ಶ್ರೀಮತ್ ಅನಂತೇಶ್ವರ ದೇವಳಕ್ಕೆ ಕೊಂಡೆವೂರಿನ ಶ್ರೀ ವಿಷ್ಣುಸಹಸ್ರನಾಮ ಅಭಿಯಾನ ರಥ
ಮಂಜೇಶ್ವರ: ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ 2019 ರ ಫೆಬ್ರವರಿಯಲ್ಲಿ ನಡೆಯಲಿರುವ ವಿಶ್ವಜಿತ್ ಅತಿರಾತ್ರ ಸೋಮಯಾಗದ ಪೂರ್ವಭಾವಿಯಾಗಿ ಶ್ರೀ ವಿಷ್ಣುಸಹಸ್ರನಾಮ ಅಭಿಯಾನ ರಥಯಾತ್ರೆಗೆ ಅ. 06 ರಂದು ಮಂಜೇಶ್ವರದ ಶ್ರೀಮತ್ ಅನಂತೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಭಕ್ತಾದಿಗಳು ಚೆಂಡೆ, ಜಾಗಟೆ, ಶಂಖ ವಾದನದೊಡನೆ ಶ್ರದ್ಧಾಭಕ್ತಿ ಪೂರ್ವಕ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಸೇರಿದ ಭಕ್ತಾದಿಗಳು ಭಜನೆ ಬಳಿಕ ಸಾಮೂಹಿಕವಾಗಿ ಶ್ರೀವಿಷ್ಣುಸಹಸ್ರನಾಮ ಪಾರಾಯಣ ನಡೆಸಿದರು. ಹರಿನಾರಾಯಣ ಮಯ್ಯ ಕುಂಬಳೆ ಅವರು ಮಹಾವಿಷ್ಣುವಿನ ಪೂಜಾ ಕೈಂಕರ್ಯ ನೆರವೇರಿಸಿದರು. ಬಳಿಕ ನಡೆದ ಸತ್ಸಂಗದಲ್ಲಿ ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಮತ್ತು ಕೊಂಡೆವೂರಿನ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು ಯಾಗದ ಮೂಲಕ ಸಮಸ್ತ ಸಮಾಜ ಬಾಂಧವರ ಒಗ್ಗೂಡುವಿಕೆ ಆಗಲಿ. ಸರ್ವರಿಗೂ ಶ್ರೇಯಸ್ಸಾಗಲಿ ಎಂದು ಹಾರೈಸಿದರು. ಇದೇ ಸಂದರ್ಭದಲ್ಲಿ ಯತಿದ್ವಯರು ಯಾಗದ ಪೂರ್ವಭಾವಿ "ಸಹಸ್ರ ವೃಕ್ಷ ಸಮೃಧ್ಧಿ ಅಭಿಯಾನ"ದ ಅಂಗವಾಗಿ ಯಾಗದ ಮಂಜೇಶ್ವರ ಪಂಚಾಯತಿ ಸಮಿತಿ ಅಧ್ಯಕ್ಷ ಛತ್ರಪತಿ ಪ್ರಭು ಅವರಿಗೆ 'ನೆಲ್ಲಿ ಗಿಡ'ವನ್ನು ನೀಡಿದರು. ವಿಷ್ಣು ಸಹಸ್ರನಾಮ ಅಭಿಯಾನ ಸಮಿತಿಯ ಅಧ್ಯಕ್ಷ ಹರೀಶ್ ಮಾಡ ಸ್ವಾಗತಿಸಿ ವಂದಿಸಿದರು.
ರಥಯಾತ್ರೆಯು ಇಂದು(ಸೋಮವಾರ) ಇಡಿಯದ ಶ್ರೀ ಶಾರದಾಂಬಾ ಭಜನಾ ಮಂದಿರದ ಆವರಣದಲ್ಲಿ ಆಗಮಿಸಲಿದ್ದು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕಾಗಿ ಆಯೋಜಕರು ವಿನಂತಿಸಿದ್ದಾರೆ.