HEALTH TIPS

ಯಾವುದೇ ಶೀರ್ಷಿಕೆಯಿಲ್ಲ

            ಸ್ಕೌಟಿಂಗ್ ತರಬೇತಿ ಪಡೆದ ಅಧ್ಯಾಪಕರು ನಾಡಿಗೆ  ದಾರಿದೀಪವಾಗಲಿ - ನಂದಿಕೇಶನ್
      ಕುಂಬಳೆ: ಸ್ಕೌಟು ಅಧ್ಯಾಪಕರಾಗಿ ತರಬೇತಿ ಪಡೆಯುತ್ತಿರುವವರು ನಾಡಿಗೆ ದಾರಿದೀಪವಾಗಿ ಕಾಸರಗೋಡು ಜಿಲ್ಲೆಯಾದ್ಯಂತ ಸಾವಿರಾರು ಮಕ್ಕಳಿಗೆ ಸ್ಕೌಟಿಂಗ್ ಎಂಬ ಪಾವನವಾದ ಚಳವಳಿಯ ಅನುಭವವನ್ನು ನೀಡಿ ಸಮಾಜಕ್ಕೆ ದಾರಿದೀಪವಾಗಲಿ ಎಂದು ಕಾಸರಗೋಡು ಜಿಲ್ಲಾ ಶಿಕ್ಷಣಾಧಿಕಾರಿ ನಂದಿಕೇಶನ್ ನುಡಿದರು.
  ಅವರು ಪೇರಾಲು ಸರಕಾರಿ ಕಿರಿಯ ಬುನಾದಿ ಶಾಲೆಯಲ್ಲಿ ನಡೆಯುತ್ತಿರುವ ಏಳು ದಿನಗಳ ಸ್ಕೌಟು ಅಧ್ಯಾಪಕರ ಮೂಲ ತರಬೇತಿ ಶಿಬಿರಕ್ಕೆ ಭೇಟಿ ನೀಡಿ ಶಿಬಿರಾಥರ್ಿಗಳನ್ನುದ್ದೇಶಿಸಿ ಮಾತನಾಡಿದರು.
    ತರಬೇತಿಯಲ್ಲಿ ಪಾಲ್ಗೊಳ್ಳುತ್ತಿರುವ ಅಧ್ಯಾಪಕರ ತ್ಯಾಗವನ್ನು ಎಷ್ಟು ಕೊಂಡಾಡಿದರೂ ಸಾಲದು. ಯಾವುದೇ ಪ್ರತಿಫಲ ಸಿಗದ ಚಳವಳಿ ಎಂದು ಸ್ಪಷ್ಟ ಗೊತ್ತಿದ್ದರೂ ಮುಂದಿನ ಪ್ರಜೆಗಳಾಗಲಿರುವ ಮಕ್ಕಳಿಗೆ ಜೀವನಪಾಠವನ್ನು ನೈಜ ಚಟುವಟಿಕೆಗಳ ಮೂಲಕ ನೀಡುವುದರ ಬಗ್ಗೆ ಹೊಸ ಅರಿವನ್ನು ಪಡೆಯಲು ಬಂದಿರುವುದು ಹೆಮ್ಮೆಯಾಗಿದೆ. ಡೇರೆಯಲ್ಲಿ ಮಲಗಿ ಮುಂಜಾವದಿಂದ ತಡರಾತ್ರಿಯ ವರೆಗೆ ನಿರಂತರ ಚಟುವಟಿಕೆಗಳಲ್ಲಿ ನಿರತರಾಗಿ ನೀಡಲಾಗುವ ತರಬೇತಿ ವಿಚಾರಗಳನ್ನು ಸ್ವತಃ ಅನುಭವಸಿ ಕಲಿಯುವ ವೈಶಿಷ್ಟ್ಯಪೂರ್ಣವಾದ ತರಬೇತಿಯಲ್ಲಿ ಭಾಗವಹಿಸುತ್ತಿರುವುದು ಶ್ಲಾಘನೀಯ ಎಂದರು.
  ಸೆಪ್ಟೆಂಬರ್ 29ರಂದು ಆರಂಭವಾದ ಶಿಬಿರವನ್ನು ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಮುಹಮ್ಮದ್ ಬಿ.ಎ ಪೇರಾಲು ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ ಕೈಲಾಸಮೂತರ್ಿ ಉದ್ಘಾಟಿಸಿದ್ದರು. ಕಾಸರಗೋಡು ಮತ್ತು ಕಾಞ್ಞಂಗಾಡು ಶಿಕ್ಷಣ ಜಿಲ್ಲೆಗಳ ವಿವಿಧ ಶಾಲೆಗಳಿಂದ ಆಗಮಿಸಿದ 32 ಮಂದಿ ಅಧ್ಯಾಪಕರು ಮತ್ತು ಅಧ್ಯಾಪಕಿಯರು ಉತ್ಸಾಹದಿಂದ ಶಿಬಿರದಲ್ಲಿ ಭಾಗವಹಿಸಿ ವೈವಿಧ್ಯಮಯ ವಿಚಾರಗಳನ್ನು ಮನನ ಮಾಡಿಕೊಳ್ಳುತ್ತಿದ್ದಾರೆ. ಜಿಲ್ಲಾ ಸ್ಕೌಟು ವಿಭಾಗದ ಆಯುಕ್ತ ಗುರುಮೂತರ್ಿ ನಾಯ್ಕಾಪು ಅವರ ನೇತೃತ್ವದಲ್ಲಿ ನಡೆಯುತ್ತಿರುವ ಏಳು  ದಿನಗಳ ತರಬೇತಿ ಶಿಬಿರ ಯಶಸ್ವಿಯಾಗಿ ನಡೆಯುವುದಕ್ಕಾಗಿ ಕೂಡ್ಲು ಗೋಪಾಲಕೃಷ್ಣ ಪ್ರೌಢಶಾಲಾ ಸ್ಕೌಟು ಅಧ್ಯಾಪಕ ಕಿರಣ್ ಪ್ರಸಾದ್ ಪಿಜಿ., ಮಧೂರು ಸರಕಾರಿ ಶಾಲಾ ಮುಖ್ಯ ಶಿಕ್ಷಕ ವಿನೋದ್ ಕುಮಾರ್, ಕಾಟುಕುಕ್ಕೆ ಶಾಲಾ ಅಧ್ಯಾಪಕ ವಿಜಯಕುಮಾರ್, ಕುಂಟಿಕಾನ ಶಾಲಾ ಅಧ್ಯಾಪಕ ಪ್ರಶಾಂತ್ ಕುಮಾರ್ ಕಾಲಿಚ್ಚಾನಡ್ಕ ಶಾಲಾ ಅಧ್ಯಾಪಕ ವಿ.ಕೆ ಭಾಸ್ಕರನ್ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
   ಪಟಾಲಂ ಎಂದು ಕರೆಯಲಾಗುವ ಆರರಿಂದ ಎಂಟು ಮಂದಿಯ ಗುಂಪುಗಳಲ್ಲಿ ಡೇರೆಯಲ್ಲಿ ವಾಸ ಮಾಡಿಕೊಂಡು ಸ್ಕೌಟು ಅಧ್ಯಾಪಕರ ಪ್ರಾಥಮಿಕ ತರಬೇತಿಯಲ್ಲಿ ಭಾಗವಹಿಸುವ ಶಿಬಿರಾಥರ್ಿಗಳು ಗಂಟುಗಳು, ಪ್ರಥಮ ಚಿಕಿತ್ಸೆ, ಬ್ಯಾಂಡೇಜು ಕಟ್ಟುವುದು, ತೆರವಾದ ಸ್ಥಳದಲ್ಲಿ ಬೆಂಕಿ ಮಾಡುವುದು ಮತ್ತು ಅಗ್ನಿ ಬಾಧೆಯ ಶಮನ, ದಿಕ್ಚಕ್ರದ  ಉಪಯೋಗ, ಅಂದಾಜು ಮಾಡುವುದು, ಸಿಗ್ನಲಿಂಗ್, ಟ್ರೂಪ್ ಮೀಟಿಂಗ್ , ಪಥಸಂಚಲನ, ಬಿಪಿಯವರ ಆರು ವ್ಯಾಯಾಮಗಳು ಮೊದಲಾದ ವಿಷಯಗಳನ್ನು ಸ್ವತಃ ಮಾಡಿ ಕಲಿಯುತ್ತಿದ್ದಾರೆ.
  ಶಿಬಿರದ ಅಂಗವಾಗಿ ಸ್ವತಃ ತೆರವಾದ ಸ್ಥಳಧಲ್ಲಿ ಅಡುಗೆ ಮಾಡಿ ಆಹಾರ ಸೇವನೆ, ಶಿಬಿರಾಗ್ನಿ ಇತ್ಯಾದಿ ಕಾರ್ಯಕ್ರಮಗಳಿರುತ್ತವೆ. ಕುಂಬಳೆ ಗ್ರಾಮ ಪಂಚಾಯತು ಸ್ಥಾಯಿ ಸಮಿತಿ ಅಧ್ಯಕ್ಷ ಎ.ಕೆ ಆರಿಫ್, ಹಮೀದಾಲಿ, ಕುಂಬಳೆ ಗ್ರಾಮ ಪಂಚಾಯತಿ ಸದಸ್ಯ  ವಿ.ಪಿ. ಅಬ್ದುಲ್ ಖಾದರ್ ಹಾಜಿ, ಕಾಸರಗೋಡು ಉಪಜಿಲ್ಲಾ ವಿದ್ಯಾಧಿಕಾರಿ ಅಗಸ್ಟಿನ್ ಬನರ್ಾಡ್, ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ದಿನೇಶ ಕೆ ಮೊದಲಾದವರು ಶಿಬಿರಕ್ಕೆ ಭೇಟಿ ನೀಡಿ ಶಿಬಿರಾಥರ್ಿಗಳಿಗೆ ಶುಭರಹಾರೈಸಿರುವರು. ಶುಕ್ರವಾರ ಸಂಜೆ ಸರ್ವಧರ್ಮ ಪ್ರಾರ್ಥನೆ ಹಾಗೂ ಧ್ವಜಾವರೋಹಣದೊಂದಿಗೆ ಶಿಬಿರ ಸಮಾರೋಪಗೊಂಡಿತು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries