ಆಯುಷ್ಮನ್ ಭಾರತ್ ಯೋಜನೆಯಡಿ ಎರಡನೇ ಬಾರಿ ಚಿಕಿತ್ಸೆ ಪಡೆಯಲು ಆಧಾರ್ ಕಡ್ಡಾಯ!
ನವದೆಹಲಿ: ಕೇಂದ್ರ ಸಕರ್ಾರ ಇತ್ತೀಚಿಗೆ ಅನುಷ್ಠಾನಗೊಳಿಸಿದ ಆಯುಷ್ಮನ್ ಭಾರತ್- ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆಯಡಿ ಮೊದಲ ಬಾರಿಗೆ ಚಿಕಿತ್ಸೆ ಪಡೆಯಲು ಆಧಾರ್ ಕಡ್ಡಾಯವೇನಿಲ್ಲ. ಆದರೆ, ಎರಡನೇ ಬಾರಿಗೆ ಚಿಕಿತ್ಸೆ ಪಡೆಯುವವರಿಗೆ ಆಧಾರ್ ಕಡ್ಡಾಯವಾಗಿರುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಒಂದು ವೇಳೆ ಆಧಾರ್ ಸಂಖ್ಯೆ ಇಲ್ಲದಿದ್ದರೆ, ಆಧಾರ್ ನೋಂದಣಿ ಮಾಡಿಸಿರುವ ಬಗ್ಗೆ ಸಂಬಂಧಿಸಿದ ದಾಖಲೆಗಳನ್ನು ಫಲಾನುಭವಿಗಳು ನೀಡಬೇಕಾಗುತ್ತದೆ ಎಂದು ಯೋಜನೆ ಅನುಷ್ಠಾನದ ಜವಾಬ್ದಾರಿ ಹೊತ್ತಿರುವ ರಾಷ್ಟ್ರೀಯ ಆರೋಗ್ಯ ಏಜೆನ್ಸಿಯ ಸಿಇಓ ಇಂದೂ ಭೂಷಣ್ ತಿಳಿಸಿದ್ದಾರೆ.
ಸುಪ್ರೀಂಕೋಟರ್್ ಆಧಾರ್ ಗೆ ಸಾಂವಿಧಾನಿಕ ಸ್ಥಾನಮಾನ ಕಲ್ಪಿಸಿದ ನಂತರ ಈ ನಿಧರ್ಾರ ಕೈಗೊಳ್ಳಲಾಗಿದೆ. ಮೊದಲ ಬಾರಿಗೆ ಚಿಕಿತ್ಸೆ ಪಡೆಯುವವರು ಆಧಾರ್ ಅಥವಾ ಮತದಾರರ ಗುರುತಿನ ಕಾಡರ್್ ಮತ್ತಿತರ ದಾಖಲೆಗಳನ್ನು ನೀಡಬಹುದು. ಆದರೆ, ಎರಡನೇ ಬಾರಿಗೆ ಚಿಕಿತ್ಸೆ ಪಡೆಯುವಂತಹವರು ಕಡ್ಡಾಯವಾಗಿ ಆಧಾರ್ ನೀಡಲೇಬೇಕಾಗುತ್ತದೆ. ಇಲ್ಲದಿದ್ದರೆ ಆಧಾರ್ ನೋಂದಣಿ ಮಾಡಿಸಿರುವ ಸಂಬಂಧ ದಾಖಲೆಗಳನ್ನು ಪುರಾವೆಯಾಗಿ ನೀಡಬೇಕಾಗುತ್ತದೆ ಎಂದು ಭೂಷಣ್ ಹೇಳಿದ್ದಾರೆ.
ಆಯುಷ್ಮನ್ ಭಾರತ- ರಾಷ್ಟ್ರೀಯ ಆರೋಗ್ಯ ಸಂರಕ್ಷಣಾ ಅಭಿಯಾನವನ್ನು ಆಯುಷ್ಮನ್ ಭಾರತ್- ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ ಎಂದು ಮರು ಹೆಸರು ನೀಡಿ ಸೆಪ್ಟೆಂಬರ್ 23 ರಂದು ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದರು.
ಈ ಯೋಜನೆಯಡಿ ಈವರೆಗೂ ಸುಮಾರು 47 ಸಾವಿರ ಜನರು ಅನುಕೂಲ ಪಡೆದುಕೊಂಡಿದ್ದು, 92 ಸಾವಿರ ಜನರಿಗೆ ಗೋಲ್ಡ್ ಕಾಡರ್್ ನೀಡಲಾಗಿದೆ ಎಂದು ಎನ್ ಹೆಚ್ ಎ ಉಪ ಸಿಇ ಓ ದಿನೇಶ್ ಅರೊರಾ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಕಾಂಕ್ಷೆಯ ಈ ಯೋಜನೆಯಡಿ ಪ್ರತಿ ಕುಟುಂಬಕ್ಕೆ ವಾಷರ್ಿಕವಾಗಿ 5 ಲಕ್ಷ ವಿಮೆ ಸೌಕರ್ಯ ಕಲ್ಪಿಸುವ ಗುರಿ ಹೊಂದಲಾಗಿದೆ. 10.74 ಕೋಟಿಗೂ ಹೆಚ್ಚು ಬಡ ಕುಟುಂಬಗಳು ದ್ವಿತೀಯ ಮತ್ತು ತೃತೀಯ ಹಂತದ ಆರೋಗ್ಯ ಸಂಬಂಧಿತ ಸೇವೆಗಳನ್ನು ಪಡೆಯಬಹುದಾಗಿದೆ.