HEALTH TIPS

ಯಾವುದೇ ಶೀರ್ಷಿಕೆಯಿಲ್ಲ

           ಪ್ರತಿಭಟನೆ ಹೆಸರಿನಲ್ಲಿ ವಿಧ್ವಂಸಕ ಕೃತ್ಯ ತಡೆಗಟ್ಟಲು ಸುಪ್ರೀಂ ಕೋಟರ್್ ಮಾರ್ಗಸೂಚಿ
    ನವದೆಹಲಿ: ಸಾರ್ವಜನಿಕ ಪ್ರತಿಭಟನೆಯ ಹೆಸರಿನಲ್ಲಿ ಗೂಂಡಾಗಿರಿ ಮತ್ತು ವಿಧ್ವಂಸಕ ಕೃತ್ಯಗಳನ್ನು ತಡೆಗಟ್ಟಲು ಸುಪ್ರೀಂ ಕೋಟರ್್ ಸೋಮವಾರ ಮಾರ್ಗಸೂಚಿಗಳನ್ನು ಹೊರಡಿಸಿದೆ.
    ಕೊಡುಂಗಲ್ಲೂರು ಫಿಲ್ಮ್ ಸೊಸೈಟಿ ಸಲ್ಲಿಸಿದ್ದ ಮನವಿಯನ್ನು ಆಲಿಸಿದ ನ್ಯಾಯಾಲಯ ಈ ನಿಟ್ಟಿನಲ್ಲಿ ಮಾರ್ಗಸೂಚಿಗಳನ್ನು ಹೊರಡಿಸುವ ಅಗತ್ಯವಿದೆ ಎಂದು ಹೇಳಿದೆ.
ಕಳೆದ ವರ್ಷ ಬಾಲಿವುಡ್ ನಿದರ್ೇಶಕ ಸಂಜಯ್ ಲೀಲಾ ಬನ್ಸಾಲಿಯವರ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ನಟಿಸಿದ್ದ ಪದ್ಮಾವತ್ ಚಿತ್ರ ತೆರೆಗೆ ಬರುವುದಕ್ಕೆ ಮುನ್ನ ವ್ಯಾಪಕ ಪ್ರತಿಭಟನೆ ವ್ಯಕ್ತವಾಗಿತ್ತು. ಐತಿಹಾಸಿಕ ಚಿತ್ರವಾದ ಪದ್ಮಾವತ್ ನಲ್ಲಿ ರಾಣಿ ಪದ್ಮಾವತಿಯನ್ನು ಕೆಟ್ಟದಾಗಿ ತೋರಿಸಲಾಗಿದೆ ಎಂದು ಕಣರ್ಿ ಸೇವಾ ಸೇರಿದಂತೆ ರಜಪೂತರ ಗುಂಪು ದೇಶಾದ್ಯಂತ ಪ್ರತಿಭಟನೆ ಮಾಡಿ ಅನೇಕ ವಿಧ್ವಂಸಕ ಕೃತ್ಯಗಳನ್ನು ನಡೆಸಿದ್ದವು. ಇದರಿಂದ ಸಾರ್ವಜನಿಕ ಆಸ್ತಿ ಪಾಸ್ತಿ ಹಾನಿಯಾಗುತ್ತದೆ ಮತ್ತು ಜನರಿಗೆ ತೊಂದರೆಯಾಗುತ್ತದೆ ಎಂದು ವಾದ ಮಂಡಿಸಿ ಕೊಡುಂಗಲ್ಲೂರು ಫಿಲ್ಮ್ ಸೊಸೈಟಿ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅಜರ್ಿ ಸಲ್ಲಿಸಿತ್ತು.
   ಇದಕ್ಕೂ ಮುನ್ನ ಮುಖ್ಯ ನ್ಯಾಯಮೂತರ್ಿ ದೀಪಕ್ ಮಿಶ್ರಾ ಹಾಗೂ ನ್ಯಾಯಮೂತರ್ಿಗಳಾದ ಎಎಮ್ ಖಾನ್ವಿಲ್ಕರ್ ಮತ್ತು ಡಿವೈ ಚಂದ್ರಚೂಡ್, ಪ್ರತಿಭಟನೆ ವೇಳೆ ಖಾಸಗಿ ಮತ್ತು ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿಯುಂಟುಮಾಡುವ ಕೃತ್ಯವನ್ನು ಅತ್ಯಂತ ಖಂಡನೀಯವಾದದ್ದು ಮತ್ತು ಗಂಭೀರವಾದ ವಿಷಯ ಎಂದು ತೀಮರ್ಾನಿಸಿದ್ದರು.
    ಪ್ರತಿಭಟನೆ ಹೆಸರಿನಲ್ಲಿ ಯಾವುದೇ ಸಂಘಟನೆ ಅಥವಾ ಗುಂಪು ಇಂತಹ ಕೃತ್ಯವೆಸಗಬಾರದು ಎಂದು ಮಾರ್ಗಸೂಚಿಗಳನ್ನು ಹೊರಡಿಸಲಾಗುವುದು ಎಂದು ಕೋಟರ್್ ಹೇಳಿದೆ.
ಇದೇ ವೇಳೆ ಪ್ರತಿಭಟನೆ ಹೆಸರಿನಲ್ಲಿ ಸಾರ್ವಜನಿಕ ತೊಂದರೆಯುಂಟುಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಲ್ಲಿ ಪೊಲೀಸರು ಕೂಡ ವಿಫಲರಾಗಿದ್ದಾರೆ ಎಂದು ಅಟೊನರ್ಿ ಜನರಲ್ ಕೆ ಕೆ ವೇಣುಗೋಪಾಲ್ ಪೊಲೀಸರ ವಿರುದ್ಧ ಹರಿಹಾಯ್ದರು.
   ವಿಧ್ವಂಸಕ ಕೃತ್ಯಗಳು ಮತ್ತು ದಂಗೆ ನಡೆಯದಂತೆ ಸಂಬಂಧಪಟ್ಟ ಪ್ರದೇಶದ ಪೊಲೀಸ್ ಅಧಿಕಾರಿಗಳು ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದು ನ್ಯಾಯಮೂತರ್ಿ ವೇಣುಗೋಪಾಲ್ ನ್ಯಾಯಾಲಯಕ್ಕೆ ಹೇಳಿದರು.
  ಸುಪ್ರೀಂ ಕೋಟರ್್ 2009ರಲ್ಲಿ ತಂದ ತೀರ್ಪನ್ನು ಜಾರಿಗೆ ತಂದು ಮಾರ್ಗಸೂಚಿ ರಚಿಸುವಂತೆ ಕೊಡುಂಗಲ್ಲೂರು ಫಿಲ್ಮ್ ಸೊಸೈಟಿ ನ್ಯಾಯಾಲಯದ ಮೊರೆ ಹೋಗಿತ್ತು.
ಪ್ರತಿಭಟನೆ ಹೆಸರಿನಲ್ಲಿ ಸಾರ್ಜಜನಿಕ ಮತ್ತು ಖಾಸಗಿ ಆಸ್ತಿಪಾಸ್ತಿಗಳಿಗೆ ಏನೇ ತೊಂದರೆಯಾದರೂ ಪ್ರತಿಭಟನೆ ಮಾಡುವವರು ಜವಾಬ್ದಾರರಾಗಿರುತ್ತಾರೆ ಎಂದು 2009ರಲ್ಲಿ ಸುಪ್ರೀಂ ಕೋಟರ್್ ಆದೇಶ ಹೊರಡಿಸಿತ್ತು. ಪ್ರತಿಭಟನೆ ಮಾಡುವಾಗ ಪೊಲೀಸ್ ಅಧಿಕಾರಿಗಳು ಫೋಟೋ ತೆಗೆಯಬೇಕು ಆ ಮೂಲಕ ಸಾಕ್ಷಿ ನೀಡಬಹುದೆಂದು ನ್ಯಾಯಾಲಯ ಹೇಳಿತ್ತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries