ವಲಯ ಒಕ್ಕೂಟದ ವತಿಯಿಂದ ಸೋಲಾರ್ ಉಪಕರಣ ವಿತರಣೆ
ಮಂಜೇಶ್ವರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ಸಮಿತಿ ಆಶ್ರಯದಲ್ಲಿ ತಲಪಾಡಿ ವಲಯವನ್ನು ಸೋಲಾರ್ ಗ್ರಾಮ ಮಾಡುವ ಉದ್ದೇಶದಿಂದ ಹೊಸಂಗಡಿ ಒಕ್ಕೂಟದ ಸದಸ್ಯರಿಗೆ ಸೆಲ್ಕೋ ಸೋಲಾರ್ ಕಂಪೆನಿಯ ಉಪಕರಣವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರತಿನಿಧಿಯ ಮುಖಾಂತರ ಮಜಿಬೈಲ್ ಸೇವಾ ಸಹಕಾರಿ ಬ್ಯಾಂಕ್ ಹಾಲ್ನಲ್ಲಿ ಇತ್ತೀಚೆಗೆ ವಿತರಿಸಲಾಯಿತು.
ಕಾರ್ಯಕ್ರಮವನ್ನು ಸಹಕಾರಿ ಬ್ಯಾಂಕಿನ ಪ್ರಬಂಧಕ ರಾಮಕೃಷ್ಣ ಕಡಂಬಾರ್ ದೀಪ ಬೆಳಗಿಸಿ ಉದ್ಘಾಟಿಸಿದರು. ಸೆಲ್ಕೋ ಸೋಲಾರ್ ಸಂಸ್ಥೆಯ ಅಧಿಕಾರಿ ನಿತಿನ್ ಮಾನ್ಯ, ಹೊಂಸಗಡಿ ಒಕ್ಕೂಟದ ಸೇವಾ ಪ್ರತಿನಿಧಿ ಶೋಭಾ ಹರೀಶ್ ಕಡಂಬಾರ್, ಅಧಕ್ಷೆ ಸವಿತಾ ಜಗದೀಶ್ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು. ಗೀತಾರವರಿಗೆ ವಾಟರ್ ಹೀಟರ್ ಉಪಕರಣ, ಶ್ರುತಿಯವರಿಗೆ ಲೈಟ್ ಸಿಸ್ಟಮ್, ಸುಂದರಿಯವರಿಗೆ ವಾಟರ್ ಹೀಟರ್ನ ಉಪಕರಣವನ್ನು ಈ ಸಂದರ್ಭ ವಿತರಿಸಲಾಯಿತು. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಲಭಿಸುವ ಸವಲತ್ತುಗಳನ್ನು ಉಪಯೊಗಿಸಿ ಎಲ್ಲಾ ಸದಸ್ಯರು ಸೋಲಾರ್ ಅಳವಡಿಸಿ ವಿದ್ಯುತ್ ಬಳಕೆ ಕಡಿಮೆ ಮಾಡಿ ಎಂದು ಬ್ಯಾಂಕ್ ಪ್ರಬಂಧಕ ರಾಮಕೃಷ್ಣ ಕಡಂಬಾರ್ ತಿಳಿಸಿದರು. ಜಯಮಾಲ ಆಶೋಕ ಸ್ವಾಗತಿಸಿ, ಉಷಾ ಸಂಜೀವ ವಂದಿಸಿದರು. ಗೀತಾ ದೇವದಾಸ್ ಕಾರ್ಯಕ್ರಮ ನಿರೂಪಿಸಿದರು.