HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                ಉದ್ಯಾವರ ಮಾಡದಲ್ಲಿ ಕೊಂಡೆವೂರಿನ ಶ್ರೀ ವಿಷ್ಣುಸಹಸ್ರನಾಮ ಅಭಿಯಾನ ರಥ
    ಮಂಜೇಶ್ವರ: ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ 2019 ರ ಫೆಬ್ರವರಿಯಲ್ಲಿ ನಡೆಯಲಿರುವ ವಿಶ್ವಜಿತ್ ಅತಿರಾತ್ರ ಸೋಮಯಾಗದ ಪೂರ್ವಭಾವಿಯಾಗಿ ಶ್ರೀ ವಿಷ್ಣುಸಹಸ್ರನಾಮ ಅಭಿಯಾನ ರಥಯಾತ್ರೆ ಮಂಜೇಶ್ವರ ಪಂಚಾಯತ್ ವ್ಯಾಪ್ತಿಯಲ್ಲಿ ವಿವಿಧ ಶ್ರದ್ಧಾ ಕೇಂದ್ರಗಳಿಗೆ ಸಂಚರಿಸುತ್ತಿದೆ.
    ಮಾಡದ ಶ್ರೀ ಅರಸು ಮಂಜಿಷ್ಣಾರ್ ಕೃಪಾ ಜೈ ವೀರಮಾರುತಿ ವ್ಯಾಯಾಮಶಾಲೆ ಆವರಣದಲ್ಲಿ ಚೆಂಡೆ, ಜಾಗಟೆ ವಾದನದೊಡನೆ ಬುಧವಾರ ಶ್ರೀ ವಿಷ್ಣುಸಹಸ್ರನಾಮ ಅಭಿಯಾನ ರಥವನ್ನು ಭಕ್ತಾದಿಗಳು ಶ್ರದ್ಧಾಭಕ್ತಿಯಿಂದ ಸ್ವಾಗತಿಸಿ, ಸಾಮೂಹಿಕ ಭಜನೆ ಮತ್ತು ಮಾತೆಯರು ಶ್ರೀ ವಿಷ್ಣು ಸಹಸ್ರನಾಮಾವಳಿಯೊಂದಿಗೆ ಪುಷ್ಪಾರ್ಚನೆ ನಡೆಸಿದರು.
    ಕುಂಬಳೆಯ ವೇದಮೂತರ್ಿ ಹರಿನಾರಾಯಣ ಮಯ್ಯ ಅವರು ಮಹಾವಿಷ್ಣುವಿನ ಪೂಜಾ ಕೈಂಕರ್ಯ ನೆರವೇರಿಸಿದರು. ಬಳಿಕ ನಡೆದ ಸತ್ಸಂಗದಲ್ಲಿ ಮಾಣಿಲ ಶ್ರೀ ಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಕೊಂಡೆವೂರಿನ ಯಾಗದಿಂದ ವಿಶ್ವ ಶಾಂತಿಯುಂಟಾಗಲಿ, ಸಮಾಜ ಸದೃಢವಾಗಿ ಬೆಳೆಯಲಿ ಎಂದು ಹಾರೈಸಿದರು. ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು ಸೋಮಯಾಗದ ವೈಶಿಷ್ಟ್ಯತೆಯನ್ನು ವಿವರಿಸುತ್ತಾ, ಅಗ್ನಿಹೋತ್ರದ ಮಹತ್ವವನ್ನು ತಿಳಿಸಿದರಲ್ಲದೆ, ಪ್ರತಿದಿನವೂ ಅನನ್ಯ ಭಕ್ತಿಯಿಂದ ಶ್ರೀ ವಿಷ್ಣುಸಹಸ್ರನಾಮ ಪಾರಾಯಣ ನಡೆಸುವುದರಿಂದ ಸರ್ವರಿಗೂ ಶ್ರೇಯಸ್ಸಾಗಲಿ, ಎಲ್ಲರ ಭವಿಷ್ಯದ ಜೀವನ ಸುಗಮವಾಗಿ ಸಾಗುವಂತಾಗಲಿ ಎಂದು ಆಶಿಸಿದರು.
   ಇದೇ ಸಂದರ್ಭದಲ್ಲಿ ಪರಮ ಪೂಜ್ಯ ಯತಿದ್ವಯರು ಯಾಗದ ಪೂರ್ವಭಾವಿ ಸಹಸ್ರ ವೃಕ್ಷ  ಸಮೃದ್ಧಿ ಅಭಿಯಾನದ ಅಂಗವಾಗಿ ಉದ್ಯಾವರ ಮಾಡ ಉಪಸಮಿತಿಯ ಅಧ್ಯಕ್ಷರಿಗೆ ಸಮಿತಿಯ ಪರವಾಗಿ `ನೆಲ್ಲಿ ಗಿಡ'ವನ್ನು ನೀಡಿದರು. ವಿಷ್ಣು ಸಹಸ್ರನಾಮ ಅಭಿಯಾನ ಸಮಿತಿಯ ಅಧ್ಯಕ್ಷ ಹರೀಶ್ ಮಾಡ ಸ್ವಾಗತಿಸಿ ವಂದಿಸಿದರು.

  

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries