ಗ್ರಾಮೀಣ ರಸ್ತೆಗಳ ಲೋಕಾರ್ಪಣೆ
ಉಪ್ಪಳ: ಪೈವಳಿಕೆ ಪಂಚಾಯತ್ ವ್ಯಾಪ್ತಿಯಲ್ಲಿ ನಿಮರ್ಾಣ ಕಂಡ ನಾಲ್ಕು ಪ್ರಮುಖ ಗ್ರಾಮೀಣ ರಸ್ತೆ ಸಂಪರ್ಕವನ್ನು ಶಾಸಕ ಪಿ.ಬಿ ಅಬ್ದುಲ್ ರಜಾಕ್ ಗುರುವಾರ ಉದ್ಘಾಟಿಸಿದರು. ಗಾಳಿಯಡ್ಕ ಸಾಗು-ಸಜಂಕಿಲ ರಸ್ತೆ, ಧರ್ಮಡ್ಕ-ಆವಳ ಮಸೀದಿ ರಸ್ತೆ, ಪಾಕ-ಅಂಬಿಕಾನ ರಸ್ತೆ ಸೇರಿದಂತೆ ಇತ್ತೀಚೆಗೆ ಡಾಮರೀಕರಣಗೊಂಡ ಕನಿಯಾಲ- ಚಿಮಿಣಿತ್ತಡ್ಕ ರಸ್ತೆಯನ್ನು ಶಾಸಕರು ಲೋಕಾರ್ಪಣೆಗೊಳಿಸಿದರು.
ಈ ಸಂದರ್ಭ ಮಾತನಾಡಿದ ಅವರು ಗ್ರಾಮೀಣ ರಸ್ತೆ ಅಭಿವೃದ್ಧಿಯು ಜನರನ್ನು ಬೆಸೆಯುತ್ತದೆ ಮಾತ್ರವಲ್ಲದೆ ಆಧುನಿಕ ಕಾಲಘಟ್ಟದಲ್ಲಿ ಗ್ರಾಮೀಣಾಭಿವೃದ್ಧಿಯ ದ್ಯೋತಕವಾಗಿದೆ ಎಂದರು. ಪ್ರತಿ ಗ್ರಾಮ ಪ್ರದೇಶಗಳಲ್ಲೂ ರಸ್ತೆ ಸೌಕರ್ಯದೊಂದಿಗೆ ರಸ್ತೆ ಸಂಪರ್ಕ ಏರ್ಪಡಬೇಕು ಹಾಗಿದ್ದಲ್ಲಿ ಮಾತ್ರವಷ್ಟೇ ಗುರುತರ ಬದಲಾವಣೆಯನ್ನು ಎಲ್ಲ ಸ್ತರದಲ್ಲೂ ಕಾಣಲು ಸಾಧ್ಯ ಎಂದರು. ಗ್ರಾಮೀಣ ರಸ್ತೆಗಳು ಗ್ರಾಮಸ್ಥರ ಸಹಭಾಗಿತ್ವದಲ್ಲಿ ನಿಮರ್ಾಣವಾಗುತ್ತವೆ, ಯಾತ್ರಾಸ್ಥಳ ಪೊಸಡಿಗುಂಪೆ ಸಹಿತ ಧಾಮರ್ಿಕ ಕೇಂದ್ರಗಳಿಗೆ ನೂತನವಾಗಿ ನಿಮರ್ಾಣ ಕಂಡ ಸಾಗು ರಸ್ತೆ ಸಂಪರ್ಕ ಕಲ್ಪಿಸುತ್ತದೆ ಎಂದರು. ಈ ಸಂದರ್ಭ ಕಾಸರಗೋಡಿನಿಂದ ಪೊಸಡಿಗುಂಪೆ ಮಾರ್ಗವಾಗಿ ಉಪ್ಪಳಕ್ಕೆ ಸಂಪರ್ಕ ಕಲ್ಪಿಸುವ ಕೆ.ಎಸ್.ಆರ್.ಟಿ.ಸಿ ಬಸ್ಸು ಸೇವೆಯನ್ನು ಆರಂಭಿಸುವಂತೆ ಮನವಿ ಸಲ್ಲಿಸಲಾಯಿತು. ಪ್ರಮುಖ ರಸ್ತೆಗಳ ಉದ್ಘಾಟನೆ ಸಂದರ್ಭ ಕಾಸರಗೋಡು ಜಿ.ಪಂ ಸದಸ್ಯೆ ಪುಪ್ಪಾ ಅಮೆಕ್ಕಳ, ಗ್ರಾ.ಪಂ ಸದಸ್ಯ ಸುಬ್ರಹ್ಮಣ್ಯ ಭಟ್, ಗಣೇಶ್ ಸುದೆಂಬಳ, ಅಂದುಂಞ ಹಾಜಿ, ಹಮೀದ್ ಕುಂಜಾಲಿ, ಅಶ್ವಥ್ ಎಂ.ಸಿ, ವಸಂತ ಸಾಗ್, ಝೆಡ್.ಎ. ಕಯ್ಯಾರ್, ಅಜೀಜ್ ಕಳಾಯಿ, ಸಿದ್ದೀಖ್ ನ್ಯಾಶನಲ್, ಇಸ್ಮಾಯಿಲ್ ಮಲಬಾರ್ ಮೊದಲಾದವರು ಉಪಸ್ಥಿತರಿದ್ದರು.