HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                        ಸಾದಂಗಾಯ ಸನ್ನಿಧಿಯಲ್ಲಿ ನವರಾತ್ರಿ ಮಹೋತ್ಸವ
                            ಸಾಧಕ ಸೇರಾಜೆಯವರಿಗೆ ಸನ್ಮಾನ
    ಉಪ್ಪಳ: ಕುರುಡಪದವು ಸಮೀಪದ ಸಾದಂಗಾಯ ಮಠ ಶ್ರೀದುಗರ್ಾಪರಮೇಶ್ವರಿ ದೇವಸ್ಥಾನದಲ್ಲಿ ವಾಷರ್ಿಕ ಶರನ್ನವರಾತ್ರಿ ಮಹೋತ್ಸವ ಅ.9 ರಿಂದ 17ರ ವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
  ಕಾರ್ಯಕ್ರಮದ ಅಂಗವಾಗಿ ಅ.9 ರಂದು ನವರಾತ್ರಿ ಪೂಜಾರಂಭಗೊಳ್ಳಲಿದ್ದು, ಪ್ರತಿದಿನ ಸಂಜೆ 6 ರಿಂದ ಪೂಜಾದಿಗಳು ನೆರವೇರುತ್ತದೆ. ಅ.10 ರಂದು ಬುಧವಾರ ಅಪರಾಹ್ನ 2ಕ್ಕೆ ಕುರಿಯ ವಿಠಲ ಶಾಸ್ತ್ರಿ ಸ್ಮಾರಕ ಯಕ್ಷಗಾನ ತರಬೇತಿ ಕೇಂದ್ರದ ವಿದ್ಯಾಥರ್ಿಗಳಿಂದ ಯಕ್ಷಗಾನ ಬಯಲಾಟ ಸಂಪೂರ್ಣ ಶ್ರೀದೇವೀ ಮಹಾತ್ಮ್ಯೆ ಪ್ರದರ್ಶನಗೊಳ್ಳಲಿದೆ. ಸಂಜೆ 4ಕ್ಕೆ ಸನ್ಮಾನ ಸಮಾರಂಭ ನಡೆಯಲಿದ್ದು, ವಗೆನಾಡು ಶ್ರೀಸುಬ್ರಾಯ ದೇವಸ್ಥಾನ ಮತ್ತು ಕರೋಪಾಡಿ ಮಲರಾಯ ದೈವಸ್ಥಾನದ ಮೊಕ್ತೇಸರರಾದ ಮುಗುಳಿ ತಿರುಮಲೇಶ್ವರ ಭಟ್ ಅಧ್ಯಕ್ಷತೆ ವಹಿಸುವರು. ಸಮಾರಂಭದಲ್ಲಿ ಖ್ಯಾತ ಯಕ್ಷಗಾನ ಕಲಾವಿದ, ಪ್ರಸಂಗಕರ್ತ, ಪ್ರವಚನಕಾರ ಸೀತಾರಾಮ ಭಟ್ ಸೇರಾಜೆ ಅವರನ್ನು ಅಭಿನಂದಿಸಲಾಗುವುದು. ಯಕ್ಷಗಾನ ಅರ್ಥಧಾರಿ ಸರ್ಪಂಗಳ ಈಶ್ವರ ಭಟ್ ಅಭಿನಂದನಾ ಭಾಷಣ ಮಾಡುವರು. ಪೈವಳಿಕೆ ಗ್ರಾ.ಪಂ. ಸದಸ್ಯೆ ತಾರಾ.ವಿ.ಶೆಟ್ಟಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ರಾತ್ರಿ 9.30 ರಿಂದ ಮಹಾಪೂಜೆಯ ಬಳಿಕ ಅನ್ನಸಂತರ್ಪಣೆ ನಡೆಯಲಿದೆ. ಅ.13 ರಂದು ಶನಿವಾರ ಅಪರಾಹ್ನ 3 ರಿಂದ ಕುಂಕುಮಾರ್ಚನಾ ಸೇವೆ ನಡೆಯಲಿದೆ. ಸಂಜೆ 7 ರಿಂದ ಈಶ್ವರಮಂಗಲದ ವಿದುಷಿಃ ಯೋಗೀಶ್ವರಿ ಜಯಪ್ರಕಾಶ್ ಅವರ ಬಾಯಾರು ಶಾಖಾ ವಿದ್ಯಾಥರ್ಿಳಿಂದ ಭರತನಾಟ್ಯ ನೃತ್ಯ ವೈಭವ ನಡೆಯಲಿದೆ. ರಾತ್ರಿ 9 ರಿಂದ ರಂಗಪೂಜೆ, ಅನ್ನಸಂತರ್ಪಣೆ ನಡೆಯಲಿದೆ. ಅ.18 ರಂದು ಗುರುವಾರ ಬಲಿವಾಡು ಕೂಟ ನಡೆಯಲಿದೆ. ಬೆಳಿಗ್ಗೆ 10 ರಿಂದ ಮೇಧಾ ನಾಯರ್ಪಳ್ಳ ಹಾಗೂ ಸಂಗಡಿಗರಿಂದ ಹರಿಕಥಾ ಸತ್ಸಂಗ ನಡೆಯಲಿದೆ. ಅದೇ ದಿನ ವಿದ್ಯಾರಂಭವೂ ನಡೆಯಲಿದೆ ಎಂದು ಕ್ಷೇತ್ರದ ಪ್ರಕಟಣೆಯಲ್ಲಿ ಸಂಬಂಧಪಟ್ಟವರು ತಿಳಿಸಿದ್ದಾರೆ.
   ಸನ್ಮಾನಿತರಾಗುವ ಸೇರಾಜೆ ಸೀತಾರಾಮ ಭಟ್ ಅವರ ಬಗ್ಗೆ: (ಸೀತಾರಾಮ ಭಟ್ ಅವರ ಪರಿಚಯ ಲೇಖನ: ಶ್ರೀನಿವಾಸ ಭಟ್ ಸೇರಾಜೆ. ಶಿಕ್ಷಕ, ಸಾಹಿತಿ.)
   ಸಾಂಸ್ಕೃತಿಕ ಲೋಕದ ರಾಜಧಾನಿಯೆಂದೇ ಬಿಂಬಿತವಾಗಿರುವ ಪದ್ಯಾಣ ಕುಟುಂಬಕ್ಕೆ ಸೇರಿದ ಸೇರಾಜೆ ಸೀತಾರಾಮ ಭಟ್ ನೆರೆಯ ಕುರಿಯ ಮನೆತನದವರ ಸಂಪರ್ಕದಿಂದ ಸಾಂಸ್ಕೃತಿಕ ಜಗತ್ತಿಗೆ ಬಾಲ್ಯದಲ್ಲೇ ಹೊಗಲು ಕಾರಣವಾಯಿತು. ಸಮಾಜ ಸೇವೆಯಲ್ಲಿ ಸಾರ್ಥಕತೆ ಕಂಡಿದ್ದ ಸೇರಾಜೆಯ ದಿ.ನಾರಾಯಣ ಭಟ್- ಶಂಕರಿ ಅಮ್ಮ ದಂಪತಿಗಳ ಸುಪುತ್ರರಾಗಿ ಅ.26 1948ರಂದು ಜನ್ಮಪಡೆದವರು. ತಾಯಿಯವರಿಂದ ಪುರಾಣ ಪ್ರಪಂಚದ ಕಥಾನಕಗಳನ್ನು ಕೇಳಿ ಬೆಳೆದವರಿಗೆ ಯಕ್ಷಗಾನ ಸಹಜವಾಗಿ ಸೆಳೆಯಲ್ಪಟ್ಟಿತು. ಅಜ್ಜನ ಮನೆ ಕುರಿಯದ ಗರಡಿ ಅದಾಗಲೇ ಯಕ್ಷಗಾನದ ಚಾವಡಿಯಾಗಿ ನಿತ್ಯ ಚೆಂಡೆ-ಮದ್ದಳೆ ಜಾಗಟೆಗಳ ಅನುರಣಗೊಳ್ಳುವ ಝೇಂಕಾರದೊಂದಿಗೆ ಮೆರೆದಾಡುತ್ತಿತ್ತು. ತಮ್ಮ ಸೋದರಮಾವ, ಯಕ್ಷಗಾನದ ದಂತಕಥೆ ಕುರಿಯ ವಿಠಲ ಶಾಸ್ತ್ರಿಗಳ ಗರಡಿಯಲ್ಲಿ ಆರಂಭದಿಂದಲೂ ಕೋಲು ಕಿರೀಟಕ್ಕೆ ತಲೆಕೊಟ್ಟು ಪ್ರಸಂಗಗಳಿಗೆ ಜೀವತುಂಬುವ ಅನುಭವ ಪಡೆದವರು. ಬಳಿಕ ಕಾಲೇಜು, ವೃತ್ತಿ ಇದೀಗ ನಿವೃತ್ತಿಯ ಜೀವನದಲ್ಲೂ ಯಕ್ಷಗಾನವನ್ನೇ ಉಸಿರಾಗಿಸಿದ ಸೀತಾರಾಮ ಭಟ್ಟರು ದೇವೇಂದ್ರ, ಅತಿಕಾಯ, ಕರ್ಣ, ಅಜರ್ುನ, ಕಾರ್ತವೀರ್ಯ, ರಕ್ತಬೀಜ, ಸುಧನ್ವ, ಹಿರಣ್ಯಾಕ್ಷ, ಮನ್ಮಥ, ಸೂರ್ಯ, ಅಕ್ರೂರ ಇತ್ಯಾದಿ ಪಾತ್ರಗಳನ್ನು ಯಶಸ್ವಿಯಾಗಿ ನಿರ್ವಹಿಸಿ ಸಾಧನೆಯ ದಾಖಲೆ ಮಾಡಿದವರು. ಶ್ರೀದೇವೀ ಮಹಾತ್ಮ್ಯೆ ಹಾಗೂ ಕಟೀಲು ಕ್ಷೇತ್ರ ಮಹಾತ್ಮ್ಯೆಗಳಲ್ಲಿ ಶ್ರೀದೇವಿಯಾಗಿಯೂ ಮಿಂಚಿದ್ದಾರೆ. ಪುರಾಣದ ಆಳ ಅಧ್ಯಯನ ಸೀತಾರಾಮ ಭಟ್ ಅವರ ಅರ್ಥಗಾರಿಕೆಯಲ್ಲಿ ಪ್ರತಿಬಿಂಬಗೊಳ್ಳುತ್ತದೆ.
   ತಾಳಮದ್ದಳೆಯಲ್ಲೂ ಬೇಡಿಕೆಯ ಕಲಾವಿದರಾಗಿರುವ ಸೀತಾರಾಮ ಭಟ್ ಪೂರ್ವಸಿದ್ದತೆಗಳಿಲ್ಲದ ಮಾತುಗಾರ. ಧಾಮರ್ಿಕ ಭಾಷಣ, ಅಭಿನಂದನಾ ಭಾಷಣ, ಕಾರ್ಯಕ್ರಮ ನಿರೂಪಣೆ ಮೊದಲಾದ ಚಟುವಟಿಕೆಗಳಲ್ಲಿ ಸೀತಾರಾಮ ಭಟ್ ಅವರದು ಅಪ್ರತಿಮ ಸಾಧನಾ ಕೊಡುಗೆಗಳಿಂದ ನಿರಂತರ ಬೇಡಿಕೆಗಳ ಸೀತಣ್ಣ ಆಕರ್ಷಕ ವಾಕ್ಪಟುತ್ವಗಳಿಂದ ಇವರ ಪ್ರವಚನಗಳು ಹೆಚ್ಚು ಜನಪ್ರೀಯತೆ ಗಳಿಸಿಕೊಂಡಿದೆ. ಕಳೆದ 40 ವರ್ಷಗಳಿಂದ ಮಂಗಳೂರಿನ ಮಂಗಳಾದೇವಿ ದೇವಸ್ಥಾನದಲ್ಲಿ ನಿರಂತರ ಪ್ರವಚನ ನೀಡುತ್ತಿದ್ದಾರೆ. ಜೊತೆಗೆ ಯೆಯ್ಯಾಡಿ, ಕುಳಾಯಿ ಸಹಿತ ಹತ್ತು ಹಲವು ಧಾಮರ್ಿಕ ಶ್ರದ್ದಾ ಕೇಂದ್ರಗಳಲ್ಲಿ ಬೇಡಿಕೆಯ ವ್ಯಕ್ತಿಯಾಗಿ ಸದಾ ಕಲಾಸೇವೆಯಲ್ಲಿ ನಿರತರಾಗಿದ್ದಾರೆ.
  ಹಲವು ಕಮ್ಮಟಗಳ ಸಂಪನ್ಮೂಲ ವ್ಯಕ್ತಿಯಾಗಿ, ಸ್ಪಧರ್ೆಗಳಿಗೆ ತೀಪರ್ುಗಾರರಾಗಿ, ಅವಲೋಕನಕಾರರಾಗಿ ಪಾಲ್ಗೊಳ್ಳುತ್ತಿರುವ ಸೀತಣ್ಣ ಬಹುಮುಖೀ ಪಾಂಡಿತ್ಯ ಹೊಂದಿರುವ ಅಪೂರ್ವ ವ್ಯಕ್ತಿತ್ವದವರು. ಭಾಮಿನೀ ಷಟ್ಪದಿಯ ಪ್ರವಚನ ಶ್ರೀಮದ್ಬಗವದ್ಗೀತಾ ರಚನೆಯ ಮೂಲಕ ಮನೆ-ಮನ ತುಂಬಿದ್ದಾರೆ. ವೀರವರ ಶಕ್ರಜಿತು, ವಸುಂಧರಾತ್ಮಜೆ, ಶತಾಕ್ಷಿ ಸರ್ವಮಂಗಳೆ, ದಂಡಧರ ವೈಭವ ಹಾಗೂ ಮಹಾಬಲಿ ಯಾದವೇಂದ್ರ ಎಂಬ ಐದು ಪ್ರಸಂಗಗಳನ್ನು ಒಳಗೊಂಡ ಪ್ರಸಂಗ ಪಂಚಕ ಕೃತಿ ಸೀತಾರಾಮ ಭಟ್ ಅವರ ಸಾಧನೆಯ ಕೈಗನ್ನಡಿ. ಈ ಕೃತಿಗೆ 2014ನೇ ಸಾಲಿನ ಪುಸ್ತಕ ಪ್ರಶಸ್ತಿ ನೀಡಿ ಕನರ್ಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಗೌರವಿಸಿತ್ತು. ಶ್ರೀಭಾಗವತ ಆಧಾರಿತ ನೃಗನರಾಧಿಪ, ಹವ್ಯಕ ಭಾಷೆಯಲ್ಲಿ ಸನ್ಯಾಸಿ ಮದಿಮ್ಮಾಯ ಹಾಗೂ ಕುಶಾಲಿನಿ ಲಡಾಯಿ ಪ್ರಸಂಗಗಳು ಇವರ ಇತರ ಮಹತ್ ಕೃತಿಗಳು. ಜೊತೆಗೆ ಕುರಿಯ ಕುಂದಣ, ರಾಘವಾಯಣ, ರಂಗನಾಯಕ, ಚೆಲುವ, ಪಾ.ಗೋ. ಜೀವನ ಚರಿತ್ರೆಯೇ ಮೊದಲಾದ ಅಭಿನಂದನಾ ಗ್ರಂಥಗಳ ಸಂಪಾದಕತ್ವದ ಹಿರಿಮೆಯೂ ಸೇರಾಜೆಯವರ ಸಾಧನೆಯ ಸಾಲಿನ ಮಕುಟಗಳು.
  ವಿಟ್ಲ ಗೋಪಾಲಕೃಷ್ಣ ಜೋಶಿ ಪ್ರತಿಷ್ಠಾನ, ಕೀಲಾರು ಪ್ರತಿಷ್ಠಾನ, ಕಲ್ಕೂರ ಪ್ರತಿಷ್ಠಾನ, ನಂದನೇಶ್ವರ ಮಿತ್ರಮಂಡಳಿ, ಶೇಣಿ ಶತಮಾನೋತ್ಸವ ಸಮಿತಿ ಮೊದಲಾದ ಸಂಸ್ಥೆಗಳು ಸೀತಾರಾಮ ಭಟ್ ಅವರ ಕೊಡುಗೆ-ಸಾಧನೆಗಳನ್ನು ಮಾನಿಸಿ ಗೌರವಿಸಿವೆ. ಪತ್ನಿ ಗೀತಾ ಭಟ್ ಹಾಗೂ ಎರಡು ಗಂಡು, ಒಂದು ಹೆಣ್ಣು ಮಕ್ಕಳ ಸಂತೃಪ್ತ ಸಂಸಾರಿಯಾಗಿರುವ ಸೇರಾಜೆ ಸೀತಣ್ಣರಿಗೆ ಇದೀಗ ಹುಟ್ಟೂರ ಸನ್ಮಾನ ದೊರೆಯುತ್ತಿರುವುದು ಸಾಧಕನೊಬ್ಬನ ಸಾರ್ಥಕತೆಯ ದ್ಯೋತಕ.
      

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries