ಶಬರಿಮಲೆ ಸ್ತ್ರೀ ಪ್ರವೇಶ ಹಿಂದೂ ನಂಬಿಕೆಗೆ ಬಗೆದ ದ್ರೋಹ: ಕುಮಾರಿ ಚೈತ್ರಾ ಕುಂದಾಪುರ
ಮಂಜೇಶ್ವರ: ವಿಶ್ವಹಿಂದೂ ಪರಿಷತ್ ಮೀಂಜ ಪಂಚಾಯತಿ ಘಟಕ ಹಾಗೂ ಅಯ್ಯಪ್ಪ ಸೇವಾ ಸಮಿತಿ ಮೀಯಪದವು ಇದರ ಆಶ್ರಯದಲ್ಲಿ ಬೃಹತ್ ಪ್ರತಿಭಟನೆ ಭಾನುವಾರ ಮೀಯಪದವಿನಲ್ಲಿ ನಡೆಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಚೈತ್ರಾ ಕುಂದಾಪುರ ಅವರು ಹಿಂದೂ ಧರ್ಮ ಸಮಾನತೆಯನ್ನು ಬೋಧಿಸಿದ ಧರ್ಮ, ಸ್ತ್ರೀಯರಿಗೆ ಮಾತೃ ಸ್ಥಾನವನ್ನು ನೀಡಿ ಗೌರವಿಸಿದೆ. ಆದರೆ ಶಬರಿಮಲೆಗೆ ಸ್ತ್ರೀ ಪ್ರವೇಶ ಶಬರಿಮಲೆಯ ವೃತ ನಿಷ್ಠೆಗೆ ತೋರಿದ ಅಗೌರವ ಎಂದರು.
ಮೀಯಪದವಿನ ಹೃದಯ ಭಾಗದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಮೀಯಪದವು ಅಯ್ಯಪ್ಪ ಭಜನಾ ಮಂದಿರದ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಪಳ್ಳತಡ್ಕ ವಿಹಿಂಪ ಮೀಂಜ ಮಂಡಲ ಉಪಾಧ್ಯಕ್ಷ ವಸಂತ ಭಟ್ ತೊಟ್ಟೆತ್ತೋಡಿಯವರಿಗೆ ಧ್ವಜವನ್ನು ಹಸ್ತಾಂತರಿಸಿದುವುದರ ಮೂಲಕ ಪ್ರತಿಭಟನಾ ಮೆರವಣಿಗೆ ಚಾಲನೆ ನೀಡಿದರು. ಮೆರವಣಿಗೆಯಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಸ್ತ್ರೀ ಪರುಷರು ಭಾಗವಹಿಸಿದರು. ಸದಾನಂದ ಶೆಟ್ಟಿ ಸ್ವಾಗತಿಸಿ, ಚಂದ್ರಹಾಸ ಶೆಟ್ಟಿ ಬೆಜ್ಜ ವಂದಿಸಿದರು. ಹರೀಶ ಮೀಯಪದವು ನಿರೂಪಿಸಿದರು.