HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                   ನಾಳೆ ಸವಾಕ್ ನಿಂದ ಪ್ರತಿಭಟನೆ
    ಕುಂಬಳೆ: ರಾಜ್ಯದ ಪ್ರವಾಹ ಮತ್ತು ಆ ಬಳಿಕ ಸರಕಾರ ಕೈಗೊಂಡ ನಿಧರ್ಾರಗಳನ್ನು ಪುನರ್ ಪರಿಶೀಲಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿ ಸ್ಟೇಜ್ ಆಟರ್ಿಸ್ಟ್ ಆಂಡ್ ವರ್ಕಸರ್್ ಅಸೋಸಿಯೇಶನ್ ಕೇರಳ(ಸವಾಕ್) ನೇತೃತ್ವದಲ್ಲಿ ನಾಳೆ(ಗುರುವಾರ) ರಾಜ್ಯಾದ್ಯಂತ ಜಿಲ್ಲಾ ಆಡಳಿತ ಕೇಂದ್ರಗಳಿಗೆ ಪ್ರತಿಭಟನಾ ಮೆರವಣಿಗೆ ಮತ್ತು ಧರಣಿ ನಡೆಯಲಿದೆ.
   ಜಿಲ್ಲಾ ಸವಾಕ್ ಸಮಿತಿ ನೇತೃತ್ವದಲ್ಲಿ ಇಂದು ಬೆಳಿಗ್ಗೆ 10 ಗಂಟೆಗೆ ಕಾಸರಗೋಡು ಜಿಲ್ಲಾಧಿಕಾರಿಗಳ ಕಚೇರಿ ಮಾಚರ್್ನ್ನು ಪ್ರಸಿದ್ದ ಚಲನಚಿತ್ರ ಹಿನ್ನೆಲೆ ಗಾಯಕ ರಾಮಚಂದ್ರ ಕಾಂಞಿಂಗಾಡ್ ಉದ್ಘಾಟಿಸುವರು. ಸವಾಕ್ ಜಿಲ್ಲಾಧ್ಯಕ್ಷ ಎಂ.ಉಮೇಶ್ ಸಾಲ್ಯಾನ್ ಅಧ್ಯಕ್ಷತೆ ವಹಿಸುವರು. ರಾಜ್ಯ ಘಟಕದ ಕಾರ್ಯದಶರ್ಿ ನ್ಯಾಯವಾದಿ ಪಿ.ಪಿ.ವಿಜಯನ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಸವಾಕ್ ಜಿಲ್ಲಾ ಘಟಕದ ಹಿರಿಯ ಸದಸ್ಯರಾದ ವಿದ್ವಾನ್ ಬಾಬು ರೈ, ಡಾ.ಉಸ್ತಾದ್ ಹಸನ್ ಬಾಯಿ ಮೊದಲಾದವರು ಪಾಲ್ಗೊಳ್ಳುವರು. ವಿವಿಧ ಬ್ಲಾಕ್ ಘಟಕಗಳ ಮುಖಂಡರಾದ ಸನ್ನಿ ಅಗಸ್ಟಿನ್, ಗೋವಿಂದ ಬಳ್ಳಮೂಲೆ, ಬಾಲರಾಜ್ ಬೇಡಗಂ, ದಿವಾಣ ಶಿವಶಂಕರ ಭಟ್, ವೇಣುಗೋಪಾಲ ಶೇಣಿ, ಭಾರತೀ ಬಾಬು, ಮೋಹಿನಿ ಕಾರಡ್ಕ, ಚಂದ್ರಹಾಸ ಕಯ್ಯಾರು, ಗೋವಿಂದ ಮಾರಾರ್, ಪ್ರಮೋದ್ ಪಣಿಕ್ಕರ್, ಮಧುಸೂದನ ಬಲ್ಲಾಳ್, ಸುರೇಶ್ ಬೇಕಲ್, ಸುಂದರ ಮವ್ವಾರು, ಜಯಶ್ರೀ ಕಾರಡ್ಕ, ಜಯಂತಿ ಸುವರ್ಣ, ಸುಶ್ಮಿತಾ ಆರ್ ಮೊದಲಾದವರು ನೇತೃತ್ವವಹಿಸುವರು. 
   ರಾಜ್ಯದ ಪ್ರವಾವದ ಹಿನ್ನೆಲೆಯನ್ನು ಗುರಿಯಾಗಿರಿಸಿ ಸರಕಾರವು ಶಾಲಾ ಕಲೋತ್ಸವಗಳ ಸಹಿತ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳನ್ನು ನಿರ್ಬಂಧಿಸಲು ಯತ್ನಿಸುತ್ತಿದೆ. ಇದು ಸಾವಿರಾರು ಕಲಾವಿದರು ಮತ್ತು ಕಲಾ ವಿದ್ಯಾಥರ್ಿಗಳ ಭವಿಷ್ಯದ ಮೇಲೆ ತೀವ್ರ ಪರಿಣಾಮ ಬೀರುವ ಭೀತಿ ಎದುರಾಗಿದೆ. ರಾಜ್ಯ ಸಂಗೀತ ನಾಟಕ ಅಕಾಡೆಮಿ ಮತ್ತು ಜಾನಪದ ಅಕಾಡೆಮಿಗಳಂತಹ ಎಲ್ಲಾ ಅಂಗೀಕೃತ ಸಂಸ್ಥೆಗಳಿಗೆ ಪ್ರತಿವರ್ಷ ಕನಿಷ್ಠ 25 ಕಾರ್ಯಕ್ರಮಗಳನ್ನು ನೀಡಲು ಸರಕಾರ ಮುಂದೆಬರಬೇಕು,, ಕ್ಷೇಮನಿಧಿಯಲ್ಲಿ 60 ವರ್ಷ ಕಳೆದ ಕಲಾವಿದರಿಗೆ ಸದಸ್ಯತನ ನೀಡಬೇಕು, ಕಲಾವಿದರ ಕ್ಷೇಮಕ್ಕಾಗಿ ಪ್ರತ್ಯೇಕ ಆಯೋಗ ರಚಿಸಬೇಕು, ಕೇರಳ ಸಂಸ್ಕೃತಿ ಇಲಾಖೆಯಲ್ಲಿ ಯಕ್ಷಗಾನ ಕಲೆಯನ್ನು ಯಕ್ಷಗಾನ ಎಂದೇ ನೋಂದಾವಣೆ ಮಾಡಬೇಕು ಮೊದಲಾದ ಬೇಡಿಕೆ ಮುಂದಿರಿಸಿ ಪ್ರತಿಭಟನಾ ಜಾಥಾ ಮತ್ತು ಜಿಲ್ಲಾಧಿಕಾರಿ ಕಚೇರಿಗೆ ಮಾಚರ್್ ಆಯೋಜಿಸಲಾಗಿದೆ. ಬೆಳಿಗ್ಗೆ 9.30 ಕ್ಕೆ ಕಾಸರಗೋಡು ಸರಕಾರಿ ಕಾಲೇಜು ಪರಿಸರದಿಂದ ಕಲಾಜಾಥಾ ನಡೆಯಲಿದೆ ಎಂದು ಸಂಬಂಧಪಟ್ಟವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries