HEALTH TIPS

ಯಾವುದೇ ಶೀರ್ಷಿಕೆಯಿಲ್ಲ

              ಈ ಹೊತ್ತಿಗೆ ಈ ಹೊತ್ತಗೆ' ಸರಣಿ ಕಾರ್ಯಕ್ರಮಕ್ಕೆ ನಾಂದಿ
   ಮಂಜೇಶ್ವರ : "ಓದು ನಮ್ಮದ್ದೇ ಆದ ಏಕಾಂತ ಲೋಕದ ಸೃಷ್ಟಿಗೆ ಒಂದು ದಾರಿಯಾಗಿದೆ. ಕಾಲ ಕಾಲಕ್ಕೆ ಬರುತ್ತಿರುವ ಹೊಸ ಪುಸ್ತಕಗಳ ಓದು, ಪರಿಶೀಲನೆ ನಮ್ಮ ಬೌದ್ಧಿಕ ಜಗತ್ತನ್ನು ವಿಸ್ತರಿಸುತ್ತದೆ" ಎಂದು ಹಿರಿಯ ಗಾಂಧಿವಾದಿ ಶಂಭು ನಂಬೂದ್ರಿಯವರು ಹೇಳಿದರು.
    ಇತ್ತೀಚೆಗೆ ತಲಪಾಡಿ ಸಮೀಪದ ಕಣ್ವತೀರ್ಥದ 'ಸರಸ್ವತಿ ಸದನ'ದಲ್ಲಿ ನಡೆದ 'ಈ ಹೊತ್ತಗೆ ಈ ಹೊತ್ತಿಗೆ' ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
   ಕಾರ್ಯಕ್ರಮದಲ್ಲಿ ಡಾ. ಯೋಗೀಶ್ ಕೈರೋಡಿಯವರು ಅನುಬಂದೋಪಾಧ್ಯಾಯವರ 'ಬಹುರೂಪಿ ಗಾಂಧಿ' (ಅನು : ಎಚ್.ಎನ್. ಗೀತಾ) ಎಂಬ ಕೃತಿಯನ್ನು ಪರಿಚಯಿಸಿದರು. ಮಹಾತ್ಮಗಾಂಧಿ ಎಂದಾಗ ಸ್ವಾತಂತ್ರ್ಯ ಹೋರಾಟ, ಅಹಿಂಸಾ ತತ್ತ್ವ, ಸತ್ಯಾಗ್ರಹ ಮೊದಲಾದ ಅಂಶಗಳು ತಕ್ಷಣ ನಮ್ಮ ಗಮನಕ್ಕೆ ಬರುತ್ತವೆ. ಆದರೆ ಬಹುರೂಪಿ ಗಾಂಧಿ ಕೃತಿಯು ಗಾಂಧಿ ವ್ಯಕ್ತಿತ್ವದ ಸೂಕ್ಷ್ಮ ಅಂಶಗಳನ್ನು ತೆರೆದಿಡುತ್ತದೆ. ಗಾಂಧಿ ಜೀವನ ತೆರೆದ ಪುಸ್ತಕವಾಗಿದೆ. ಅವರು ದೇಶಕ್ಕೆ ನೀಡಿದ ಸಂದೇಶಕ್ಕಿಂತಲೂ ಅವರ ಜೀವನ ಶೈಲಿ ಇಂದಿಗೂ ಆದರ್ಶವಾಗಿದೆ. ಅವರು ಒಬ್ಬ ಕಷ್ಟಜೀವಿಯಾಗಿ, ಬ್ಯಾರಿಸ್ಟರ್ ಆಗಿ, ದಜರ್ಿ, ಅಗಸ, ಕ್ಷೌರಿಕ, ಭಂಗಿ, ಚಮ್ಮಾರ, ಸೇವಕ, ಬಾಣಸಿಗ, ವೈದ್ಯ, ದಾಯಿ, ಶಿಕ್ಷಕ, ನೇಕಾರ, ನೂಲುವವ, ವ್ಯಾಪಾರಿ, ರೈತ, ಹರಾಜುಗಾರ, ಭಿಕ್ಷುಕ, ಸುಲಿಗೆಗಾರ, ಸೆರೆಮನೆಯ ಹಕ್ಕಿ, ಕಾಯಕ ನೀತಿಜ್ಞ, ಲೇಖಕ, ಪತ್ರಕರ್ತ, ಮುದ್ರಕ-ಪ್ರಕಾಶಕ, ಫ್ಯಾಷನ್ ರೂಪಿಸುವವ, ಹಾವಾಡಿಗ ಮತ್ತು ಪುರೋಹಿತರಾಗಿ ಬದುಕಿದ ರೀತಿಯನ್ನು ಈ ಕೃತಿ ಮನಮುಟ್ಟುವಂತೆ ನಿರೂಪಿಸುತ್ತದೆ ಎಂದು ಕೈರೋಡಿಯವರು ವಿವರಿಸಿದರು.
  ಕಾರ್ಯಕ್ರಮದ ಆರಂಭದಲ್ಲಿ ಸಂಚಾಲಕ ಲೇಖಕ ಮತ್ತು ವಿಮರ್ಶಕರಾಗಿರುವ ಟಿ.ಎ.ಎನ್. ಖಂಡಿಗೆಯವರು "ಇದು ಶ್ರೇಷ್ಠ ಪುಸ್ತಕಗಳ ಕಡೆಗೆ ಇರುವ ಒಂದು ಪ್ರವಾಸವಾಗಿದೆ. ಪ್ರವಾಸಕ್ಕೆ ಗುರಿ ಎಷ್ಟು ಮುಖ್ಯವೋ ದಾರಿಯೂ ಅಷ್ಟೆ ಮುಖ್ಯ. ಇದೇ ರೀತಿ ಪುಸ್ತಕ ರಚನೆಯ ಸಂದರ್ಭ, ಸನ್ನಿವೇಶವು ಇಂಥ ಕಾರ್ಯಕ್ರಮದಲ್ಲಿ ಚಚರ್ಿತವಾಗುತ್ತವೆ. ತಿಂಗಳಿಗೊಂದರಂತೆ ಈ ಕಾರ್ಯಕ್ರಮ ನಡೆಸಲು ತೀಮರ್ಾನಿಸಲಾಗಿದೆ. ತೀರಾ ಅನೌಪಚಾರಿಕವಾಗಿ ನಡೆಯುವ ಈ ಕಾರ್ಯಕ್ರಮಕ್ಕೆ ಓದು ವ್ಯಸನಿಗಳಿಗೆ ಸ್ವಾಗತವಿದೆ" ಎಂದು ಕಾರ್ಯಕ್ರಮದ ಸ್ವರೂಪ ಮತ್ತು ಉದ್ದೇಶವನ್ನು ವಿವರಿಸಿದರು. ಕಾರ್ಯಕ್ರಮದಲ್ಲಿ ಕುಶಲಾಕ್ಷಿ ವಿ. ಕುಲಾಲ್ ಅವರು  ಸ್ವರಚಿತ 'ಗಾಂಧಿ' ಕವಿತೆ ವಾಚಿಸಿದರು. ಕೆ.ಪಿ ಸೋಮಶೇಖರ, ಕೃಷ್ಣಪ್ಪ ಪೂಜಾರಿ ಕೆ, ಬಿ. ನಾರಾಯಣ್, ಗೀತ.ಆರ್.ಕೆ ಶ್ರೀ ದೇವಿ ಮೊದಲಾದವರು ಸಂವಾದದಲ್ಲಿ ಭಾಗವಹಿಸಿದರು. ಕುಂಜತ್ತೂರು ಹೈಸ್ಕೂಲಿನ ಕನ್ನಡ ಶಿಕ್ಷಕಿ  ಕವಿತಾ ಕೂಡ್ಲು ಅವರ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.
   


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries