ಪಳ್ಳತ್ತಡ್ಕ ಶಾಲೆಯಲ್ಲಿ ಶೈಕ್ಷಣಿಕ ಯೋಜನಾ ಕಾಯರ್ಾಗಾರ
ಬದಿಯಡ್ಕ: ನವಕೇರಳ ಮಿಷನ್ನ ಭಾಗವಾಗಿ ಸರಕಾರವು ಘೋಷಿಸಿದ ಸಾರ್ವಜನಿಕ ಸಂರಕ್ಷಣ ಯಜ್ಞವನ್ನು ಹೆಚ್ಚು ಕ್ರಿಯಾತ್ಮಕಗೊಳಿಸುವುದರ ಅಂಗವಾಗಿ ಎಲ್ಲ ಸರಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಭಾರೀ ಮುಂದಾಲೋಚನೆಯೊಂದಿಗೆ ಸಮಗ್ರ ಗುಣಾತ್ಮಕ ವಿದ್ಯಾಲಯ ಅಭಿವೃದ್ಧಿ ಯೋಜನೆಯ ರೂಪೀಕರಣವಾಗಿದೆ. ಇದರ ಭಾಗವಾಗಿ ಎಲ್ಲ ಶಾಲೆಗಳಲ್ಲೂ ಪೂರ್ವ ಯೋಜನೆ ಸಿದ್ದಪಡಿಸಿ ಕಲಿಕೆಯನ್ನು ಸುಗಮಗೊಳಿಸುವ ಯೋಜನೆಯನ್ನು ಕಾರ್ಯಗತಗೊಳಿಸಬೇಕಿದ್ದು ಭಾಷಾ ಸಾಮಥ್ರ್ಯಗಳ ವಿಕಾಸ , ಗಣಿತ ಸಾಮಥ್ರ್ಯಗಳ ವಿಕಾಸ, ಇಂಗ್ಲಿಷ್ ಕಲಿಕೆಗೆ ಪ್ರೋತ್ಸಾಹ , ಸಮಾಜ ವಿಜ್ಞಾನ ಕಲಿಕೆಗೆ ಪ್ರೋತ್ಸಾಹ ಮೊದಲಾದ ಹಲವಾರು ಶೈಕ್ಷಣಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಯೋಜನೆಯನ್ವಯ ಸಾಧ್ಯವಾದಷ್ಟು ಚಟುವಟಿಕೆಗಳನ್ನು ಹಮ್ಮಿಕೊಂಡು ಆದ್ಯತೆಗನುಸರಿಸಿ ಕ್ರಮೀಕರಿಸಿ ತರಗತಿಗಳನ್ನು ನಡೆಸಲು ಪೂರ್ವ ಯೋಜನೆ ಸಿದ್ದಗೊಳಿಸಲಾಗುತ್ತಿದೆ.
ಪಳ್ಳತ್ತಡ್ಕ ಅನುದಾನಿತ ಹಿರಿಯ ಪ್ರಾಥಮಿ ಶಾಲೆಯಲ್ಲಿ ಇಂತಹ ಪರಿಹಾರ ಬೋಧನಾ ತರಗತಿಯನ್ನು ನಡೆಸಲು ಶಾಲಾಭಿವೃದ್ದಿ ಸಮಿತಿ ಬುಧವಾರ ಶೈಕ್ಷಣಿಕ ಯೋಜನಾ ಕಾಯರ್ಾಗಾರ ಹಮ್ಮಿಕೊಂಡಿತು. ಯೋಜನಾ ತಯಾರಿ ಸಭೆಯಲ್ಲಿ ಮಾತೃ ಸಂಘದ ಅಧ್ಯಕ್ಷೆ, ರಕ್ಷಕ ಶಿಕ್ಷಕ ಸಂಘದ ಸದಸ್ಯರು ಭಾಗವಹಿಸಿ ಶುಭ ಹಾರೈಸಿದರು. ಶಾಲಿನಿ ಟೀಚರ್ ಹಾಗೂ ಮಣಿ ಮಾಸ್ಟರ್ ಯೋಜನೆಯ ಕುರಿತು ಮಾಹಿತಿ ನೀಡಿದರು. ಆಂಗ್ಲ ಭಾಷೆ, ಗಣಿತ, ಸಮಾಜ ಚಟುವಟಿಕೆಗಳಿಗೆ ಈ ಸಂದರ್ಭ ಚಾಲನೆ ನೀಡಲಾಯಿತು.