HEALTH TIPS

ಯಾವುದೇ ಶೀರ್ಷಿಕೆಯಿಲ್ಲ

              ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ, ಮತ್ತೆ ಚಂಡಮಾರುತದ ಭೀತಿ
    ಕಾಸರಗೋಡು: ಅರಬ್ಬೀ ಸಮುದ್ರದಲ್ಲಿ ತೀವ್ರ ವಾಯು ಭಾರ ಕುಸಿತ ಉಂಟಾಗಿ ಚಂಡಮಾರುತ ಪರಿವರ್ತನೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಅ. 10 ರ ವರೆಗೆ ಮೀನುಗಾರಿಕೆಗೆ ತೆರಳದಂತೆ ಹಾಗೂ ಈಗಾಗಲೇ ತೆರಳಿರುವವರು ಕೂಡಲೇ ಹಿಂತಿರುಗುವಂತೆ ಹವಾಮಾನ ಇಲಾಖೆ ಸ್ಪಷ್ಟ ಸೂಚನೆ ಕೊಟ್ಟಿದೆ.
   ವಾಯುಭಾರ ಕುಸಿತವಾಗಿದ್ದು, ಕೇರಳ ಹಾಗೂ ಕನರ್ಾಟಕದ ಪಶ್ಚಿಮ ಕರಾವಳಿಯಲ್ಲಿ ಸಮುದ್ರದ ಅಲೆಗಳ ಅಬ್ಬರ ಹೆಚ್ಚಿ, ವೇಗದ ಗಾಳಿಯೂ ಬೀಸಿ ಸಮುದ್ರ ಅಲೆಗಳು ಪ್ರಕ್ಷುಬ್ಧವಾಗಲಿವೆ. ಈ ಹಿನ್ನೆಲೆಯಲ್ಲಿ ಮೀನುಗಾರರನ್ನು ಹಿಂದೆ ಕರೆದು ಮುನ್ನೆಚ್ಛರಿಕಾ ಕ್ರಮ ಕೈಗೊಳ್ಳಲಾಗಿದೆ ಎಂದು ಮೀನುಗಾರಿಕಾ ಇಲಾಖೆಯ ಉಪನಿದರ್ೇಶಕರು ತಿಳಿಸಿದ್ದಾರೆ.
   ಮೀನುಗಾರರಿಗೆ ಎಚ್ಚರಿಕೆ ಹವಾಮಾನ ಇಲಾಖೆ ಮುನ್ಸೂಚನೆಯಂತೆ ಬುಧವಾರದಿಂದಲೇ ಮಲ್ಪೆ ಬಂದರಿನಲ್ಲಿ ಮೀನುಗಾರರಿಗೆ ನೀರಿಗೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಈಗಾಗಲೇ ಮೀನುಗಾರಿಕೆಗೆ ತೆರಳಿದ್ದ ಮೀನುಗಾರರು ಅ. 5 ರ ರಾತ್ರಿಯೊಳಗೆ ಮಲ್ಪೆ ಬಂದರಿಗೆ ವಾಪಾಸಾಗುವಂತೆ ಧ್ವನಿವರ್ದಕಗಳ ಮೂಲಕ ಸೂಚಿಸಲಾಗಿದೆ.
   ಮೀನುಗಾರಿಕೆ ಮಾಡಿ ಬಂದರಿಗೆ ಬಂದಿರುವ ಬೋಟ್ಗಳನ್ನು ಹಿಂದೆ ಹೋಗದಂತೆ ಸೂಚಿಸಲಾಗಿದೆ. ಅಲ್ಲದೇ ಕಡಲ ಮಧ್ಯೆ ಬಾಕಿ ಉಳಿದಿರುವ ಎಲ್ಲಾ ಬೋಟ್ಗಳನ್ನು ಅ. 5 ಇಲ್ಲವೇ 6 ರೊಳಗೆ ಎಲ್ಲರೂ ಬಂದರಿಗೆ ಹಿಂತಿರುಗುವಂತೆ ತಿಳಿಸಲಾಗಿದೆ. 
      ಶೇ. 80 ರಷ್ಟು ಬೋಟ್ ದಡ ಸೇರಿವೆ: ಪಶ್ಚಿಮ ಕರಾವಳಿಯಲ್ಲಿ ಹವಾಮಾನ ವೈಪರಿತ್ಯದ ಕುರಿತು ಜಿಲ್ಲಾಧಿಕಾರಿ ಹಾಗೂ ಇಲಾಖೆ 2 ದಿನಗಳ ಹಿಂದೆಯೇ ಮಾಹಿತಿ ರವಾನೆ ಮಾಡಿದ್ದು, ಶೇ. 80 ರಷ್ಟು ಬೋಟ್ಗಳು ಈಗಾಗಲೇ ಹಿಂತಿರುಗಿವೆ. 
    ಮೀನುಗಾರಿಕೆಗೆ ತೆರಳಿದ್ದ ಮೀನುಗಾರರಿಗೆ, ಬೋಟ್ ಮಾಲೀಕರಿಗೆ ಸಂದೇಶ ಕೊಟ್ಟಿದ್ದು, ಬಂದರಿನಲ್ಲೂ ಮೈಕ್ನಲ್ಲಿ ಸೂಚನೆ ನೀಡಲಾಗಿದೆ. ಈಗಾಗಲೇ ಮೀನುಗಾರಿಕೆ ಮುಗಿಸಿ ಬಂದರಿಗೆ ಹಿಂದೆ ಬಂದಿರುವ ಬೋಟ್ಗಳು ಮತ್ತೆ ಹೋಗುತ್ತಿಲ್ಲ. ಅದರಂತೆ ಶೇ. 80 ರಷ್ಟು ಬೋಟ್ ಲಂಗರು ಹಾಕಿವೆ
   ಪಶ್ಚಿಮ ಕರಾವಳಿಯಲ್ಲಿ ಮೀನುಗಾರಿಕೆಯಲ್ಲಿ ನಿರತವಾಗಿರುವ ತಮಿಳುನಾಡಿನ ಬೋಟ್ಗಳು ತಮಿಳುನಾಡು ಸರಕಾರದ ಸೂಚನೆಯಂತೆ ಕನರ್ಾಟಕ ಬಂದರಿಗೆ ಬರುತ್ತಿದ್ದು, ಅವುಗಳಿಗೆ  ಮೀನುಗಾರಿಕಾ ಇಲಾಖೆಯ ಸೂಚನೆಯಂತೆ ಬಂದರಿನಲ್ಲಿ ನಿಲ್ಲಲು ಅವಕಾಶ ನೀಡಲಾಗುತ್ತಿದೆ. 
    ಪ್ರಕ್ಷುಬ್ಧತೆ ಗೋಚರಿಸಿಲ್ಲ: ಸಮುದ್ರ ಮಧ್ಯೆ ಮೀನುಗಾರಿಕೆ ಮಾಡುವ ವೇಳೆ ವಾತಾವರಣ ಪ್ರಕ್ಷುಬ್ಧತೆವಾಗಿರುವ ಬಗ್ಗೆ ಯಾವುದೇ ಗೋಚರವಾಗಿಲ್ಲ. ಆದರೂ ಇಲಾಖೆ ಸೂಚನೆಯಂತೆ ಬಂದರಿನಲ್ಲಿ ಲಂಗರು ಹಾಕಿದ್ದೇವೆ ಎನ್ನುತ್ತಾರೆ ಮೀನುಗಾರರು.
    ಕಾಸರಗೋಡು ನಗರ ತತ್ತರ:
   ಗುರುವಾರ ಅಪರಾಹ್ನ 3.15ರ ವೇಳೆ ಕಾಸರಗೋಡು ಹೊಸ ಬಸ್ ನಿಲ್ದಾಣ ಪರಿಸರದಲ್ಲಿ ಹಠಾತ್ ಉಂಟಾದ ಕುಳಿಗರ್ಾಳಿಗೆ ವ್ಯಾಪಕ ನಾಶನಷ್ಟಗಳುಂಟಾದವು. ಹೊಸ ಬಸ್ ನಿಲ್ದಾಣ ಪರಿಸರದ ಹೋಟೆಲ್ ತಾಜ್ ಸಂಕೀರ್ಣದ ಮೇಲ್ಗಡೆಯಿದ್ದ ಮೊಬೈಲ್ ಟವರ್ ಕುಸಿದು ವ್ಯಾಪಕ ಭೀತಿಗೆ ಕಾರಣವಾಯಿತು. ಟವರ್ ಬಿದ್ದ ರಭಸಕ್ಕೆ 6 ಮಹಡಿಯ ಕಟ್ಟಡ ತರಗುಟ್ಟಿ ಭೀತಿಗೆ ಕಾರಣವಾಯಿತು. ಪಕ್ಕದ ಐವಾ ಸಿಲ್ಕ್ಸ್ ಮಳಿಗೆಯ ಮೇಲೆ ವಿದ್ಯುತ್ ಕಂಬ ತಂತಿಗಳು ಬಿದ್ದಿರುವುದು ಕಂಡುಬಂತು. ಹೈವೇ ರಸ್ತೆ ಬದಿ ನಿಲ್ಲಿಸಲಾಗಿದ್ದ ಮೂರು ಕಾರುಗಳು ಹಾನಿಗೊಂಡವು.ಬಸ್ ನಿಲ್ದಾಣ ಸಮೀಪದ ಕಟ್ಟಡವೊಂದಕ್ಕೆ ಬೃಹತ್ ಮರವೊಂದು ಬಿದ್ದ ಕಾರಣ ವಾಹನ ಸಂಚಾರಕ್ಕೆ ತೊಂದರೆಯುಂಟಾಯಿತು. ಅಮೈ ಕಾಲನಿಯ ಹಲವು ಮನೆಗಳಿಗೂ ಹಾನಿಗಳಾಗಿದ್ದು ಇಲ್ಲಿಯ ಸಂಜೀವಿ, ಚಂದ್ರಾವತಿ ಎಂಬವರ ಮನೆಗಳು ಸಂಪೂರ್ಣ ಕುಸಿದಿವೆ. ಪಾರೆಕಟ್ಟದಲ್ಲಿ ಗಾಳಿಯ ರಭಸಕ್ಕೆ ಹಲವಾರು ಮರಗಳು ಧರಾಶಾಯಿಯಾಗಿವೆ. ನುಳ್ಳಿಪ್ಪಾಡಿಯಲ್ಲೂ ಮರಗಳು ಬಿದ್ದು ಮನೆಗಳಿಗೆ ಹಾನಿಯಾಗಿರುವುದು ಕಂಡುಬಂದಿದೆ. ಮೈಲಾಟಿಯ ಮುಖ್ಯ ವಿದ್ಯುತ್ ಸರಬರಾಜು ಘಟಕದಿಂದ ವಿದ್ಯುತ್ ಪ್ರಸರಣದಲ್ಲಿ ವ್ಯತ್ಯಯವಾಗಿದ್ದು ರಾತ್ರಿ ವೇಳೆ ಕಾಸರಗೋಡು ನಗರದ ಕೆಲವು ಪ್ರದೇಶಗಳನ್ನು ಹೊರತುಪಡಿಸಿ ಮಿಕ್ಕೆಡೆಗಳಿಗೆ ವಿದ್ಯುತ್ ಸಂಪರ್ಕ ನೀಡಲಾಗಿದೆ. 




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries