ಯಕ್ಷಗಾನದ ಎಲ್ಲಾ ವಿಭಾಗಗಳ ಆಳ ಅಧ್ಯಯನ ಅಗತ್ಯ-ದಶಾವತಾರಿ ಸೂರಿಕುಮೇರಿ
ಮಂಜೇಶ್ವರ: ವಿವಿಧ ಆಯಾಮಗಳಲ್ಲಿ ವಿಸ್ತಾರತೆಯಿರುವ ಯಕ್ಷಗಾನದ ಎಲ್ಲಾ ವಿಭಾಗಗಳಿಗೂ ವಿಶೇಷ ಮೌಲ್ಯಗಳಿವೆ. ಹೆಜ್ಜೆಗಾರಿಕೆ, ಮಾತುಗಾರಿಕೆಯಂತೆಯೇ ಬಣ್ಣ ಹಾಗೂ ವಸ್ತ್ರಾಲಂಕಾರಕ್ಕೂ ಅದರದ್ದೇ ಶಾಸ್ತ್ರೀಯತೆ ಇದ್ದು, ಆ ಬಗೆಗಿನ ತರಬೇತಿ-ಮಾರ್ಗದರ್ಶನಗಳೂ ಕಲಾವಿದರಾಗುವವರಿಗೆ ಅಗತ್ಯವಿದೆ ಎಂದು ಹಿರಿಯ ಯಕ್ಷಗಾನ ಕಲಾವಿದ, ದಶಾವತಾರಿ ಸೂರಿಕುಮೇರಿ ಗೋವಿಂದ ಭಟ್ ಅಭಿಪ್ರಾಯ ವ್ಯಕ್ತಪಡಿಸಿದರು.
ಕನರ್ಾಟಕ ಯಕ್ಷಗಾನ ಅಕಾಡೆಮಿ ನೇತೃತ್ವದಲ್ಲಿ ಕೋಳ್ಯೂರು ಶ್ರೀಶಂಕರನಾರಾಯಣ ಕ್ಷೇತ್ರದ ಸಭಾ ಭವನದಲ್ಲಿ ಆಯೋಜಿಸಲಾದ ಯಕ್ಷಗಾನ ಬಣ್ಣಗಾರಿಕೆ-ನೃತ್ಯಗಾರಿಕೆ ತರಬೇತಿ ಶಿಬಿರವನ್ನು ಭಾನುವಾರ ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ಶಾಸ್ತ್ರೀಯ ಬಣ್ಣಗಾರಿಕೆಯ ದೃಷ್ಟಿಯಿಂದ ಹವ್ಯಾಸಿ ಕಲಾವಿದರು ಅರಿವಿನ ಕೊರತೆಯಿಂದ ತೊಂದರೆಗೊಳಗಾಗುತ್ತಾರೆ. ಯಕ್ಷಗಾನ ಕ್ಷೇತ್ರದ ವಿವಿಧ ತರಬೇತಿಗಳು, ಕಮ್ಮಟಗಳು ಆಯೋಜನೆಗೊಳ್ಳುತ್ತಿದ್ದರೂ ಬಣ್ಣಗಾರಿಕೆಯ ಬಗ್ಗೆ ಗಂಭೀರವಾದ ಪ್ರಯತ್ನಗಳು ವಿರಳವಾಗಿ ಆಯೋಜನೆಗೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಅಕಾಡೆಮಿಯು ಸ್ಥಳೀಯ ಆಸಕ್ತರನ್ನು ಜೊತೆಗೂಡಿಸಿ ಶಿಬಿರ ಆಯೋಜಿಸಿರುವುದು ಸ್ತುತ್ಯರ್ಹ ಕಾರ್ಯ ಎಂದು ಅವರು ತಿಳಿಸಿದರು. ಯುವ ಸಮೂಹ ಯಕ್ಷಗಾನ ಕಲಾಸಕ್ತರಾಗಿ ಮುಂದೆಬರುತ್ತಿರುವುದು ಸಂತಸದ ವಿಷಯ. ಆದರೆ ಪರಂಪರೆಯನ್ನು ಉಳಿಸುವ ನಿಟ್ಟಿನಲ್ಲಿ ಶ್ರದ್ದೆಯ ಅಧ್ಯಯನಕ್ಕೆ ಮಾಡಬೇಕು ಎಂದು ಈ ಸಂದರ್ಭ ಅವರು ತಿಳಿಸಿದರು.
ಕನರ್ಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ನ್ಯಾಯವಾದಿ ದಾಮೋದರ ಶೆಟ್ಟಿ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಯುವ ಕಲಾವಿದರಿಗೆ ಮಾರ್ಗದಶರ್ಿಯಾಗುವ ನಿಟ್ಟಿನಲ್ಲಿ ಅಕಾಡೆಮಿಯು ಇಂತಹ ಶಿಬಿರಗಳ ಆಯೋಜನೆಗೆ ಸಹಕಾರ ನೀಡುವುದು. ಸಂಘಟನೆಗಳು, ಕಲಾವಿದರು ಈ ನಿಟ್ಟಿನಲ್ಲಿ ಆಸಕ್ತರಾಗಬೇಕು. ಹಿರಿಯ ಕಲಾವಿದರ ಮಾರ್ಗದರ್ಶನ ರಕ್ಷೆಗೆ ಮನಮಾಡಬೇಕು ಎಂದು ತಿಳಿಸಿದರು.
ಕನರ್ಾಟಕ ಸಾಂಸ್ಕೃತಿಕ ಪ್ರತಿಷ್ಠಾನ ಬೆಂಗಳೂರಿನ ಅಧ್ಯಕ್ಷ ಎಸ್.ಎನ್.ಪಂಜಾಜೆ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿ, ಗ್ರಾಮೀಣ ಪ್ರದೇಶಗಳ ಯಕ್ಷಗಾನಾಸಕ್ತ ಯುವಜನರ ಸಂಘಟನಾತ್ಮಕ ಚಟುವಟಿಕೆ ಎಲ್ಲೆಡೆಗೂ ಮಾದರಿ. ಇಂತಹ ಶಿಬಿರಗಳ ಆಯೋಜನೆಯ ಮೂಲಕ ಅರಿವನ್ನು ಪಡೆಯುವುದರ ಜೊತೆಗೆ ಯಕ್ಷಗಾನ ಕ್ಷೇತ್ರದ ವಿಸ್ತಾರ ಬೆಳವಣಿಗೆಗೆ ಅಳಿಲ ಸೇವೆ ನೀಡುವಲ್ಲಿ ಸಫಲಗೊಳ್ಳಲಿ ಎಂದು ತಿಳಿಸಿದರು.
ಹವ್ಯಾಸಿ ತಾಳಮದ್ದಳೆ ಅರ್ಥಧಾರಿ ನ್ಯಾಯವಾದಿ ವಿಠಲ ಭಟ್ ಮೊಗಸಾಲೆ, ನಿವೃತ್ತ ಮುಖ್ಯೋಪಾಧ್ಯಾಯ ಕೊಮ್ಮೆ ತಿಮ್ಮಣ್ಣ ಭಟ್, ಡಾ.ಬಾಲಸುಬ್ರಹ್ಮಣ್ಯ ಭಟ್ ಬರೆಮನೆ, ನಾಟ್ಯಗುರು ಅಶ್ವತ್ ಮಂಜನಾಡಿ, ಕಾರ್ಯಕ್ರಮ ಸಂಯೋಜಕ ಮಹಾಬಲೇಶ್ವರ ಭಟ್ ಕೊಮ್ಮೆ ಉಪಸ್ಥಿತರಿದ್ದು ಶುಭಹಾರೈಸಿದರು.
ಶ್ರೀಕೃಷ್ಣ ಭಟ್ ಸುಣ್ಣಂಗುಳಿ ಸ್ವಾಗತಿಸಿ, ವಂದಿಸಿದರು. ಅಭಿಲಾಷಾ ಕಿಶೋರ್ ಕೊಮ್ಮೆ ಕಾರ್ಯಕ್ರಮ ನಿರೂಪಿಸಿದರು. ಪ್ರತಿ ಭಾನುವಾರ ಬೆಳಿಗ್ಗೆ 10 ರಿಂದ 12ರ ವರೆಗೆ ಬಣ್ಣಗಾರಿಕಾ ತರಬೇತಿ ಶಿಬಿರ ನಡೆಯಲಿದ್ದು, ಆಸಕ್ತರು ಸಂಘಟಕರನ್ನು ಸಂಪಕಿಸಬಹುದಾಗಿದೆ.