ಗಾಂಧಿ-ವರ್ತಮಾನ ಮತ್ತು ಭವಿಷ್ಯತ್- ಗಾಂಧೀ ಜಯಂತಿಯ ಹಿನ್ನೆಲೆಯಲ್ಲಿ
ಋಗ್ವೇದದಲ್ಲಿ ಹೇಳಲ್ಪಟ್ಟ ಸೂಕ್ತವೊಂದು "ನ ನೂನಮಸ್ತಿ ನೋ ಶ್ವಃ ಕಸ್ತದ್ವೇದ ಯದದ್ಬುತಂ|" "ಅನ್ಯಸ್ಯ ಚಿತ್ತಮಭಿ ಸಂ ಚರೇಣ್ಯ ಮುತಾಧಿತಂ ವಿನಶ್ಯತಿ||" ಎಂದರೆ ಈ ದಿನ ಅಥವಾ ಈಗಿನ ವರ್ತಮಾನದಲ್ಲಿ ಏನು ನಡೆಯುತ್ತಿದೆ ಎನ್ನುವುದು ಯಾರಿಗೂ ತಿಳಿಯದು. ನಾಳೆ ಏನು ನಡೆಯುತ್ತದೆ; ಅಥವಾ ನಡೆಯಬಹುದೆಂಬುದೂ ಸಹ ತಿಳಿಯಲಾರದು. ಇದು ವೇದಚ ಸಾರಿದ ಅತೀತ ಸತ್ಯವಾಗಿದ್ದು, ಯಾವ ಕಾಲಕ್ಕೂ ಬೆರಗು ಮೂಡಿಸದಿರದು. ಯಾಕೆಂದರೆ ಎಂತಹ ಕಠಿಣ ಶ್ರಮದಿಂದಲೇ ಆಗಲಿ ಕಲಿತ ವಿದ್ಯೆ ಕಾಲಾನುಕ್ರಮದಲ್ಲಿ ಮರೆಯದಿರದು.
ಜಗತ್ತು ಒಂದೊಮ್ಮೆ ಬೆರಗು ಕಣ್ಣುಗಳಿಂದ ನೋಡಿದ್ದ ಮಹಾತ್ಮನೆಂದೇ ಬಿಂಬಿತನಾದ ಗಾಂಧಿ ಈ ನಿಟ್ಟಿನ ಚಿಂತನೆಯ ಹಳಿಯಲ್ಲಿ ನಿಂತು ನೋಡಿದಾಗ ಋಗ್ವೇದದ ಅದೇ ಸಾಲುಗಳು ಮೆದುಳನ್ನು ತಿವಿಯುತ್ತದೆ.
ಹೊಸ ತಲೆಮಾರಿನ ನಮಗೆ ಗಾಂಧಿಯನ್ನು ನೋಡಿಯಾಗಲಿ, ಆ ಕಾಲದ ಘಟ್ಟದಲ್ಲಿ ಬದುಕಿಯಾಗಲಿ ಗೊತ್ತೇ ಇಲ್ಲ! ಕೇಳಿ, ಓದಿ ಮತ್ತು ಕಲ್ಪನೆಗಳಿಂದ ಚಿತ್ರಣವೊಂದನ್ನು ತಾಕರ್ಿಕವಾಗಿ ಅಂತರಂಗದಲ್ಲಿ ಕಡೆದು ನಿಲ್ಲಿಸುತ್ತೇವೆ. ಆದರೆ ಚಂಚಲದ ಅಂತರಂಗ ಕಡೆದು ನಿಲ್ಲಿಸಿದ್ದನ್ನು ಕೊಡವಿ ಹಾಕಲು ಯತ್ನಿಸುವುದು ತಪ್ಪೆನಿಸುವುದೇ? ಇಂದು ಎದುರಾಗಿರುವುದು ಇದೇ ಜಟಿಲತೆ ಮತ್ತು ಜಾಡ್ಯ.!!
ಸ್ವತಃ ಮೋಹನದಾಸ ಕರಮಚಂದ್ರ ಗಾಂಧಿಯೇ ತಮ್ಮ ಆತ್ಮಕತೆ ನ್ನ ಸತ್ಯ ಶೋಧನೆಯಲ್ಲಿ ಹೇಳುವಂತೆ ತಮ್ಮ ಜೀವಿತದ ಕೊನೆಯವರೆಗೂ ಪ್ರತಿಯೊಂದು ಸಿದ್ದಾಂತವನ್ನೂ ಚಿಕಿತ್ಸಕ ಮತ್ತು ಪ್ರಯೋಗದ ದೃಷ್ಟಿಯಲ್ಲಿ ನೋಡಿದ ಅವರು ಕೊನೆಗೂ ನಿರ್ಣವೊಂದಕ್ಕೆ ಬರುವಲ್ಲಿ ಏನನ್ನೂ ಹೇಳದೆ, ನಮಗೆ ಬಿಟ್ಟಿರುವುದು ನಮ್ಮ ಸತ್ಯ ಶೋಧನೆಗೂ ದಾರಿ ಮಾಡಿಕೊಟ್ಟರೇ ಎಂಬುದೂ ನನ್ನನ್ನು ಆಗಾಗ ಕಾಡುತ್ತಿದೆ. ಪತ್ನಿ-ಮಕ್ಕಳೊಂದಿಗಿದ್ದು ನೈಷ್ಠಿಕ ಬ್ರಹ್ಮಚರ್ಯ, ಸ್ವಾತಂತ್ರ್ಯ ಹೋರಾಟದ ರಾಜಕೀಯ ರಂಗದಲ್ಲಿದ್ದರೂ ಸತ್ಯಸಂದತೆ, ನಿತ್ಯ ಕರ್ಮಯೋಗಿಯಾಗಿ ಉಪವಾಸ-ಸತ್ಯಾಗ್ರಹಗಳು ಇಂದೀಗ ಉಪನ್ಯಾಸದ ವಸ್ತುಗಳಷ್ಟೇ ಆಗಿ "ಇದ್ದಿರಬಹುದೇ, ಸಾಧ್ಯವೇ" ಎಂಬ ಮಟ್ಟದ ವರೆಗೆ ತಂದಿರಿಸಿದೆ.!
ವೈಜ್ಞಾನಿಕ, ತಾಂತ್ರಿಕ ಕೌಶಲಗಳು ಇಂದು ವ್ಯಾಪಕಗೊಂಡಿರುವ ಈ ಹಂತದಲ್ಲಿ ವ್ಯಾವಹಾರಿಕ, ಯಾಂತ್ರಿಕ ಬದುಕಿನ ವರ್ತಮಾನ ಗಾಂಧಿಯನ್ನು ಹುಡುಕುವುದು ಎಲ್ಲಿ.? ಸಾಮಾಜಿಕವಾಗಿ ಬಹಿಷ್ಕೃತರಾದವರನ್ನು ನೀನು "ಹರಿ"ಯ ಜನಗಳೆಂದು, ರಕ್ತಕ್ರಾಂತಿಗಿಂತಲೂ ಹೆಚ್ಚು ಶಕ್ತಿ ಉಪವಾಸದ, ಶಾಂತ ದೃಷ್ಟಿಯ ನೋಟದಲ್ಲಿದೆಯೆಂದು ಸಾರಿದ ಮಹಾತ್ಮನ ಈ ನೆಲದಲ್ಲಿ ಹರಿಯ ಬೇಡವೆಂದೂ ರಕ್ತಕಾರುವ ವರ್ತಮಾನದ ಮನೋಧರ್ಮದ ವಿಕಟ ಅಟ್ಟಹಾಸ ರಾಜ್ ಘಾಟ್ ನ್ನು ಅಲುಗಾಡಿಸದೆ.
ಸತ್ಯಹರಿಶ್ಚಂದ್ರ ನಾಟಕದಿಂದ ಪ್ರೇರಿತನಾದ ಬಾಲಕ ಗಾಂಧಿಗೆ ಅಷ್ಟೊಂದು ಬದಲಾವಣೆಗೆವ ಕಾರಣರಾದ ಆ ರೂಪಕ ಇಂದೇಕೆ ಮರೀಚಿಕೆಯಾಗುತ್ತದೆ. ಮಹಾಭಾರತ ಯುದ್ದದ ಬಳಿಕ ಧರ್ಮಜನ ಧರ್ಮ ಸಾಮ್ರಾಜ್ಯ ಸ್ಥಾಪನೆಗೊಂಡ ಹೊತ್ತಲ್ಲಿ ಅಜರ್ುನ ಕೃಷ್ಣನನ್ನೊಮ್ಮೆ ಕೇಳಿದ್ದನಂತೆ, ಯುದ್ದದ ಮಹಾಸಾಗರದ ಭೋರ್ಗರೆವ ಆರ್ಭಟದ ಮಧ್ಯೆ ನೀನು ಉಪದೇಶಿಸಿದ ಗೀತೆಯನ್ನು ಇನ್ನೊಮ್ಮೆ ಹೇಳುವೆಯಾ ಎಂದು. ಪರಮಾತ್ಮ ಕೃಷ್ಣ ಭಗವಾನ್ ಮತ್ತೆ ಸಾರರೂಪದಲ್ಲಿ ಗೀತೆಯ ಮರು ಉಪದೇಶ ನೀಡಿದ ಉತ್ತರ ಗೀತೆಯನ್ನು ಆಲಿಸಿದ ಅಜರ್ುನ ಆಗ ಹೇಳುತ್ತಾನೆ, ಭಗವಾನ್ ಈಗ ನೀನರುಹಿರುವ ಈ ಗೀತಾಸಾರ ಅಂದಿನಷ್ಟು ಗಟ್ಟಿ ಯಾಕಿಲ್ಲ ಎಂದು. ನಕ್ಕು ಕೃಷ್ಣ ನುಡಿದನಂತೆ, ಅಂದಿನ ವರ್ತಮಾನ ಈಗಿಲ್ಲ. ಇಂದಿನ ವರ್ತಮಾನದಲ್ಲಿ ನೀನಿರಬೇಕು. ಬಹುಷಃ ಗಾಂಧಿಯ ವರ್ತಮಾನ ನಮಗೀಗಿಂದಿಲ್ಲ. ಅದು ಅರ್ಥವಾಗಲು ನಾವೀಗ ಇಂದಿನ ವರ್ತಮಾನದಲ್ಲಿರಬೇಕು.
ಮುಗಿಸುವ ಮೊದಲು:
ಮಹಾತ್ಮನ ಪುತ್ರರಾಗಿದ್ದ ಹರಿದಾಸನ ಶಾಲಾ ಶಿಕ್ಷಣಕ್ಕೆ ಗಾಂಧಿ ನಿರಾಕರಿಸುತ್ತಾರೆ. ಇದರಿಂದ ಮನೆತೊರೆದ ಹರಿದಾಸ ಬಳಿಕ ವಿದ್ಯಾಭ್ಯಾಸ ಪಡೆದು ಮುಂದೆ ಪದವಿಯನ್ನೂ ಪಡೆಯುತ್ತಾನೆ. ಅವನು ಗಾಂಧಿ ಎಂಬ ಗಾಂಧಿಯವರನ್ನೇ ಪರೀಕ್ಷಿಸಲೋ ಎಂಬಂತೆ ಮಹಮ್ಮದೀಯ ಮತಕ್ಕೆ ಮತಾಂತರವಾಗುತ್ತಾನೆ. ಇದನ್ನು ತಿಳಿದ ಗಾಂಧಿ ಕೆಂಡಾಮಂಡಲರಾಗಿ ಇನ್ನು ಅವನಿಗೂ ನನಗೂ ಯಾವ ಸಂಬಂಧವೂ ಇಲ್ಲ. ಆಸ್ತಿಯಲ್ಲಿ ಒಂದಿಂಚು ಹಕ್ಕಿಲ್ಲ ಎಂದು ಹೇಳುತ್ತಾರೆ. ಇದನ್ನು ತಿಳಿದ ಹರಿದಾಸ(ಅಬ್ದುಲ್ಲಾ ಗಾಂಧಿ), ನನ್ನ ತಂದೆ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ತಿಳಿಯುವುದಕ್ಕಾಗಿಯೇ ನಾನು ಮಹಮ್ಮದೀಯನಾದದ್ದು. ನಾನು ಎಣಿಸಿದಂತೆಯೇ ಅವರು ವತರ್ಿಸಿದರು. ಅವರು ಹೇಳಿದ ಧರ್ಮಗಳ ಸಮಾನತೆ - ಹಿಂದೂ, ಇಸ್ಲಾಂ, ಕ್ರಿಶ್ಚಿಯನ್, ಬೌದ್ಧ ಧರ್ಮಗಳೆಲ್ಲಾ ಸಮಾನ- ಎಂಬುದು ಅರ್ಥಹೀನ. ಇದೆಲ್ಲ ಕೇವಲ ರಾಜಕೀಯ. ಅದನ್ನೇ ನಾನು ಸಾಬೀತು ಪಡಿಸಬೇಕಿತ್ತು, ಸಾಬೀತು ಪಡಿಸಿದೆ.
ಬರಹ: ಪುರುಷೋತ್ತಮ ಭಟ್.ಕೆ.