HEALTH TIPS

ಯಾವುದೇ ಶೀರ್ಷಿಕೆಯಿಲ್ಲ

             ಬಡಾಜೆ ಶ್ರೀ ಮಹಾಲಿಂಗೇಶ್ವರ ದೇವಳದಲ್ಲಿ ವಿಷ್ಣುಸಹಸ್ರನಾಮ ಅಭಿಯಾನ ರಥ
    ಮಂಜೇಶ್ವರ: ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ 2019 ರ ಫೆಬ್ರವರಿಯಲ್ಲಿ ನಡೆಯಲಿರುವ ವಿಶ್ವಜಿತ್ ಅತಿರಾತ್ರ ಸೋಮಯಾಗದ ಪೂರ್ವಭಾವಿಯಾಗಿ ಶ್ರೀ ವಿಷ್ಣುಸಹಸ್ರನಾಮ ಅಭಿಯಾನ ರಥಯಾತ್ರೆ ಮಂಜೇಶ್ವರ ಪಂಚಾಯತಿಯ ವಿವಿಧ ಶ್ರದ್ಧಾ ಕೇಂದ್ರಗಳಿಗೆ ಸಂಚರಿಸುತ್ತಿದೆ.
    ಗುರುವಾರ ಬಡಾಜೆ ಶ್ರೀ ಮಹಾಲಿಂಗೇಶ್ವರ ದೇವಳದ ಆವರಣದಲ್ಲಿ ಶ್ರೀವಿಷ್ಣುಸಹಸ್ರನಾಮ ಅಭಿಯಾನ ರಥವನ್ನು ಭಕ್ತಾದಿಗಳು ಶ್ರದ್ಧಾಭಕ್ತಿಯಿಂದ ಸ್ವಾಗತಿಸಿ, ಸಾಮೂಹಿಕ ಭಜನೆ, ಬಳಿಕ ಶ್ರೀವಿಷ್ಣುಸಹಸ್ರನಾಮ ಪಾರಾಯಣ  ನಡೆಸಿದರು. ವೇದಮೂತರ್ಿ ಹರಿನಾರಾಯಣ ಮಯ್ಯರು ಮಹಾವಿಷ್ಣುವಿನ ಪೂಜಾ ಕೈಂಕರ್ಯ ನೆರವೇರಿಸಿದರು. ಬಳಿಕ ನಡೆದ ಸತ್ಸಂಗದಲ್ಲಿ ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಕೊಂಡೆವೂರಿನಲ್ಲಿ ನಡೆಯಲಿರುವ ಸೋಮಯಾಗದ ವೈಶಿಷ್ಟ್ಯತೆಯನ್ನು ವಿವರಿಸುತ್ತಾ, ಅಗ್ನಿಹೋತ್ರದ ಮಹತ್ವವನ್ನು ತಿಳಿಸಿದರಲ್ಲದೆ, ಪ್ರತಿಯೊಬ್ಬರೂ ಧಾಮರ್ಿಕ ಕಾರ್ಯಗಳಲ್ಲಿ ಭಾಗಿಗಳಾಗಬೇಕು,ಯಾಗದಿಂದ ವಿಶ್ವ ಶಾಂತಿಯುಂಟಾಗಲಿ ಎಂದು ಹಾರೈಸಿದರು. ಇದೇ ಸಂದರ್ಭದಲ್ಲಿ ಯಾಗದ ಪೂರ್ವಭಾವಿ ಸಹಸ್ರ ವೃಕ್ಷ ಸಮೃದ್ದಿ ಅಭಿಯಾನದ ಅಂಗವಾಗಿ 'ಬಡಾಜೆ ಉಪಸಮಿತಿ'ಯ ಪದಾಧಿಕಾರಿಗಳಿಗೆ ಮತ್ತು ಮಹಾಲಿಂಗೇಶ್ವರ ದೇವಳದ ಆಡಳಿತ ಮೊಕ್ತೇಸರ  ಬಲರಾಮ ಭಟ್ ಕಾಕುಂಜೆ ಇವರಿಗೆ  'ನೆಲ್ಲಿ ಗಿಡ'ವನ್ನು ವಿತರಿಸಲಾಯಿತು. ವಿಷ್ಣು ಸಹಸ್ರನಾಮ ಅಭಿಯಾನ ಸಮಿತಿಯ ಅಧ್ಯಕ್ಷ ಹರೀಶ್ ಮಾಡ ಸ್ವಾಗತಿಸಿ, ವಂದಿಸಿದರು.
  ಶುಕ್ರವಾರ ಸಂಜೆ ಶ್ರೀ ಕೀತರ್ೇಶ್ವರ ದೇವಸ್ಥಾನದಲ್ಲಿ ರಥಕ್ಕೆ ಸ್ವಾಗತ ನೀಡಲಾಯಿತು. ಶನಿವಾರ ಮಂಜೇಶ್ವರದ ಅನಂತೇಶ್ವರ ದೇವಸ್ಥಾನದ ಪರಿಸರದಲ್ಲಿ, ಭಾನುವಾರ ಶ್ರೀ ಅಯ್ಯಪ್ಪ ಮಂದಿರ ಹೊಸಂಗಡಿಯಲ್ಲಿ ರಥಯಾತ್ರಾ ಕಾರ್ಯಕ್ರಮ ನಡೆಯಲಿದ್ದು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕಾಗಿ ಆಯೋಜಕರು ವಿನಂತಿಸಿದ್ದಾರೆ.
 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries