HEALTH TIPS

ಯಾವುದೇ ಶೀರ್ಷಿಕೆಯಿಲ್ಲ

               ಮುಂಗಾರು ಕ್ಷೀಣ, ಹಿಂಗಾರು ಮಳೆಯ ಕುರುಹಿಲ್ಲದೆ ಕಂಗಾಲಾದ ಭತ್ತ ಕೃಷಿಕರು
     ಉಪ್ಪಳ: ಜಿಲ್ಲೆಯ ಭತ್ತದ ಕಣಜ ಎಂದೇ ಹೆಸರುವಾಸಿಯಾಗಿರುವ ಮಂಜೇಶ್ವರ, ಕುಂಬಳೆ ಸಹಿತ ಹೊಸದುರ್ಗ ಪ್ರದೇಶದ ಭತ್ತ ಗದ್ದೆಗಳು ನೀರಿಲ್ಲದೆ ಸೊರಗಿವೆ. ಪ್ರಸ್ತುತ ವರ್ಷ ಜಿಲ್ಲೆಯಲ್ಲಿ ಮುಂಗಾರು ಕ್ಷೀಣಗೊಂಡ ಪರಿಣಾಮ ಜಿಲ್ಲೆಯ ಭತ್ತ ಬೇಸಾಯಕ್ಕೆ ತೊಡಕಾಗಿ ಪರಿಣಮಿಸಿದೆ. ಸ್ವಾಭಾವಿಕ ಜಲ ಮೂಲಗಳು ಮತ್ತು ಜಿಲ್ಲೆಯ ಪ್ರಮುಖ ನದಿ, ಹೊಳೆಗಳು ಬತ್ತುತ್ತಿರುವುದು ಕೃಷಿಕರ ಸಂಕಷ್ಟಕ್ಕೆ ಪ್ರಮುಖ ಕಾರಣವಾಗಿದೆ. ಮಂಜೇಶ್ವರದ ವಕರ್ಾಡಿ, ಮಜಿಬೈಲು, ಅರಿಬೈಲು ಸಹಿತ ಪೈವಳಿಕೆ ಗ್ರಾ.ಪಂ ಪ್ರದೇಶದ ಹಲವು ಭತ್ತ ಗದ್ದೆಗಳಿಗೆ ಹರಿಯುವ ಝರಿ ನೀರಿಲ್ಲದೆ ಪರಿಣಾಮ ಪಂಪ್ಗಳ ಮೂಲಕ ನೀರುಣಿಸಲಾಗುತ್ತಿದೆ. ರಾಜ್ಯ ಸರಕಾರ ಹಾಗೂ ಸ್ಥಳೀಯಾಡಳಿತಗಳು ಭತ್ತ ಕೃಷಿಗೆ ಹೆಚ್ಚಿನ ಒತ್ತು ನೀಡಿ ಕುಟುಂಬಶ್ರೀ ಸಂಘ ಸಂಸ್ಥೆಗಳ ಮೂಲಕ ಪಾಳು ಬಿದ್ದ ಗದ್ದೆಗಳಲ್ಲಿ ಭತ್ತ ಬೆಳೆಯುವ ಕಾಯಕವನ್ನು ಪ್ರೋತ್ಸಾಹಿಸಿದರೂ ನೀರಿನ ಕ್ಷಾಮ ಭತ್ತ ಕೃಷಿಗೆ ತೊಡಕಾಗಿದೆ. ಭತ್ತ ಬೆಳೆಯ ಕಾಲಾವಧಿ 3- 4 ತಿಂಗಳಾಗಿದ್ದು, ಪ್ರಸ್ತುತ ವರ್ಷ ಜೂನ್ ನಲ್ಲಿ ಕುಂಟಿತ ಮುಂಗಾರಿನ ಕಾರಣ ಜುಲೈ ತಿಂಗಳ ಕೊನೆಯ ವಾರ ಮತ್ತು ಆಗಸ್ಟ್ ತಿಂಗಳಲ್ಲಿ ನೇಜಿ ನಾಟಿ ಆರಂಭಿಸಲಾಗಿತ್ತು, ಬಾಯಾರು ಗ್ರಾಮದ ಹಲವೆಡೆ ಆಗಸ್ಟ್ ತಿಂಗಳ ಕೊನೆ ವಾರದಲ್ಲಿ ಭತ್ತ ಬೀಜ ಬಿತ್ತನೆಯನ್ನು ಆರಂಭಿಸಲಾಗಿದ್ದರ ಪರಿಣಾಮ ಹಲವು ಭತ್ತ ಗದ್ದೆಗಳು ಸೊರಗಿವೆ.
     ಹವಾಮಾನ ವೈಪರೀತ್ಯ ಭತ್ತ ಕೃಷಿಕರಲ್ಲಿ ಆತಂಕ:
  ದಶಕಗಳ ಹಿಂದೆ ಸಾಮಾನ್ಯವಾಗಿ ವರ್ಷಕ್ಕೆ ಎರಡು ಭತ್ತ ಬೆಳೆಯನ್ನು ಬೆಳೆಸಲಾಗುತ್ತಿತ್ತು, ಪ್ರಸ್ತುತ ಕಾಲಘಟ್ಟದಲ್ಲಿ ವರ್ಷಕ್ಕೆ ಒಂದು ಬೆಳೆಯನ್ನು ಬೆಳೆಸುವುದು ಕೃಷಿಕರಿಗೆ ಕಷ್ಟಸಾಧ್ಯವಾಗಿದೆ. ನುರಿತ ಕಾಮರ್ಿಕರ ಕೊರತೆ ಸಹಿತ ಸೀಮಿತ ಆಧುನಿಕ ನೇಜಿ ನಾಟಿ ಯಂತ್ರ ಮತ್ತು ಕಟಾವು ಯಂತ್ರಗಳಿರುವ ಕಾರಣ ಕೃಷಿಕರು ತೊಂದರೆ ಅನುಭವಿಸುವಂತಾಗಿದೆ. ಹವಾಮಾನ ವೈಪರೀತ್ಯವು ಭತ್ತ ಕೃಷಿಕರನ್ನು ಸಂಕಷ್ಟಕ್ಕೆ ದೂಡಿದ್ದು, ಹಲವೆಡೆ ನೀರುಣಿಸುವ ಪೂರಕ ಸೌಕರ್ಯವಿಲ್ಲದ ಕಾರಣ ಭತ್ತ ಕೃಷಿಕರು ಕಂಗಾಲಾಗಿದ್ದಾರೆ. ಕೆಲ ಭತ್ತ ಗದ್ದೆಗಳಲ್ಲಿ ಕಟಾವು ಆರಂಭಿಸಲಾಗಿದ್ದು ಅನಿಶ್ಚಿತ ಹಿಂಗಾರಿನ ಮಧ್ಯೆಯು ಎರಡನೇ ಬೆಳೆಗೆ ಸಿದ್ಧತೆ ನಡೆಸಲಾಗುತ್ತಿದೆ. ವಾಷರ್ಿಕ ಮಳೆ ಸರಾಸರಿ ಕಡಿಮೆಯಾದ ಕಾರಣ ಭತ್ತ ಕೃಷಿ ಕ್ಷೇತ್ರವು ವ್ಯತಿರಿಕ್ತ ಪರಿಣಾಮವನ್ನು ಎದುರಿಸುತ್ತಿದೆ.
    ಹಲವು ಗದ್ದೆಗಳು ಪಾಳು:
  ಮಂಗಲ್ಪಾಡಿ, ಮೀಂಜ, ಪೈವಳಿಕೆ, ಕನಿಯಾಲ, ಪುತ್ತಿಗೆ, ಬಂಬ್ರಾಣ, ಕುಂಬಳೆ, ಬದಿಯಡ್ಕ, ಬಂಗ್ರ ಮಂಜೇಶ್ವರ, ಪೆರ್ಲ, ಮಧೂರು ಪ್ರದೇಶಗಳಲ್ಲಿ ಅತಿ ಹೆಚ್ಚು ಭತ್ತ ಬೆಳೆಯುವ ಪ್ರದೇಶಗಳಾಗಿದ್ದು ಪ್ರಸ್ತುತ ಗದ್ದೆ ಬೇಸಾಯದಲ್ಲಿ ಆಥರ್ಿಕತೆ ಕುಗ್ಗಿದ್ದು ಸೂಕ್ತ ಮಾರುಕಟ್ಟೆ ಇಲ್ಲದ ಕಾರಣ ಭತ್ತ ಕೃಷಿಕರ ಕೆಲ ಭತ್ತ ಗದ್ದೆಗಳು ಗಿಡಗಂಟಿ ಬೆಳೆದು ಕಾಡಿನಂತಾಗಿವೆ.
        ಭತ್ತ ಕೃಷಿಕರ ಹಿತ ರಕ್ಷಣೆಯ ಕಾರ್ಯವಾಗಬೇಕಿದೆ:
    ರಾಜ್ಯ ಕೃಷಿ ಇಲಾಖೆ ಸಹಿತ ಸ್ಥಳೀಯಾಡಳಿತ, ಕೃಷಿ ಭವನಗಳ ಮೂಲಕ ಭತ್ತ ಕೃಷಿಕರ ಹಿತ ರಕ್ಷಣೆಯ ಕಾರ್ಯವಾಗಬೇಕಿದೆ. ಸೂಕ್ತ ಮಾರುಕಟ್ಟೆ ಒದಗಿಸಿ ಭತ್ತ ಕೃಷಿಯನ್ನು ಉತ್ತೇಜಿಸುವ ಕೆಲಸವಾಗಬೇಕು. ಪ್ರಸ್ತುತ ವರ್ಷದಲ್ಲಿ ನೀರಿಲ್ಲದೆ ಒಣಗಿರುವ ಭತ್ತ ಗದ್ದೆ ಮಾಲಕರಿಗೆ ಸೂಕ್ತ ನಷ್ಟ ಪರಿಹಾರವನ್ನು ಏರ್ಪಡಿಸುವ ಕೆಲಸವಾಗಬೇಕು. ಹೀಗಾದಲ್ಲಿ ಮಾತ್ರ ಮುಂಬರುವ ವರ್ಷಗಳಲ್ಲಿ ಹೆಚ್ಚಿನ ಆಸಕ್ತಿಯಿಂದ ಭತ್ತ ಕೃಷಿಕರು ಭತ್ತ ಕೃಷಿ ಕಾಯಕದಲ್ಲಿ ತೊಡಗಬಹುದು. ರಾಜ್ಯದ ಭತ್ತದ ಕಣಜವೆಂದೆ ಹೆಸರುವಾಸಿಯಾಗಿರುವ ಆಲಪ್ಪುಳ ಇಡುಕ್ಕಿ ಜಿಲ್ಲೆಯ ಕುಟ್ಟನಾಡಿನ ಭತ್ತ ಗದ್ದೆ ಕೃಷಿ ಅತಿವೃಷ್ಠಿಯಿಂದ ನಾಶವಾದರೆ, ಉತ್ತರದ ಕಾಸರಗೋಡು ಜಿಲ್ಲೆಯ ಹಲವು ಭತ್ತ ಗದ್ದೆಗಳು ಕುಂಟಿತ ಮುಂಗಾರಿನ ಪರಿಣಾಮ ನೀರಿಲ್ಲದ ಕಾರಣ ಬೆಳೆ ನಾಶಕ್ಕೆ ಕಾರಣವಾಗಿವೆ.
    

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries