ಭದ್ರತಾ ಲೋಪ ಒಪ್ಪಿಕೊಂಡ ಫೇಸ್ ಬುಕ್: ಬರೊಬ್ಬರಿ 2.2 ಬಿಲಿಯನ್ ಬಿಲಿಯನ್ ಜನರು ಹೀಗೆ ಮಾಡಬೇಕೆನ್ನುತ್ತಿದ್ದಾರೆ
ನವದೆಹಲಿ: ಆಕ್ಸಿಸ್ ಟೋಕನ್ ಗಳ ಮೂಲಕ ಹ್ಯಾಕರ್ ಗಳು ಕನಿಷ್ಠ 50 ಮಿಲಿಯನ್ ಬಳಕೆದಾರರ ಫೇಸ್ ಬುಕ್ ಖಾತೆಗಳನ್ನು ಹ್ಯಾಕ್ ಮಾಡಿದ್ದಾರೆ. ಈ ಭದ್ರತಾ ಲೋಪವನ್ನು ಫೇಸ್ ಬುಕ್ ಸಹ ಒಪ್ಪಿಕೊಂಡಿದೆ. ಈ ನಡುವೆ ತಜ್ಞರು ಫೇಸ್ ಬುಕ್ ಖಾತೆ ಭದ್ರಪಡಿಸಿಕೊಳ್ಳಲು ಕೆಲವೊಂದು ಮಾಹಿತಿ ನೀಡಿದ್ದಾರೆ.
ಬರೊಬ್ಬರಿ 2.2 ಬಿಲಿಯನ್ ಜನರು ಫೇಸ್ ಬುಕ್ ನಿಂದ ಲಾಗ್ ಔಟ್ ಆಗಿ ಮತ್ತೆ ಲಾಗ್ ಇನ್ ಆಗಬೇಕೆಂದು ತಜ್ಞರು ಸಲಹೆ ನೀಡಿದ್ದು, ಫೇಸ್ ಬುಕ್ ಆಪ್ ಬಳಕೆ ಮಾಡುವವರೂ ಲಾಗ್ ಔಟ್ ಆಗಿ ಲಾಗ್ ಇನ್ ಆದರೆ ಒಳಿತು ಎಂದು ಹೇಳಿದ್ದಾರೆ. ಭದ್ರತಾ ಲೋಪ ಸಂಭವಿಸಿರುವುದು ತಿಳಿಯುತ್ತಿದ್ದಂತೆಯೇ ಫೇಸ್ ಬುಕ್ 50 ಮಿಲಿಯನ್ ಖಾತೆಗಳ ಆಕ್ಸಿಸ್ ಟೋಕನ್ ನ್ನು ರಿಸೆಟ್ ಮಾಡಿದ್ದು, ಇನ್ನೂ 40 ಮಿಲಿಯನ್ ಖಾತೆಗಳ ಆಕ್ಸಿಸ್ ಟೋಕನ್ ನ್ನು ರಿಸೆಟ್ ಮಾಡಲು ಕ್ರಮ ಕೈಗೊಂಡಿದೆ.