ಮಂಜೇಶ್ವರ ಬಿಡಿಓಗೆ ನಿವೃತ್ತಿ
ಮಂಜೇಶ್ವರ: ಸುಮಾರು 33 ವರ್ಷಗಳ ಸರಕಾರಿ ಸೇವೆಗೈದು ನಿವೃತ್ತರಾದ ಮಂಜೇಶ್ವರ ಬ್ಲಾಕ್ ಅಭಿವೃದ್ದಿ ಅಧಿಕಾರಿ(ಬಿಡಿಓ) ಕೆ.ಅಬ್ದುಲ್ಲ ಅವರಿಗೆ ಶನಿವಾರ ಬ್ಲಾಕ್ ಪಂಚಾಯತಿ ಸಭಾಂಗಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ವಿದಾಯ ಕೂಟ ಏರ್ಪಡಿಸಲಾಯಿತು.
ಮಂಜೇಶ್ವರ ಬ್ಲಾಕ್ ಪಂಚಾಯತಿ ಅಧ್ಯಕ್ಷ ಎ.ಕೆ.ಎಂ. ಅಶ್ರಫ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆ.ಅಬ್ದುಲ್ಲ ಅವರನ್ನು ಶಾಲುಹೊದೆಸಿ ಸ್ಮರಣಿಕೆ ನೀಡಿ ಬೀಳ್ಕೊಡಲಾಯಿತು.
ಬ್ಲಾಕ್ ಪಂಚಾಯತಿ ಉಪಾಧ್ಯಕ್ಷೆ ಮಮತಾ ದಿವಾಕರ್, ಸ್ಥಾಯೀ ಸಮಿತಿ ಅಧ್ಯಕ್ಷರುಗಳು, ಸದಸ್ಯರು, ಕಾಸರಗೋಡು ವಿಜಿಲೆನ್ಸ್ ಸಿ.ಐ. ಬಾಬು ಪೆರಿಞ್ತೋತ್, ಬ್ಲಾಕ್ ಪಂಚಾಯತಿ ಸಿಬ್ಬಂದಿಗಳು ಉಪಸ್ಥಿತರಿದ್ದು ಶುಭಹಾರೈಸಿದರು. ಮಹಿಳಾಭಿವೃದ್ದಿ ವಿಸ್ತರಣಾಧಿಕಾರಿ ಪ್ರಶಾಂತ್ ಕೆ.ಸ್ವಾಗತಿಸಿ, ಸಹಾಯಕ ಬಿಡಿಓ ರಿಜಿ ವಂದಿಸಿದರು.