ ಜರಗಲಿದೆ.
   ಅ.9 ರಂದು ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದ್ದು ಶ್ರೀ ದುಗರ್ಾಂಬಾ ಮಹಿಳಾ ಯಕ್ಷಗಾನ ಮಂಡಳಿ ತಡಂಬೈಲು ಸುರತ್ಕಲ್ ತಂಡ ತಾಳಮದ್ದಳೆ ನಡೆಸಿಕೊಡಲಿದೆ. 10ರಂದು ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಮಂಡಳಿ ಪಾಂಡೇಶ್ವರ ಮಂಗಳೂರು, 11ರಂದು ಶ್ರೀ ಚಾಮಂಡೇಶ್ವರಿ ಕೃಪಾಪೋಷಿತ ಯಕ್ಷಗಾನ ಕಲಾಸಂಘ ಪಾವೂರು ಪೊಯ್ಯೆ, 12ರಂದು ವಿಶ್ವಭಾರತಿ ಮುಡಿಪು, 13ರರಂದು ನವಗಿರಿ ಯಕ್ಷಗಾನ ಕಲಾಮಂಡಳಿ ಹೊಸಬೆಟ್ಟು ಕುಳಾಯಿ, 14ರಂದು ನವಕನರ್ಾಟಕ ಕೃಪಾಪೋಷಿತ ಯಕ್ಷಗಾನ ಕಲಾಮಂಡಳಿ ಬಾಯಾರು ಮತ್ತು ದಿ.ತಾಳ್ತಜೆ ಸುಬ್ರಾಯ ಭಟ್ ಪ್ರತಿಷ್ಠಾನ, 15ರಂದು ಶೇಣಿ ರಂಗ ಜಂಗಮ ಟ್ರಸ್ಟ್ ಕಾಸರಗೋಡು, 16ರಂದು ಶ್ರೀ ಮೂಕಾಂಬಿಕಾ ಯಕ್ಷಗಾನ ಮಂಡಳಿ ಮಂಗಳಾದೇವಿ ಮಂಗಳೂರು, 17ರರಂದು ಶ್ರೀ ವಾಸುದೇವ ಸಾಮಗ ಮಲ್ಪೆ ಇವರ ಸಂಚಾಲಕತ್ವದಲ್ಲಿ ನಡೆಯುವ ಸಂಯಮಂ ಸಂಚಾರಿ ಯಕ್ಷಗಾನ ಮಂಡಳಿ ಕೋಟೇಶ್ವರ ಇವರಿಂದ 'ಶ್ರೀ ರಾಮಾಂಜನೇಯ' ತಾಳಮದ್ದಳೆ ಜರಗಲಿದೆ.
  ಸೆ. 17 ರಂದು ಅಪರಾಹ್ನ  3ರರಿಂದ ಸಮಾರೋಪ ಸಮಾರಂಭ ಸಭಾಕಾರ್ಯಕ್ರಮ ಹಾಗೂ ಯಕ್ಷಗಾನ ಹಿಮ್ಮೇಳ ಗುರು ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರಿಗೆ ಸನ್ಮಾನ ಕಾರ್ಯಕ್ರಮ ಜರಗಲಿದೆ. ಹಿರಿಯ ಭಾಗವತ ಕುರಿಯ ಗಣಪತಿ ಶಾಸ್ತ್ರಿ ಅಭಿನಂದನಾ ಭಾಷಣಗೈಯ್ಯುವರು. ಸಮಾರಂಭದಲ್ಲಿ ಸರೋಜಿನಿ ಮಧುಸೂದನ್ ಕುಶೆ ಪದವಿ ಪೂರ್ವ ಕಾಲೇಜು ಮಂಗಳೂರಿನ ಪ್ರಾಂಶುಪಾಲ ಕೆ. ಕೃಷ್ಣ ಉಪಾಧ್ಯಾಯ ಅಧ್ಯಕ್ಷತೆ ವಹಿಸಲಿದ್ದು ಅತಿಥಿಗಳಾಗಿ ಅರಸು ಮಂಜಿಷ್ಣಾರ್ ಕ್ಷೇತ್ರ ಉದ್ಯಾವರ ಮಾಡದ ರಾಜ ಬೆಳ್ಚಪ್ಪಾಡ, ಹವ್ಯಾಸಿ ಪತ್ರಕರ್ತ ಯೋಗೀಶ ರಾವ್ ಚಿಗುರುಪಾದೆ, ಕಾತರ್ಿಕ್ ಎಂಟರ್ಪ್ರೈಸಸ್ ಮಜೀರ್ ಪಳ್ಳ ಸುಂಕದಕಟ್ಟೆ ಸಂಸ್ಥೆಯ ಮಾಲಕ ಪ್ರಕಾಶ ಪೊಯ್ಯೆತ್ತಬೈಲ್, ಶಂಕರ ಭಟ್ ಬಡಾಜೆ, ನಿವೃತ್ತ ಗ್ರಾಮಾಧಿಕಾರಿ ಸಿ. ನಾರಾಯಣ, ಶಂಕರನಾರಾಯಣ ದೇವಸ್ಥಾನ ಕೋಳ್ಯೂರು ಕ್ಷೇತ್ರದ ಆಡಳಿತ ಮೊಕ್ತೇಸರ ವೇದಮೂತರ್ಿ ರಾಜೇಶ್ ತಾಳಿತ್ತಾಯ ಹೊಸಮನೆ, ಶಂಕರನಾರಾಯಣ ದೇವಸ್ಥಾನ ಕೋಳ್ಯೂರು ಕ್ಷೇತ್ರದ ಕಾರ್ಯನಿರ್ವಹಣಾಧಿಕಾರಿ ಉಮೇಶ, ಕ್ಷೇತ್ರದ ಅರ್ಚಕ ರವಿಶಂಕರ ಹೊಳ್ಳ ಭಾಗವಹಿಸುವರು.
   ಸಂಜೆ 4ರಿಂದ ತೆಂಕುತಿಟ್ಟಿನ ಪ್ರಸಿದ್ದ ಕಲಾವಿದರಿಂದ ಯಕ್ಷಗಾನ ಬಯಲಾಟ "ರಾವಣೋದ್ಭವ - ಕ್ಷತ್ರಿಯ ಸಂಹಾರ" ಜರಗಲಿದೆ. ಹಿಮ್ಮೇಳದಲ್ಲಿ ಕುರಿಯ ಗಣಪತಿ ಶಾಸ್ತ್ರಿ, ಸತ್ಯ ನಾರಾಯಣ ಪುಣಿಚಿತ್ತಾಯ ಪೆರ್ಲ, ಪ್ರಶಾಂತ ವಗೆನಾಡು, ರೋಹಿತ್ ಉಚ್ಚಿಲ ಭಾಗವಹಿಸಲಿದ್ದು ಮುಮ್ಮೇಳದಲ್ಲಿ ಕೃಷ್ಣ ಮೂಲ್ಯ ಕೈರಂಗಳ, ರಾಧಾಕೃಷ್ಣ ನಾವಡ ಮಧೂರು, ಸದಾಶಿವ ಶೆಟ್ಟಿಗಾರ್ ಸಿದ್ದಕಟ್ಟೆ, ರಮೇಶ ಶೆಟ್ಟಿ ಬಾಯಾರು, ಅಂಬಾ ಪ್ರಸಾದ ಪಾತಾಳ, ಮಹೇಶ್ ಮಣಿಯಾಣಿ ದೊಡ್ಡ ತೋಟ, ಪುಷ್ಪರಾಜ್ ಕುಕ್ಕಾಜೆ, ಶಶಿಧರ ಕುಲಾಲ್ ಕನ್ಯಾನ, ಪದ್ಮನಾಭ ಉಪಾಧ್ಯಾಯ, ಜಗದೀಶ ಬೋಳಂತೂರು, ಸಂದೀಪ್ ತೋಟ, ಕಿಶೋರ್ ಕೊಮ್ಮೆ ಪಾಲ್ಗೊಳ್ಳುವರು ಎಂದು ಕೋಳ್ಯೂರು ಪ್ರತಿಷ್ಠಾನದ ಪ್ರಕಟಣೆ ತಿಳಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries