HEALTH TIPS

ಯಾವುದೇ ಶೀರ್ಷಿಕೆಯಿಲ್ಲ

       ಸವಾಕ್ ನಿಂದ ಪ್ರತಿಭಟನೆ- ನವ ಕೇರಳ ನಿಮರ್ಾಣ ತಳಹದಿಗೆ ಕಲಾವಿದರ ಕೊಡುಗೆ ಅಗತ್ಯ-ಕಾಂಞಿಂಗಾಡ್ ರಾಮಚಂದ್ರನ್
  ಕಾಸರಗೋಡು: ಸಮಾಜದ ಸಮಗ್ರ ಅಭಿವೃದ್ದಿಯ ಹಿಂದೆ ಕಲೆ, ಕಲಾವಿದರ ಪಾತ್ರ ಮಹತ್ತರವಾದುದು. ಆರೋಗ್ಯಪೂರ್ಣ, ಕ್ರಿಯಾತ್ಮಕ ಸಾಮಾಜಿಕ ಚಳವಳಿಗೆಗಳಿಗೆ ಪ್ರೇರಣೆ ನೀಡಿದ ಕಲಾವಿದರ ಅವಗಣನೆ ಸಹೃದಯ ಸಮಾಜದ ಕಪ್ಪುಚುಕ್ಕೆ. ರಾಜ್ಯದ ಅತಿವೃಷ್ಠಿ ಹಾಗೂ ಅನಾವೃಷ್ಠಿಯ ವರ್ತಮಾನದ ಸ್ಥಿತಿಗತಿಗಳಲ್ಲಿ ಜನರನ್ನು ದೃತಿಗೆಡದಂತೆ ಮುನ್ನಡೆಸುವಲ್ಲಿ ಕಲಾವಿದರುಗಳು ತೋರ್ಪಡಿಸಿದ ಶಕ್ತಿಯನ್ನು ರಾಷ್ಟ್ರವೇ ಗುರುತಿಸಿದೆ ಎಂದು ಪ್ರಸಿದ್ದ ಚಲನಚಿತ್ರ ಹಿನ್ನೆಲೆ ಗಾಯಕ ಕಾಂಞಿಂಗಾಡ್ ರಾಮಚಂದ್ರನ್ ತಿಳಿಸಿದರು.
   ರಾಜ್ಯದ ನೆರೆ ಮತ್ತು ಪ್ರಕೃತಿ ವಿಕೋಪದ ಹಿನ್ನೆಲೆಯಲ್ಲಿ ಸರಕಾರವು ವಿವಿಧ ಉತ್ಸವಾಚರಣೆಗಳನ್ನು ನಿರ್ಬಂಧಿಸಿರುವುದು ಮತ್ತು ಇತರ ಬೇಡಿಕೆಗಳನ್ನು ಮುಂದಿರಿಸಿ ಸ್ಟೇಜ್ ಆಟರ್ಿಸ್ಟ್ ಆಂಡ್ ವರ್ಕಸರ್್ ಅಸೋಸಿಯೇಶನ್ ಕೇರಳ(ಸವಾಕ್) ರಾಜ್ಯಾದ್ಯಂತ ಗುರುವಾರ ಹಮ್ಮಿಕೊಂಡ ಜಿಲ್ಲಾಧಿಕಾರಿ ಕಚೇರಿಗಳಿಗೆ ಪ್ರತಿಭಟನಾ ಜಾಥದ ಅಂಗವಾಗಿ ಕಾಸರಗೋಡು ಜಿಲ್ಲಾ ಸವಾಕ್ ಸಮಿತಿ ನೇತೃತ್ವದಲ್ಲಿ ವಿದ್ಯಾನಗರದಲ್ಲಿ ನಡೆಸಿದ ಪ್ರತಿಭಟನೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
  ಪ್ರಾಕೃತಿಕ ವಿಕೋಪಗಳಂತಹ ದುರಂತಗಳು ಸಂಸ್ಕೃತಿಯನ್ನು ತಿರಸ್ಕೃರಿಸುವ ಸಂದರ್ಭವಾಗಿ ಬಳಸಿಕೊಳ್ಳುವುದು ಸರಿಯಲ್ಲ. ಸಾಂಸ್ಕೃತಿಕತೆ, ಕಲಾಪೋಷಣೆಯ ಹಿನ್ನಡೆಗಳು ಸಾಮಾಜಿಕ ವಿಘಟಣೆ ಮತ್ತು ಏಕತೆಯ ಪ್ರಜ್ಞೆಗಳನ್ನು ನಾಶಗೊಳಿಸಿ ಅಸಂಸ್ಕೃತ ಅನಾಗರಿಕ ಸಮಾಜದೆಡೆಗೆ ನೂಕಲಿದೆ ಎಂಬುದನ್ನು ಸರಕಾರ ಅಥರ್ೈಸಬೇಕು ಎಂದು ಅವರು ಎಚ್ಚರಿಸಿದರು. ವಿದ್ಯಾಥರ್ಿ ಕಲೋತ್ಸವಗಳಿಂದ ನೂರಾರು ಪ್ರತಿಭಾವಂತ ಯುವ ಸಮೂಹ ಮುನ್ನೆಲೆಗೆ ಬರುವಲ್ಲಿ ಸಹಕರಿಸುತ್ತದೆ. ಅಂತಹ ಪ್ರವಾಹವೊಂದನ್ನು ತಡೆದು ನಿಲ್ಲಿಸುವುದು ಅಪಾಯಕಾರಿ ಮತ್ತು ಹಕ್ಕಿನ ಕಸಿಯುವಿಕೆ ಎಂದು ಅವರು ಈ ಸಂದರ್ಭ ತಿಳಿಸಿದರು.
  ಸವಾಕ್ ಜಿಲ್ಲಾಧ್ಯಕ್ಷ ಎಂ.ಉಮೇಶ್ ಸಾಲ್ಯಾನ್ ಕಾಸರಗೋಡು ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲೆಯ ಎಲ್ಲಾ ವಿಭಾಗಗಳ ಕಲಾವಿದರನ್ನು ಒಗ್ಗೂಡಿಸುವಲ್ಲಿ ಸವಾಕ್ ನಿರಂತರ ಕಾರ್ಯವೆಸಗುತ್ತಿದೆ. ಜಿಲ್ಲೆಯ ಹಿರಿಯ ಕಲಾವಿದರುಗಳಲ್ಲಿ ಹಲವರಿಗೆ ಕ್ಷೇಮ ನಿಧಿ, ಪಿಂಚಣಿಗಳಂತಹ ಸೌಲಭ್ಯಗಳನ್ನು ನೀಡಲು ಸಂಘಟನಾತ್ಮಕವಾಗಿ ಸಾಧ್ಯವಾಗಿದೆ ಎಂದು ತಿಳಿಸಿದರು. ಕರಾವಳಿಯ ಹೆಮ್ಮೆಯ ಕಲೆಯಾದ ಯಕ್ಷಗಾನವನ್ನು ರಾಜ್ಯ ಸಂಸ್ಕೃತಿಯ ಇಲಾಖೆಯಲ್ಲಿ ಯಕ್ಷಗಾನವೆಂದೇ ನೋಂದಾಯಿಸುವ ನಿಟ್ಟಿನಲ್ಲಿ ಅಹನರ್ಿಶಿ ಪ್ರಯತ್ನಿಸಲಾಗುತ್ತಿದ್ದು, ಸರಕಾರ ಶೀಘ್ರ ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಜೊತೆಗೆ ಸಂಗೀತ, ನಾಟಕ ಅಕಾಡೆಮಿಗಳ ಮೂಲಕ ಅಂಗೀಕೃತ ಸಾಂಸ್ಕೃತಿಕ ಸಂಘಟನೆಗಳಿಗೆ ವರ್ಷದಲ್ಲಿ ಕನಿಷ್ಠ 25 ಕಾರ್ಯಕ್ರಮಗಳನ್ನು ನೀಡುವಲ್ಲಿ ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
    ಸವಾಕ್ ರಾಜ್ಯ ಕಾರ್ಯದಶರ್ಿ ನ್ಯಾಯವಾದಿ ಪಿ.ಪಿ.ವಿಜಯನ್ ಮುಖ್ಯ ಭಾಷಣಗೈದು ಮಾತನಾಡಿ, ವಿವಿಧ ಕಾರಣಗಳನ್ನು ನೀಡಿ ಕಲೆ-ಕಲಾವಿದರನ್ನು ಅವಗಣಿಸುವ ಹುನ್ನಾರದ ವಿರುದ್ದ ಜಾಗೃತರಾಗಬೇಕಾದ ಅಗತ್ಯವಿದೆ ಎಂದು ತಿಳಿಸಿದರು.
  ಹಿರಿಯ ಮೃದಂಗ ವಿದ್ವಾನ್ ಕೆ.ಬಾಬು ರೈ, ಗಝಲ್ ಕಲಾವಿದ ಡಾ.ಉಸ್ತಾದ್  ಹಸನ್ ಬಾಯಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದರು. ಸವಾಕ್ ಜಿಲ್ಲಾ ಮತ್ತು ಬ್ಲಾಕ್ ಮುಖಂಡರಾದ ಸನ್ನಿ ಅಗಸ್ಟಿನ್, ಗೋವಿಂದ ಬಳ್ಳಮೂಲೆ, ಬಾಲರಾಜ್ ಬೇಡಗಂ, ದಿವಾಣ ಶಿವಶಂಕರ ಭಟ್, ವೇಣುಗೋಪಾಲ ಶೇಣಿ, ಭಾರತಿಬಾಬು ಕಾಸರಗೋಡು, ಮೋಹಿನಿ ಕಾರಡ್ಕ, ಚಂದ್ರಹಾಸ ರೈ ಕಯ್ಯಾರು, ಗೋವಿಂದ ಮಾರಾರ್, ಪ್ರಮೋದ್ ಪಣಿಕ್ಕರ್ ಜೋಡುಕಲ್ಲು, ಮಧುಸೂದನ ಬಲ್ಲಾಳ್ ನಾಟೆಕಲ್ಲು, ಸುರೇಶ್ ಬೇಕಲ್, ಸುಂದರ ಮವ್ವಾರು, ಜಯಶ್ರೀ ಕಾರಡ್ಕ, ಜಯಂತಿ ಸುವರ್ಣ, ಸುಸ್ಮಿತಾ ಆರ್.ಕುಂಬಳೆ ಮೊದಲಾದವರು ಉಪಸ್ಥಿತರಿದ್ದರು.
    ಈ ಸಂದರ್ಭ ಸವಾಕ್ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.ಸವಾಕ್ ಜಿಲ್ಲಾ ಕಾರ್ಯದಶರ್ಿ ಸನ್ನಿ ಅಗಸ್ಟಿನ್ ಸ್ವಾಗತಿಸಿ, ವೇಣುಗೋಪಾಲ ಶೇಣಿ ವಂದಿಸಿದರು.ಪ್ರತಿಭಟನಾ ಸಭೆಗೂ ಮೊದಲು ಕಾಸರಗೋಡು ಸರಕಾರಿ ಕಾಲೇಜು ಪರಿಸರದಿಂದ ಕಲೆಕ್ಟರೇಟ್ ಪರಿಸರಕ್ಕೆ ಬೃಹತ್ ಕಲಾಜಾಥ ನಡೆಯಿತು. ಜಿಲ್ಲೆಯ ಉದ್ದಗಲದಿಂದ ಆಗಮಿಸಿದ ವಿವಿಧ ಕಲಾವಿದರು, ಕಲಾಕ್ಷೇತ್ರದ ಇತರರು ಭಾಗವಹಿಸಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries