HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                 ಕೊಲ್ಲಂಗಾನ ಶ್ರೀಕ್ಷೇತ್ರದಲ್ಲಿ ನವರಾತ್ರಿ ಮಹೋತ್ಸವ- ಯಕ್ಷದಶ ವೈಭವ
    ಬದಿಯಡ್ಕ: ನೀಚರ್ಾಲು ಸಮೀಪದ ಕೊಲ್ಲಂಗಾನ ಶ್ರೀನಿಲಯ ಶ್ರೀದುಗರ್ಾಪರೇಶ್ವರಿ ಕ್ಷೇತ್ರದಲ್ಲಿ ವಾಷರ್ಿಕ ನವರಾತ್ರಿ ಮಹೋತ್ಸವ ಅ.10 ರಿಂದ 19ರ ವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
   ಕಾರ್ಯಕ್ರಮದ ಅಂಗವಾಗಿ ಅ.10 ರಂದು ಬುಧವಾರ ಶ್ರೀದೇವರ ಪ್ರತಿಷ್ಠೆ, ಪೂಜೆಗಳು ಆರಂಭಗೊಳ್ಳುವುದು. ಅ.14 ರಂದು ಭಾನುವಾರ ಲಲಿತಾ ಪಂಚಮಿ ಅಂಗವಾಗಿ ರಾತ್ರಿ ಲಲಿತೋಪಖ್ಯಾನ ಹಾಗೂ ಸಪ್ತಶತೀ ಪಾರಾಯಣ, ರಂಗಪೂಜೆ ನಡೆಯಲಿದೆ. ಅ.15 ರಂದು ಶಾರದಾ ಪೂಜಾರಂಭ, 18 ರಂದು ಮಹಾನವಮಿ ಉತ್ಸವದ ಅಂಗವಾಗಿ ಬೆಳಿಗ್ಗೆ 8ಕ್ಕೆ 12ಕಾಯಿ ಗಣಹವನ, ಮಆಯುಧಪೂಜೆ, ಮಧ್ಯಾಹ್ನ 12ಕ್ಕೆ ದುಗರ್ಾಹೋಮ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ಮಹಾನವಮಿ ಉತ್ಸವ, ರಂಗಪೂಜೆ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಅ.19 ರಂದು ಬೆಳಿಗ್ಗೆ 8ಕ್ಕೆ ಶಾರದಾಪೂಜೆ, ವಿದ್ಯಾರಂಭ, 11 ರಿಂದ ಶ್ರೀಸೂಕ್ತಪಾರಾಯಣ ಹಾಗೂ ಹೋಮ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ರಾತ್ರಿ ವಿಜಯದಶಮಿ ಉತ್ಸವ, ರಂಗಪೂಜೆ, ಮೂಲಪೀಠದಲ್ಲಿ ದೇವರ ಪ್ರತಿಷ್ಠಾಪನೆಯೊಂದಿಗೆ ನವರಾತ್ರಿ ಮಹೋತ್ಸವ ಸಂಪನ್ನಗೊಳ್ಳಲಿದೆ.
   ಶ್ರೀಕ್ಷೇತ್ರದ ನವರಾತ್ರಿ ಮಹೋತ್ಸವದ ಅಂಗವಾಗಿ ಕೊಲ್ಲಂಗಾನದ ಶ್ರೀಸುಬ್ರಹ್ಮಣ್ಯೇಶ್ವರ ಯಕ್ಷಗಾನ ಕಲಾಸಂಘದ 30ನೇ ವಾಷರ್ಿಕೋತ್ಸವದ ಅಂಗವಾಗಿ ಯಕ್ಷ ದಶ ವೈಭವ ಯಕ್ಷಗಾನ ಪ್ರದರ್ಶನಗಳು, ಗೌರವಾಭಿನಂದನೆ ಸಮಾರಂಭ ನಡೆಯಲಿದೆ.
  ಅ.10 ರಂದು ಸಂಜೆ 6 ರಿಂದ ಯಕ್ಷದಶ ವೈಭವದ ಉದ್ಘಾಟನೆ ನಡೆಯಲಿದ್ದು, ಬ್ರಹ್ಮಶ್ರೀ ವಾಸುದೇವ ತಂತ್ರಿ ಕುಂಟಾರು ಅಧ್ಯಕ್ಷತೆ ವಹಿಸುವರು. ಭಾಗತ ಸಿರಿಬಾಗಿಲು ರಾಮಕೃಷ್ಣ ಮಯ್ಯ ಉದ್ಘಾಟಿಸುವರು. ಬ್ರಹ್ಮಶ್ರೀ ಗಣಾಧಿರಾಜ ಉಪಾಧ್ಯಾಯ ಕೊಲ್ಲಂಗಾನ ಉಪಸ್ಥಿತರಿದ್ದು ಆಶೀರ್ವಚನ ನೀಡುವರು. ಬಾಗಲಕೋಟೆಯ ವರದಹಸ್ತ ವಿದ್ಯಾಲಯದ ಅಧ್ಯಕ್ಷ ಡಾ.ರಾಘವೇಂದ್ರ ಫತ್ತೇಪೂರ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಶ್ಯಾಮ್ ಪ್ರಸಾದ್ ಮಾನ್ಯ ಹಾಗೂ ಮಂಜುನಾಥ ಡಿ ಮಾನ್ಯ ಶುಭಾಶಂಸನೆಗೈಯ್ಯುವರು. ಬಳಿಕ ಮುಳ್ಳೇರಿಯ ಕೋಳಿಯಡ್ಕದ ಚಾಕಟೆ ಚಾಮುಂಡಿ ಯಕ್ಷಗಾನ ಕಲಾಸಂಘದವರಿಂದ ನರಕಾಸುರ ಮೋಕ್ಷ ಯಕ್ಷಗಾನ ಬಯಲಾಟ ನಡೆಯಲಿದೆ. ಅ.11 ರಂದು ಕುಂಟಾಲುಮೂಲೆ ಚಿರಂಜೀವಿ ಯಕ್ಷಗಾನ ಕಲಾಸಂಘದವರಿಂದ ಭಸ್ಮಾಸುರ ಮೋಹಿನಿ, 12ರಂದು ಕುಂಟಾರು ಶ್ರೀಮಹಾವಿಷ್ಣುಮೂತರ್ಿ ಯಕ್ಷಗಾನ ಕಲಾಸಂಘದವರಿಂದ ಗುರುದಕ್ಷಿಣೆ, 13 ರಂದು ಮುಳ್ಳೇರಿಯದ ಶ್ರೀದುಗರ್ಾಪರಮೇಶ್ವರಿ ಯಕ್ಷಗಾನ ಕಲಾಸಂಘದವರಿಂದ ಕರಂಡಕಾಸುರ ವಧೆ, 14 ರಂದು ನೀಚರ್ಾಲು ಶ್ರೀವಿಘ್ನೇಶ್ವರ ಕಲಾಸಂಘದವರಿಂದ ಇಂದ್ರಜಿತು ಕಾಳಗ, 15 ರಂದು ಬೆಟ್ಟಂಪಾಡಿ ಶ್ರೀಮಹಾಲಿಂಗೇಶ್ವರ ಯಕ್ಷಗಾನ ಕಲಾಸಂಘದವರಿಂದ ಸುದರ್ಶನ ವಿಜಯ, 16 ರಂದು ಕುಂಟಿಕಾನ ಕೊಲ್ಲಂಪಾರೆಯ ಶ್ರೀಶಂಕರನಾರಾಯಣ ಯಕ್ಷಗಾನ ಕಲಾಸಂಘದವರಿಂದ ಹಿರಣ್ಯಾಕ್ಷ ವಧೆ, 17 ರಂದು ಬದಿಯಡ್ಕದ ಸುಬ್ರಹ್ಮಣ್ಯ ಭಟ್ ಮತ್ತು ಬಳಗದವರಿಂದ ಜಾಂಬವತೀ ಕಲ್ಯಾಣ, 18 ರಂದು ಬೆಳಿಗ್ಗೆ 10 ರಿಂದ ಕುಂಬಳೆ ನಾರಾಯಣಮಂಗಲದ ಶ್ರೀಮಹಾವಿಷ್ಣು ಗಮಕ ಕಲಾಸಂಘದವರಿಂದ ಗಿರಿಜಾ ಕಲ್ಯಾಣ ಪುರಾಣ ವಾಚನ-ಪ್ರವಚನ, ಸಂಜೆ 6 ರಿಂದ ಶೇಣಿ ರಂಗಜಂಗಮ ಟ್ರಸ್ಟ್ ಕಾಸರಗೋಡು ಇವರಿಂದ ಶೇಣಿ ಗೋಪಾಲಕೃಷ್ಣ ಭಟ್ ಶನ್ಮ ಶತಮಾನೋತ್ಸವದ ಅಂಗವಾಗಿ ಯಕ್ಷಗಾನ ತಾಳಮದ್ದಳೆ ಜಾಂಬವತಿ ಕಲ್ಯಾಣ ನಡೆಯಲಿದೆ. ಬಳಿಕ ರಾತ್ರಿ 12 ರಿಂದ ಬೆಳಿಗ್ಗೆ 5ರ ವರೆಗೆ ಮುರೂರು ರಮೇಶ ಭಂಡಾರಿ ಮತ್ತು ಬಳಗದವರಿಂದ ಬಡಗು ತಿಟ್ಟಿನ ನೂತನ ಪ್ರಸಂಗದ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ.
   ಅ.19 ರಂದು ಯಕ್ಷದಶ ವೈಭವದ ಸಮಾರೋಪ ನಡೆಯಲಿದ್ದು, ಉದ್ಯಮಿ ರಾಚಪ್ಪ ಎಂ. ಸರದಾಗಿ ಅಧ್ಯಕ್ಷತೆ ವಹಿಸುವರು. ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿ ಸಮಾರೋಪ ಭಾಷಣ ಮಾಡುವರು. ಗಣ್ಯರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಯಕ್ಷಗಾನ ಸಾಧಕರಿಗೆ ಈ ಸಂದರ್ಭ ಪಟ್ಟಾಜೆ ಪ್ರಶಸ್ತಿ ಪ್ರಧಾನ ನಡೆಯಲಿದೆ. ಬಳಿಕ ಪ್ರಸಿದ್ದ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ.
   ಅ.23 ರಂದು ಶ್ರೀಕ್ಷೇತ್ರದಲ್ಲಿ ಶ್ರೀಚಕ್ರ ಪ್ರತಿಷ್ಠಾಪನಾ ವಾಷರ್ಿಕೋತ್ಸವ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದ್ದು, ಅಂದು ಶ್ರೀಕೊಲ್ಲಂಗಾನ ಮೇಳದ ಪ್ರಸ್ತುತ ವರ್ಷದ ತಿರುಗಾಟದ ಸೇವೆಯಾಟ ಆರಂಭಗೊಳ್ಳಲಿದೆ.
   

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries