HEALTH TIPS

ಯಾವುದೇ ಶೀರ್ಷಿಕೆಯಿಲ್ಲ

Top Post Ad

Click to join Samarasasudhi Official Whatsapp Group

Qries

Qries
           ಜಾಗತೀಕರಣದ ಪ್ರಭಾವ ಹೊಸತನದ ಸಾಹಿತ್ಯಕ್ಕೆ ನಾಂದಿ-ಡಾ.ರೋಹಿಣಾಕ್ಷ ಶಿಲರ್ಾಲು
    ಕುಂಬಳೆ: ಜಾಗತೀಕರಣ ಎಂಬುದು ಒಂದು ನಿದರ್ಿಷ್ಟ ನಿರ್ವಚನಕ್ಕೆ ಸಿಗದ ವ್ಯವಸ್ಥೆಯಾಗಿದೆ.ಅದರ ಫಲಿತಾಂಶ ಏನೆಂಬುದನ್ನು ಸರಳವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅರ್ಥ ಶಾಸ್ತ್ರಜ್ಞರು ಸಂಭ್ರಮದಿಂದ ಸ್ವಾಗತಿಸುವಾಗ ಸಾಹಿತಿಗಳು ಅದರ ಬಗೆಗೆ ಕಳವಳ ವ್ಯಕ್ತಪಡಿಸುತ್ತಾರೆ. ಈ ಕಳವಳ ಹಲವಾರು ಸಣ್ಣಕತೆ, ಕಾದಂಬರಿ,ಕವಿತೆಗಳ ಮೂಲಕ ಪಡಿಮೂಡುತ್ತಿದೆ. ಇದೇ ಜಾಗತೀಕರಣದ ಸಂದರ್ಭದಲ್ಲಿ ರಾಷ್ಟ್ರೀಯ ಮತ್ತು  ಸ್ಥಳೀಯ ಸಂಸ್ಕತಿಗಳ ಮೇಲೆಯೂ ಹೆಚ್ಚು ಕೆಲಸಗಳಾಗುತ್ತಿರುವುದನ್ನು ಗಮನಿಸಬಹುದು ಎಂದು ಪುತ್ತೂರು ವಿವೇಕಾನಂದ ಕಾಲೇಜಿನ ಕನ್ನಡ ಉಪನ್ಯಾಸಕ ಡಾ. ರೋಹಿಣಾಕ್ಷ ಶಿಲರ್ಾಲು ತಿಳಿಸಿದರು.
   ಅವರು ವಿದ್ಯಾನಗರ ಚಾಲದಲ್ಲಿರುವ ಕಣ್ಣೂರು ವಿಶ್ವ ವಿದ್ಯಾಲಯ ಭಾರತೀಯ ಭಾಷಾ ಅಧ್ಯಯನಾಂಗದ ಆಶ್ರಯದಲ್ಲಿ ಇತ್ತೀಚೆಗೆ ನಡೆದ ಅರಿವಿನ ಅಂಗಳ ಆರನೆಯ ಸರಣಿ ಕಾರ್ಯಕ್ರಮ ದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
  ವರ್ತಮಾನದ ಸಾಹಿತ್ಯಗಳು ವಿವಿಧ ನೆಲೆಗಳಲ್ಲಿ ಪ್ರತ್ಯೇಕವಾಗಿ ಕಂಡುಬರುವುದಾದರೂ ಭವಿಷ್ಯದಲ್ಲಿ ಭದ್ರವಾಗಿ ಮೂಲ ಸಾಹಿತ್ಯದಂತೆ ಗಟ್ಟಿಯಾಗಿ ನೆಲೆಗೊಳ್ಳಲು ಸಾಧ್ಯತೆಗಳಿವೆ ಎಂದು ತಿಳಿಸಿದ ಅವರು, ಹೊಸ ಆಶಯ, ಪರಿಕಲ್ಪನೆಗಳ ವಸ್ತುಗಳಿಂದ ಸಾಹಿತ್ಯ ಬೆಳೆದು ಬರಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
   ಜಾಗತೀಕರಣ ಸಂದರ್ಭದಲ್ಲಿ ಮಾನವೀಯ ಕತೆಗಳು ಎಂಬ ವಿಷಯದಲ್ಲಿ ಸೌಮ್ಯ ಪ್ರಸಾದ್ ಪ್ರಬಂಧ ಮಂಡಿಸಿದರು. ಸಂಶೋಧನಾ ಮಾರ್ಗದರ್ಶಕ ಡಾ. ರಾಧಾಕೃಷ್ಣ ಬೆಳ್ಳೂರು ಅತಿಥಿಗಳಾಗಿ ಉಪಸ್ಥಿತರಿದ್ದರು. ನಿದರ್ೇಶಕ ಡಾ.ರಾಜೇಶ್ ಬೆಜ್ಜಂಗಳ ಪ್ರಸ್ತಾವಿಕವಾಗಿ ಮಾತನಾಡಿ ಸರಣಿ ಕಾರ್ಯಕ್ರಮದ ಬಗ್ಗೆ ವಿವರಿಸಿದರು. ಎಂ.ಫಿಲ್ ವಿದ್ಯಾಥರ್ಿ ಪ್ರದೀಪ್ ಕುಮಾರ್ ಎಡನೀರು ಸ್ವಾಗತಿಸಿ, ಸಂಧ್ಯಾ ಕಲ್ಲಕಟ್ಟ ವಂದಿಸಿದರು. ಸುಜಿತ್ ಕುಮಾರ್ ಆಶಯಗೀತೆ ಹಾಡಿದರು. ಸೌಮ್ಯ ಬಾಕ್ರಬೈಲ್ ನಿರೂಪಿಸಿದರು.
  

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries