ಕಣ್ವತೀರ್ಥ ಮಠದಲ್ಲಿ ಕೊಂಡೆವೂರಿನ ಶ್ರೀ ವಿಷ್ಣುಸಹಸ್ರನಾಮ ಅಭಿಯಾನ ರಥ
ಮಂಜೇಶ್ವರ: ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ 2019 ರ ಫೆಬ್ರವರಿಯಲ್ಲಿ ನಡೆಯಲಿರುವ ವಿಶ್ವಜಿತ್ ಅತಿರಾತ್ರ ಸೋಮಯಾಗದ ಪೂರ್ವಭಾವಿಯಾಗಿ ಶ್ರೀ ವಿಷ್ಣುಸಹಸ್ರನಾಮ ಅಭಿಯಾನ ರಥಯಾತ್ರೆ ಮಂಜೇಶ್ವರ ಪಂಚಾಯತಿ ವ್ಯಾಪ್ತಿಯಲ್ಲಿ ಭಾನುವಾರ ಆರಂಭವಾಗಿ ಅ. 8 ರವರೆಗೆ ವಿವಿಧ ಶ್ರದ್ಧಾ ಕೇಂದ್ರಗಳಿಗೆ ಸಂಚರಿಸಲಿದೆ.
ಭಾನುವಾರ ಕಣ್ವತೀರ್ಥ ಮಠದ ಆವರಣದಲ್ಲಿ ಈ ರಥವನ್ನು ಭಕ್ತಾದಿಗಳು ಶ್ರದ್ಧಾಭಕ್ತಿಯಿಂದ ಸ್ವಾಗತಿಸಿ, ಸಾಮೂಹಿಕ ಭಜನೆ ಮತ್ತು ಶ್ರೀ ವಿಷ್ಣುಸಹಸ್ರನಾಮ ಪಾರಾಯಣ ನಡೆಸಿದರು. ಬಳಿಕ ಶ್ರೀ ಮಹಾವಿಷ್ಣುವಿಗೆ ಪೂಜೆ ನಡೆಯಿತು. ಈ ಸಂದರ್ಭ ಪರಮಪೂಜ್ಯ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು ಸೋಮಯಾಗದ ವೈಶಿಷ್ಟ್ಯತೆಯನ್ನು ವಿವರಿಸಿ, ಪ್ರತಿದಿನವೂ ವಿಷ್ಣುಸಹಸ್ರನಾಮ ಪಾರಾಯಣ ನಡೆಸಿ ವಿಶ್ವವ್ಯಾಪಕನಾದ ಭಗವಾನ್ ಮಹಾವಿಷ್ಣುವಿನ ಅನುಗ್ರಹ ಪಡೆಯೋಣ ಎಂದರು.
ಕಣ್ವತೀರ್ಥ ಮಠದ ಶ್ರೀ ರಾಮಾಂಜನೇಯ ಸಮಿತಿಯ ಅಧ್ಯಕ್ಷ ಮಧುಸೂದನ ಆಚಾರ್ ಸ್ವಾಗತಿಸಿ ವಿಷ್ಣು ಸಹಸ್ರನಾಮ ಆಭಿಯಾನ ಸಮಿತಿಯ ಅಧ್ಯಕ್ಷ ಹರೀಶ್ ಮಾಡ ವಂದಿಸಿದರು.
ಸೋಮವಾರ ಸಂಜೆ 6.30-7.30 ಕುಂಜತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ರಥಕ್ಕೆ ಸ್ವಾಗತ ನೀಡಲಾಯಿತು. ಮಂಗಳವಾರ ಶ್ರೀ ಮಹಾಕಾಳಿ ಭಜನಾ ಮಂದಿರ ತೂಮಿನಾಡು, ಬುಧವಾರ ಮಾಡದ ಶ್ರೀಅರಸು ಮಂಜಿಷ್ಣಾರ್ ಕೃಪಾ ಜೈ ವೀರಮಾರುತಿ ವ್ಯಾಯಾಮಶಾಲೆ ಆವರಣದಲ್ಲಿ ರಥಯಾತ್ರೆ ಆಗಮಿಸಲಿದ್ದು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕಾಗಿ ಆಯೋಜಕರು ವಿನಂತಿಸಿದ್ದಾರೆ.