ಕ್ರಿಯೆಟಿವಿಟಿಗೆ ಹೆಸರಾದ ಬದಿಯಡ್ಕದ ಕ್ರಿಯೇಟಿವ್ ಕಾಲೇಜು!
ಬದಿಯಡ್ಕ : ವಿದ್ಯಾಥರ್ಿಗಳಿಗೆ ಚಟುವಟಿಕೆಗಳ ಮೂಲಕ ಸಮಾಜದ ಅಭಿವೃದ್ಧಿಯ ಅಗತ್ಯ ಹಾಗೂ ಮಹತ್ವವನ್ನು ಹಾಗೂ ಸಂಸ್ಕೃತಿ, ಆಚಾರ ವಿಚಾರಗಳ ಕುರಿತಾದ ಸಂದೇಶಗಳನ್ನು ಮತ್ತು ಜೀವನದ ಮೌಲ್ಯಗಳನ್ನು ತೋರುವ ಬದಿಯಡ್ಕದ ಕ್ರಿಯೆಟಿವ್ ಕಾಲೇಜು ಪೇಟೆಯ ಬೀದಿಬೀದಿಗಳನ್ನು ಸಂದಶರ್ಿಸಿ ಸ್ವಚ್ಛಗೊಳಿಸುವ ಮೂಲಕ ಮಾದರಿಯಾಗಿದೆ. ನಾಳೆಯ ಭವ್ಯ ಭಾರತದ ಪ್ರಜೆಗಳಾದ ಯುವಮನಸುಗಳು ಜತೆ ಸೇರಿ ಕಾಲೇಜಿನ ಸ್ವಚ್ಛತಾ ಅಂದೋಲನಕ್ಕೆ ಶಕ್ತಿ ತುಂಬಿದ್ದಾರೆ. ಎಲ್ಲೆಂದರಲ್ಲಿ ಜನರು ಅನಾಸ್ಥೆಯಿಂದ ಎಸೆಯುವ ಪ್ಲಾಸ್ಟಿಕ್ ಚೀಲಗಳಿಂದ ಭೂಮಿಯ ಮೇಲೆ ಉಂಟಾಗುವ ಸಮಸ್ಯೆಗಳನ್ನು ಪರಿಹರಿಸಲು ಮಾಡುವ ಪುಟ್ಟ ಪ್ರಯತ್ನವೂ ಕೂಡ ದೊಡ್ಡ ಕಾರ್ಯವೇ ಆಗಿದೆ. ಅತ್ಯಂತ ಉತ್ಸಾಹದಿಂದ, ಮುಕ್ತ ಮನಸ್ಸಿನಿಂದ ವಿದ್ಯಾಥರ್ಿಗಳನ್ನು ನಾಲ್ಕು ಗುಂಪುಗಳಾಗಿ ವಿಂಗಡಿಸಿ ಬದಿಯಡ್ಕ ಪೇಟೆಯ ನಾಲ್ಕೂ ದಿಕ್ಕಿನಲ್ಲೂ ಸ್ವಚ್ಛತಾ ಕಾರ್ಯವನ್ನು ಮಾಡಲಾಯಿತು. ಪ್ಲಾಸ್ಟಿಕ್ ಚೀಲಗಳು, ಬಾಟಲಿಗಳು ಹಾಗೂ ಇನ್ನಿತರ ವಸ್ತುಗಳನ್ನು ಸಂಗ್ರಹಿಸಿ ಸರಿಯಾದ ರೀತಿಯಲ್ಲಿ ಸಂಸ್ಕರಣ ಮಾಡಿ ಒಂದು ಗ್ರಾಮದ ಸಂರಕ್ಷಣೆಗೆ ಕಾರಣವಾಗಿದ್ದಾರೆ. ವಿದ್ಯಾಥರ್ಿಗಳ ಉತ್ಸಾಹ ಹಾಗೂ ಗುರುಗಳ ಪ್ರೋತ್ಸಾಹ ಜತೆ ಸೇರಿದಾಗ ಪ್ರ`ಾನಿ ನರೇಂದ್ರ ಮೋದಿಯವರ ಸ್ವಚ್ಛತಾ ಹೆ ಭಾರತ್ ಎಂಬ ಆಂದೋಲನಕ್ಕೆ ನಿಜವಾದ ಬೆಂಬಲ ನೀಡಿದಂತಾಯಿತು. ಇದೊಂದು ಮಾದರಿ ಕೆಲಸ. ಪುಟ್ಟ ಕಾಲೇಜೊಂದು ಒಂದು ಗ್ರಾಮದ ಸ್ವಚ್ಛತೆಯನ್ನು ಕೈಗೆತ್ತಿಕೊಂಡು ಸಮಾಜದ ಹಿತದೃಷ್ಟಿಯಿಂದ ಕಾರ್ಯನಿರ್ವಹಿಸುತ್ತದೆ ಎಂದಾದರೆ ನಮ್ಮ ದೇಶದಲ್ಲಿರುವ ಲಕ್ಷಾಂತರ ಶಾಲಾ ಕಾಲೇಜುಗಳಲ್ಲಿ ಈ ಅಭಿಯಾನವನ್ನು ಮುಂದುವರೆಸಿದರೆ, ಸ್ವ ಮನಸ್ಸಿನಿಂದ ರಂಗಕ್ಕಿಳಿದರೆ ಸ್ವಚ್ಛ ಭಾರತದ ಕನಸು ದೂರವಿಲ್ಲ.
ಹತ್ತು ಹಲವು ಚಟುವಟಿಕೆಗಳ ಮೂಲಕ ಈಗಾಗಲೇ ಶಿಕ್ಷಣ ರಂಗದಲ್ಲಿ ಹೆಜ್ಜೆಯಿಡುತ್ತಿರುವ ಕ್ರಿಯೇಟಿವ್ ಕಾಲೇಜು ಸಾಹಿತ್ಯ, ಸಾಂಸ್ಕೃತಿಕ, ಕ್ರೀಡೆ ಸಮಾಜ ಸೇವೆ ಮೊದಲಾದ ಅನೇಕ ರೀತಿಯ ಚಟುವಟಿಕೆಗಳನ್ನು ಒಳಗೊಂಡ ವಿದ್ಯಾಭ್ಯಾಸ ಯೋಜನೆಯನ್ನು ಅಳವಡಿಸಿಕೊಂಡು ಮಕ್ಕಳಲ್ಲಿ ವಿದ್ಯೆಯೊಂದಿಗೆ ಸುಸಂಸ್ಕೃತ ಬದುಕಿನ ಪಾಠವನ್ನೂ ಕಲಿಸುತ್ತಾ ಬರುತ್ತಿರುವುದು ಗಮನೀಯ. ಅದಕ್ಕೆ ಪೂರಕವಾಗಿ ಕೇರಳ ಪ್ರಳಯ ಸಂತ್ರಸ್ತರಿಗೆ ನೆರವಾಗುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಪರಿಹಾರ ನಿಗೆ 60,000 ರೂ.ಗಳ ಮೊತ್ತವನ್ನು ಸಂಗ್ರಹಿಸಿ ನೀಡಿರುತ್ತಾರೆ. ಹಾಗೆಯೇ ಕಾಲೇಜಿನಲ್ಲಿ ಇಟ್ಟಿರುವ ಸಹಾಯ ನಿಗೆ ವಿದ್ಯಾಥರ್ಿಗಳು ಒಂದು ರೂ. ನಾಣ್ಯವನ್ನ ಷ್ಟೇ ಹಾಕಿ ನೊಂದವರ ಅಗತ್ಯಗಳಿಗೆ ನೆರವಾಗಲು ಕೈ ಜೋಡಿಸಬಹುದಾದ ಕೆಲಸವನ್ನು ಮಾಡಲಾಗುತ್ತದೆ.
ಸ್ವಚ್ಛತೆ ಮನೆಯಿಂದ ಪ್ರಾರಂಭವಾಗುವ ಪ್ರಕ್ರಿಯೆ. ಮನೆಯಲ್ಲಿ ಸ್ವಚ್ಛತೆಯ ಪಾಠವನ್ನು ನೋಡಿ, ಮಾಡಿ ಕಲಿಯುವ ಮಕ್ಕಳ ಮನದಲ್ಲಿ ನಮ್ಮ ಪರಿಸರ ಸ್ವಚತೆಯ ಕುರಿತಾದ ಅರಿವು ಇದ್ದೇ ಇರುತ್ತದೆ. ಆದರೆ ಅದನ್ನು ಪ್ರೋತ್ಸಾಹಿಸುವ ಹಾಗೂ ಜತೆಯಾಗಿ ಆ ಆಂದೋಲನದಲ್ಲಿ ಭಾಗಿಗಳಾಗುವ ಅವಕಾಶವನ್ನು ಮಾಡಿ ಕೊಟ್ಟಾಗ ಆಸಕ್ತಿಯಿಂದ ದೇಶಕ್ಕಾಗಿ ದುಡಿಯಲು ಮುಂದಾಗುತ್ತಾರೆ. ಆದುದರಿಂದಲೇ ನಾವು ಇಂದು ಈ ಕಾರ್ಯಕ್ಕೆ ಮುಂದಾಗಿದ್ದೇವೆ. ನಮ್ಮೂರ ಸ್ವಚ್ಛತೆ ನಮ್ಮ ಕರ್ತವ್ಯ. ಪುಸ್ತಕದಿಂದ ಮಾತ್ರ ಕಲಿಯುವುದಲ್ಲ. ನಾವು ನೋಡಿ ಮಾಡಿ ಕಲಿಯುವ ಪ್ರತಿಯೊಂದು ಕೆಲಸವೂ ಜೀವನದಲ್ಲಿ ಮಹತ್ತರವಾದ ಪ್ರಜ್ಞೆ ಯನ್ನು ತುಂಬುತ್ತದೆ.
ಗುರುವಾರ ನಡೆದ ಸ್ವಚ್ಛತಾ ಕಾರ್ಯಕ್ರಮವನ್ನು ಬದಿಯಡ್ಕ ಗ್ರಾ.ಪಂ. ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಉದ್ಘಾಟಿಸಿದರು. ಸ್ಥಾಯಿ ಸಮಿತಿ ಅಧ್ಯಕ್ಷ ಶ್ಯಾಮ ಪ್ರಸಾದ್ ಮಾನ್ಯ , ಪಂ. ಸದಸ್ಯರಾದ ಬಾಲಕೃಷ್ಣ ಶೆಟ್ಟಿ , ವಿಶ್ವನಾಥ ಪ್ರಭು, ಎಲ್ಎನ್ ಪೈ, ಆರೋಗ್ಯಾಧಿಕಾರಿ ಲೋಹಿತಾಕ್ಷನ್, ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಅಧ್ಯಕ್ಷ ಎಸ್ಎನ್ ಮಯ್ಯ, ಕಾಲೇಜು ಪ್ರಾಂಶುಪಾಲ ಶಿವದಾಸ್, ನಿದರ್ೇಶಕರಾದ ರಂಗಶರ್ಮ ಉಪ್ಪಂಗಳ, ಗಡಿನಾಡ ಸಾಹಿತ್ಯ ಸಾಂಕೃತಿಕ ಅಕಾಡೆಮಿಯ ಕಾರ್ಯದಶರ್ಿ ಅಖಿಲೇಶ್ ನಗುಮುಗಂ ಮುಂತಾದವರು ಶುಭಾಶಂಸನೆಗೈದರು. ಶಾಲೆಯ ಅಧ್ಯಾಪಕ ವೃಂದದವರು, ವಿದ್ಯಾಥರ್ಿಗಳು ಉಪಸ್ಥಿತರಿದ್ದರು. ಬದಿಯಡ್ಕದ ವಾಹನ ಚಾಲಕರು ಮತ್ತು ಅಗ್ನಿ ಫ್ರೆಂಡ್ಸ್ ಬದಿಯಡ್ಕ ಮಕ್ಕಳಿಗೆ ಮಜ್ಜಿಗೆ ನೀರು ಕೊಟ್ಟು ಸಹಕರಿಸಿದರು.