HEALTH TIPS

ಯಾವುದೇ ಶೀರ್ಷಿಕೆಯಿಲ್ಲ

               ಮುಂಡಿತ್ತಡ್ಕದಲ್ಲಿ ಶೈಕ್ಷಣಿಕ ಯೋಜನಾ ಕಮ್ಮಟ-ದೈಹಿಕ ಕ್ಷಮತೆಯ ತರಬೇತಿ   
    ಬದಿಯಡ್ಕ: ಶಿಕ್ಷಣ ಸಂಸ್ಥೆಗಳ ಸರ್ವತೋಮುಖ ಅಭಿವೃದ್ದಿಯಲ್ಲಿ ವಿಸ್ಕೃತ ಪ್ರಶಿಕ್ಷಣಗಳೊಂದಿಗಿನ ತರಬೇತಿ ಚಟುವಟಿಕೆಗಳು ಹುರುಪನ್ನು ಮೂಡಿಸುತ್ತದೆ. ಇಂದಿನ ಒತ್ತಡದ ಕಾಲಘಟ್ಟದಲ್ಲಿ ಪ್ರತಿನಿತ್ಯ ಸೀಮಿತ ದೈಹಿಕ ಶಿಕ್ಷಣದ ವಿವಿಧ ಚಟುವಟಿಕೆಗಳು ಹೆಚ್ಚು ಪ್ರಯೋಜನಕಾರಿ ಎಂದು ಮುಂಡಿತ್ತಡ್ಕದ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಗಣೇಶ್ ಕಾಮತ್ ಅಭಿಪ್ರಾಯ ವ್ಯಕ್ತಪಡಿಸಿದರು.
   ರಾಜ್ಯ ಶಿಕ್ಷಣ ಇಲಾಖೆಯ ನೇತೃತ್ವದಲ್ಲಿ ಎಲ್ಲಾ ಶಿಕ್ಷಣ ಸಂಸ್ಥೆಗಳ ಶಿಕ್ಷಣ ಗುಣಮಟ್ಟವನ್ನು ಅಂತರಾಷ್ಟ್ರೀಯ ಗುಣಮಟ್ಟಕ್ಕೇರಿಸುವ ಅಂಗವಾಗಿ ಮುಂಡಿತ್ತಡ್ಕದ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ನಡೆದ ಶೈಕ್ಷಣಿಕ ಯೋಜನೆ ತಯಾರಿ ಕಮ್ಮಟ ಉದ್ಘಾಟಿಸಿ ಅವರು ಮಾತನಾಡಿದರು.
    ದೈಹಿಕ ಶಿಕ್ಷಣ, ಕಲಾ ತರಬೇತಿ, ಕನ್ನಡ, ಮಲೆಯಾಳ, ಹಿಂದಿ ಭಾಷಾಧ್ಯಯನ ವಿಷಯಗಳಲ್ಲಿ ಮುಂದಿನ ದಿನಗಳಲ್ಲಿ ವಿಸ್ಕೃತ ತರಬೇತಿ ನೀಡುವ ಬಗ್ಗೆ ಅವರು ಈ ಸಂದರ್ಭ ಭರವಸೆ ನೀಡಿದರು. ಕಾರ್ಯಕ್ರಮದ ಔಪಚಾರಿಕ ಉದ್ಘಾಟನೆಯ ಭಾಗವಾಗಿ ದೈಹಿಕ ಕ್ಷಮತೆಯನ್ನು ಹೆಚ್ಚಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಕಿರಿಯ ಹಾಗೂ ಹಿರಿಯ ಪ್ರಾಥಮಿಕ ವಿಭಾಗಗಳ ವಿದ್ಯಾಥರ್ಿಗಳಿಗೆ ಅವರ ಆಸಕ್ತಿಯ ಕ್ಷೇತ್ರಗಳನ್ನು ವಗರ್ೀಕರಿಸಿ ಯೋಜನೆಯ ಅನುಷ್ಠಾನಕ್ಕೆ ವ್ಯವಸ್ಥೆ ರೂಪಿಸಲಾಯಿತು.
   ಶಿಕ್ಷಕ ಪ್ರಶಾಂತ್ ರೈ ದೈಹಿಕ ಶಿಕ್ಷಣದ ಮಹತ್ವದ ಬಗ್ಗೆ ವಿಸ್ತಾರವಾಗಿ ಮಾತನಾಡಿದರು. ಸರಳ ವ್ಯಾಯಾಮದೊಮದಿಗೆ ದೈಹಿಕ ಶಿಕ್ಷಣದ ತರಬೇತಿಯನ್ನು ಈ ಸಂದರ್ಭ ನೀಡಲಾಯಿತು. ಶಿಕ್ಷಕ ಪದ್ಮನಾಭ ಮಾಸ್ತರ್ ಸ್ವಾಗತಿಸಿ, ದಾಮೋದರ ಮಾಸ್ತರ್ ವಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries