HEALTH TIPS

ಯಾವುದೇ ಶೀರ್ಷಿಕೆಯಿಲ್ಲ

              ಸೀತಾಂಗೋಳಿಯಲ್ಲಿ ಕಿಡಿಗೇಡಿಗಳಿಂದ ಓಂಕಾರ ಧ್ವಜ ನಾಶ-ಸಂಘಷರ್ಾವಸ್ಥೆ ಸೃಷ್ಟಿ
   ಕುಂಬಳೆ: ಶಬರಿಮಲೆಗೆ ಮಹಿಳಾ ಪ್ರವೇಶಾತಿಗೆ ಪರಮೋಚ್ಚ ನ್ಯಾಯಾಲಯ ನಿಡಿರುವ ತೀಪರ್ು ಮತ್ತು ಆ ಬಳಿಕ ಕೇರಳ ಸರಕಾರ ಹಿಂದೂ ವಿರೋಧಿ ನೀತಿಯನ್ನು ಖಂಡಿಸಿ ಭಾನುವಾರ ಸಂಜೆ ಸೀತಾಂಗೋಳಿಯಲ್ಲಿ ವಿಹಿಂಪ, ಭಜರಂಗದಳ ಹಾಗೂ ಮಾತೃಶಕ್ತಿ ಸಮಿತಿ ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ಅಲ್ಲೋಲಕಲ್ಲೋಲಗೊಳಿಸಿ ಕೋಮು ಸಂಘರ್ಷ ಸೃಷ್ಟಿಸಲು ಯತ್ನಿಸಿದ ಘಟನೆ ನಡೆದಿದೆ.
   ಭಾನುವಾರ ಸಂಜೆ ಸೀತಾಂಗೋಳಿ ಪೇಟೆಯಲ್ಲಿ ಶಾಂತಿಯುತ ಪ್ರತಿಭಟನೆ ನಡೆಯುತ್ತಿತ್ತು. ಈ ವೇಳೆ ಸೀತಾಂಗೋಳಿ ಜಂಕ್ಷನ್ ನಲ್ಲಿ ಸ್ಥಾಪಿಸಲಾಗಿದ್ದ ಓಂಕಾರ ಧ್ವಜವನ್ನು ಕಾರಲ್ಲಿ ಆಗಮಿಸಿದ ಕಿಡಿಗೇಡಿಗಳು ಕಿತ್ತೆಸೆದು ಪರಾರಿಯಾದರು. ಇದರಿಂದ ವಿಚಲಿತಗೊಂಡ ಸಭೆಗೆ ಸೇರಿದ್ದ ಕಾರ್ಯಕರ್ತರು ಇತ್ತೀಚೆಗೆ ಸೀತಾಂಗೋಳಿಯಲ್ಲಿ ನೂತನವಾಗಿ ನಿಮರ್ಿಸಲಾಇದ್ದ ಪೋಲೀಸ್ ಏಯ್ಡ್ಪೋಸ್ಟ್ ಕಚೇರಿಯತ್ತ ತೆರಳಿ ಕಿಡಿಗೇಡಿಗಳ ಪತ್ತೆಗೆ ಸಿಸಿ ಕ್ಯಾಮರಾ ಪರಿಶೀಲಿಸಿ ತುತರ್ು ಕ್ರಮ ಕೈಗೊಳ್ಳಲು ಒತ್ತಾಯಿಸಿದರು. ಆದರೆ ದೂರು ದಾಖಲಾಗದೆ ಸಿಸಿ ದೃಶ್ಯಾವಳಿಗಳನ್ನು ಬಹಿರಂಗಪಡಿಸುವಂತಿಲ್ಲವೆಂದು ಪೋಲೀಸ್ ಸಿಬ್ಬಂದಿಗಳು ನೀಡಿದ ಹೇಳಿಕೆಯಿಂದ ರೊಚ್ಚಿಗೆದ್ದ ಕಾರ್ಯಕರ್ತರು ಕೂಡಲೇ ಪೋಲೀಸರು ಕ್ರಮಕೈಗೊಳ್ಳಲು ಆಗ್ರಹಿಸಿದರು. ಈ ವೇಳೆ ಅಲ್ಪಹೊತ್ತು ಮಾತಿನ ಚಕಮಕಿ ಹಾಗೂ ಸಂಘರ್ಷ ಸ್ಥಿತಿ ನಿಮರ್ಾಣವಾಯಿತು. ಈ ಘಟನೆಯ ವಿಷಯ ತಿಳಿದು ಕುಂಬಳೆಯಿಂದ ಹೆಚ್ಚುವರಿ ಪೋಲೀಸರು ಆಗಮಿಸಿದರು. ಬಳಿಕ ಕಾರ್ಯಕರ್ತರನ್ನು ಸಮಧಾನಗೊಳಿಸಿ ಕಳುಹಿಸಲಾಯಿತು. ಸೋಮವಾರ ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದೆಂದು ಪೋಲೀಸರು ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries