ಮಾದಕ ದ್ರವ್ಯಗಳ ದುಷ್ಪರಿಣಾಮ-ಮಾಹಿತಿ ತರಗತಿ
ಮುಳ್ಳೇರಿಯ : ಮಾದಕ ದ್ರವ್ಯಗಳ ಬಳಕೆಯಿಂದ ಉಂಟಾಗಬಹುದಾದ ತೊಂದರೆಗಳ ಅರಿವಿದ್ದರೂ ಜನರು ಅದರ ದಾಸರಾಗುತ್ತಿರುವುದು ಆತಂಕಕಾರಿಯಾದುದು. ಶಾಲಾ ಪರಿಸರಗಳು ಇದರ ಮಾರಾಟ ಕೇಂದ್ರವಾಗುತ್ತಿವೆ. ಇಂದು ವಿದ್ಯಾಥರ್ಿಗಳೊಂದಿಗೆ ವಿದ್ಯಾಥರ್ಿನಿಯರೂ ಈ ಚಟಕ್ಕೆ ಬಲಿಯಾಗುತ್ತಿರುವ ಅಂಶ ಹೊರಬರುತ್ತಿದೆ. ಈ ಕುರಿತು ಸಾಮಾಜಿಕ ಜಾಗೃತಿ ಮೂಡಬೇಕಿದೆ ಎಂದು ಬೋವಿಕ್ಕಾನ ಬಿ.ಎ.ಆರ್ ಹೈಯರ್ ಸೆಕೆಂಡರಿ ಶಾಲೆಯ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಕೆ. ಬಿ. ಮೊಹಮ್ಮದ್ ಕುಂಞ್ಞಿ ಅವರು ಹೇಳಿದರು.
ಅವರು ಶಾಲೆಯ ರಾಷ್ಟ್ರೀಯ ಸೇವಾ ಯೋಜನೆಯ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ಮಾದಕ ವಸ್ತು ಬಳಕೆಯ ಪರಿಣಾಮಗಳ ಕುರಿತಾದ ತರಗತಿಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಶಾಲಾ ಪ್ರಾಂಶುಪಾಲ ಮೆಜೋ ಜೋಸೆಫ್ ಅವರು, ಜೀವನದಲ್ಲಿ ಮಾದಕವಸ್ತುಗಳು ಯಾರಿಗೂ ಬೇಡವಾದ ವಸ್ತುವಾಗಿದೆ. ಶಾರೀರಿಕವಾಗಿ ಅದರಿಂದ ತೊಂದರೆಯೇ ಹೊರತು ಉಪಕಾರವಿಲ್ಲ. ಆದರೂ ಯುವ ಸಮೂಹ ಹೊಸ ಹೊಸ ಪ್ರಯೋಗಗಳ ಮೂಲಕ ಅದರ ದಾಸರಾಗುತ್ತಿದ್ದಾರೆ. ಇದು ಆತಂಕಕಾರಿಯಾದುದು ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿಯಾಗಿ ಸೆಂಟ್ರಲ್ ಯುನಿವಸರ್ಿಟಿಯ ಎಮ್. ಎಸ್. ಡಬ್ಲ್ಯು. ವಿದ್ಯಾಥರ್ಿ ಅಬ್ದುಲ್ ರಾಶಿದ್ ಅವರು ಭಾಗವಹಿಸಿ ತರಗತಿಯನ್ನು ನಡೆಸಿಕೊಟ್ಟರು. ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿ ಪ್ರೀತಮ್ ಎ.ಕೆ. ಸ್ವಾಗತಿಸಿ, ತಮ್ಜೀದಾ ವಂದಿಸಿದರು.