ಶಬರಿಮಲೆ ತೀಪರ್ಿನ ವಿರುದ್ಧ ಮೇಲ್ಮನವಿಗೆ ಹೆಚ್ಚಿದ ಒತ್ತಡ
ತಿರುವನಂತಪುರ: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನ ಪ್ರವೇಶಕ್ಕೆ ಮಹಿಳೆಯರಿಗೆ ಅವಕಾಶ ಕಲ್ಪಿಸಿರುವ ಸುಪ್ರೀಂ ಕೋಟರ್್ ತೀಪರ್ಿನ ವಿರುದ್ಧ ಮರು ಪರಿಶೀಲನಾ ಅಜರ್ಿ ಸಲ್ಲಿಸಲು ಹಿಂದೇಟು ಹಾಕಿರುವ ಪಿಣರಾಯಿ ವಿಜಯನ್ ನೇತೃತ್ವದ ಕಮ್ಯುನಿಸ್ಟ್ ಸರಕಾರದ ವಿರುದ್ಧ ಬಿಜೆಪಿ ಮತ್ತು ಕಾಂಗ್ರೆಸ್ ಹರಿಹಾಯ್ದಿವೆ.
ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಅದರದ್ದೇ ಆದ ಆಚರಣೆ ಹಾಗೂ ಪಾವಿತ್ರ್ಯ ಇದೆ. ಆ ನಂಬಿಕೆಯನ್ನು ಗೌರವಿಸಬೇಕು ಎಂದು ಕಾಂಗ್ರೆಸ್ ಹೇಳಿದೆ. ರಾಜ್ಯ ಸರಕಾರವು ಭಕ್ತರ ನಂಬಿಕೆಯನ್ನು ನಾಶ ಮಾಡಲು ಹೊರಟಿದೆ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.
ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ)ಯ ಮಾಜಿ ಅಧ್ಯಕ್ಷರು ಹಾಗೂ ಸದಸ್ಯರ ಜತೆ ಗುರುವಾರ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ನಾಯಕ ರಮೇಶ್ ಚೆನ್ನಿಥಾಲ, ಕಾಂಗ್ರೆಸ್ ಹಿಂದೂಗಳ ನಂಬಿಕೆಯ ಪರ ನಿಲ್ಲುತ್ತದೆ. ಅವರ ನಂಬಿಕೆಗೆ ಧಕ್ಕೆಯಾಗುವ ಯಾವುದೇ ಕ್ರಮವನ್ನು ವಿರೋಧಿಸುತ್ತದೆ ಎಂದರು. ಈ ವಿಷಯದಲ್ಲಿ ಬಿಜೆಪಿ ಪ್ರಾಮಾಣಿಕ ಧೋರಣೆ ಹೊಂದಿದ್ದರೆ, ಸುಪ್ರೀಂ ಕೋಟರ್್ ತೀರ್ಪನ್ನು ಬದಿಗೆ ಸರಿಸುವ ದಿಸೆಯಲ್ಲಿ ಕಾನೂನುವೊಂದನ್ನು ರೂಪಿಸಲು ಕೇಂದ್ರ ಸರಕಾರದ ಮೇಲೆ ಒತ್ತಡ ಹಾಕಬೇಕು ಎಂದು ಆಗ್ರಹಿಸಿದರು.
ದೇವಸ್ಥಾನದ ಸಂಪ್ರದಾಯಕ್ಕೆ ಧಕ್ಕೆ ಉಂಟು ಮಾಡಿರುವ ತೀಪರ್ಿನ ವಿರುದ್ಧ ಭಕ್ತರು ನಡೆಸುತ್ತಿರುವ ಹೋರಾಟಕ್ಕೆ ತಮ್ಮ ಸಂಪೂರ್ಣ ಬೆಂಬಲವಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಪಿ.ಶ್ರೀಧರನ್ ಪಿಳ್ಳೈ ತಿಳಿಸಿದರು. ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಪಿಐ(ಎಂ) ನೇತೃತ್ವದ ಎಲ್ಡಿಎಫ್ ಸರಕಾರಕ್ಕೆ ಶಬರಿಮಲೆ ದೇವಸ್ಥಾನದ ಬಗ್ಗೆ ಗೌರವ ಇಲ್ಲ. ಹಿಂದಿನಿಂದಲೂ ದೇವಸ್ಥಾನದ ಪ್ರಾಮುಖ್ಯತೆ ತಗ್ಗಿಸುವ ಕೆಲಸ ಮಾಡುತ್ತಲೇ ಬಂದಿದೆ. ಈಗ ಹಿಂದೂಗಳ ನಂಬಿಕೆಗೆ ವಿರುದ್ಧವಾಗಿ ವತರ್ಿಸುವುದರ ಜತೆಗೆ ದೇವಸ್ಥಾನದ ಪಾವಿತ್ರ್ಯವನ್ನೇ ನಾಶಮಾಡಲು ಹೊರಟಿದೆ ಎಂದು ಆರೋಪಿಸಿದರು. ರಾಜ್ಯ ಸರಕಾರ ಈ ವಿಷಯದಲ್ಲಿ ಉದ್ಧಟತನ ತೊರೆದು ಸುಪ್ರೀಂ ಕೋಟರ್್ಗೆ ಮರು ಪರಿಶೀಲನಾ ಅಜರ್ಿ ಸಲ್ಲಿಸಬೇಕು ಎಂದು ಆಗ್ರಹಿಸಿದರು.
ಬಿಜೆಪಿ ಪ್ರತಿಭಟನೆ:
ಬಿಜೆಪಿ ಮಹಿಳಾ ಮೋಚರ್ಾ ಹಾಗೂ ಯುವಮೋಚರ್ಾ ಕಾರ್ಯಕರ್ತರು ರಾಜ್ಯ ಸರಕಾರದ ವಿರುದ್ಧ ಪ್ರತಿಭಟನೆ ಆರಂಭಿಸಿದ್ದಾರೆ. ಸುಪ್ರೀಂ ತೀಪರ್ಿನ ವಿರುದ್ಧ ಮೇಲ್ಮನವಿಗೆ ಆಗ್ರಹಿಸಿ ತಿರುವನಂತಪುರಂನಲ್ಲಿರುವ ಟಿಡಿಬಿ ಕಚೇರಿ ಆವರಣದಲ್ಲಿ ಗುರುವಾರ ಧರಣಿ ನಡೆಸಿದರು. ಕೇರಳದ ನಾಯರ್ ಸವರ್ಿಸ್ ಸೊಸೈಟಿ ಸಹ ಸುಪ್ರೀಂ ತೀಪರ್ು ದುರದೃಷ್ಟಕರ ಎಂದು ಹೇಳಿದ್ದು, ಮೇಲ್ಮನವಿ ಸಲ್ಲಿಸುವಂತೆ ಒತ್ತಾಯಿಸಿದೆ.
ಕೆಲವು ಸಂಘಟನೆಗಳು ಡಿಟಿಬಿ ಅಧೀನದಲ್ಲಿರುವ ದೇಗುಲಗಳ ಹುಂಡಿಗೆ ಹಣ ಹಾಕದೇ, 'ಸ್ವಾಮಿ ಶರಣಂ ಅಯ್ಯಪ್ಪ' ಎಂಬ ಬರಹದ ಚೀಟಿಗಳನ್ನು ಹಾಕುವ ಮೂಲಕವೂ ಪ್ರತಿಭಟನೆ ವ್ಯಕ್ತಪಡಿಸಲು ನಿರ್ಧರಿಸಿವೆ. ಇದರ ನಡುವೆಯೇ ಅಕ್ಟೋಬರ್ 16ರಿಂದ ವಾಷರ್ಿಕ ಪೂಜಾ ಕೈಂಕರ್ಯಗಳಿಗಾಗಿ ಅಯ್ಯಪ್ಪ ಸ್ವಾಮಿ ದೇಗುಲ ತೆರೆದುಕೊಳ್ಳಲಿದ್ದು, ಮಹಿಳಾ ಭಕ್ತಾದಿಗಳಿಗೆ ಅಗತ್ಯ ಮೂಲಸೌಲಭ್ಯ ಕಲ್ಪಿಸಲು ಸರಕಾರ ಸಿದ್ಧತೆ ಕೈಗೊಂಡಿದೆ.