ವಿಶ್ವ ಹೃದಯ ದಿನ ಆಚರಣೆ
ಮುಳ್ಳೇರಿಯ: ಹೃದಯ ಸಂಬಂಧಿ ಕಾಯಿಲೆಗಳಿರುವ ಜನರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸಣ್ಣ ಮಕ್ಕಳಿಂದ ಹಿಡಿದು ಯುವಕರು, ಹಿರಿಯರನ್ನು ಬಿಡದೆ ಈ ರೋಗವು ಕಾಡುತ್ತಿದೆ. ವ್ಯಾಯಾಮದ ಕೊರತೆ, ಆರೋಗ್ಯಕ್ಕೆ ಮಾರಕವಾಗಬಲ್ಲ ಜಂಕ್ ಫುಡ್, ಆಹಾರದಲ್ಲಿನ ಏರುಪೇರು ಇದಕ್ಕೆ ಮುಖ್ಯ ಕಾರಣ. ಆದುದರಿಂದ ಈ ಕುರಿತು ಜನರು ಜಾಗೃತರಾಗಬೇಕಿದೆ ಎಂದು ಮುಳಿಯಾರು ಗ್ರಾಮ ಪಂಚಾಯತಿ ಅಧ್ಯಕ್ಷ ಖಾಲಿದ್ ಬೆಳ್ಳಿಪ್ಪಾಡಿ ಅವರು ಹೇಳಿದರು.
ಅವರು ಬೋವಿಕ್ಕಾನದಲ್ಲಿ ವಿಶ್ವ ಹೃದಯ ದಿನದ ಅಂಗವಾಗಿ ಇತ್ತೀಚೆಗೆ ನಡೆದ ರ್ಯಾಲಿ ಹಾಗೂ ಮಾಹಿತಿ ತರಗತಿಯ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.
ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ದಿವಾಕರ ರೈ ಹೃದಯ ರೋಗದ ಕುರಿತು ಮಾಹಿತಿ ತರಗತಿಯನ್ನು ನಡೆಸಿ `ಪ್ರೊಜೆಕ್ಟ್ ಎವರಿಬಡೀಸ್ ಹಾಟರ್್' ಎಂಬ ಧ್ಯೇಯದೊಂದಿಗೆ ಈ ವರ್ಷ ವಿಶ್ವ ಹೃದಯ ದಿನವನ್ನು ಆಚರಿಸಲಾಗುತ್ತಿದೆ. ಹೃದಯ ರೋಗದ ಕುರಿತು ಜನಜಾಗೃತಿಯನ್ನು ಮೂಡಿಸುವ ಕೆಲಸವು ಎನ್.ಎಸ್.ಎಸ್. ವಿದ್ಯಾಥರ್ಿಗಳಿಂದ ಆಗಬೇಕಿದೆ ಎಂದು ಹೇಳಿದರು.
ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಗೀತಾ ಗೋವಿಂದನ್ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಗ್ರಾಮ ಪಂಚಾಯತಿ ಸ್ಥಾಯೀ ಸಮಿತಿ ಅಧ್ಯಕ್ಷ ಪ್ರಭಾಕರನ್, ಆರೋಗ್ಯಾಧಿಕಾರಿ ದಾಮೋದರನ್ ನಂಬಿಯಾರ್, ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿ ಪ್ರೀತಮ್ ಎ.ಕೆ., ಸಹಾಯಕ ಆರೋಗ್ಯಾಧಿಕಾರಿ ಅಬ್ದುಲ್ ರೆಹ್ಮಾನ್, ಲಕ್ಷ್ಮೀ, ಇಲಾಖಾಧಿಕಾರಿಗಳು, ಸಹಾಯಕರು ಉಪಸ್ಥಿತರಿದ್ದರು.