ಕಾಟುಕುಕ್ಕೆ ಎನ್ ಎಸ್ ಎಸ್ ವಿದ್ಯಾಥರ್ಿಗಳಿಂದ 'ಸ್ವಚ್ಛತಾ ಹಿ ಸೇವಾ ರ್ಯಾಲಿ'
ಪೆರ್ಲ: ಗಾಂಧೀಜಯಂತಿ ಅಂಗವಾಗಿ ಕಾಟುಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಹೈಯರ್ ಸೆಕೆಂಡರಿ ಶಾಲೆ ಹಾಗೂ ಎಣ್ಮಕಜೆ ಪಂಚಾಯಿತಿ ಸಹಯೋಗದಲ್ಲಿ ಪೆರ್ಲ ಪೇಟೆಯಲ್ಲಿ 'ಸ್ವಚ್ಛತಾ ಹಿ ಸೇವಾ' ರ್ಯಾಲಿ ನಡೆಯಿತು.
ರ್ಯಾಲಿಯಲ್ಲಿ ವಿದ್ಯಾಥರ್ಿಗಳು ಮಹಾತ್ಮಾಗಾಂಧೀಜಿಯ ತತ್ವಾದರ್ಶ ಹಾಗೂ ಅವರ ಜೀವನ ಸಂದೇಶಗಳ ಘೋಷಣೆ ಮೊಳಗಿಸಿದರು.
ಪೆರ್ಲ ಪೇಟೆ ಹಾಗೂ ಪಂಚಾಯತಿ ಕಛೇರಿ ಪರಿಸರವನ್ನು ವಿದ್ಯಾಥರ್ಿಗಳು ಶುಚಿಗೊಳಿಸಿದರು. ವಿದ್ಯಾಥರ್ಿಗಳ ನಿಸ್ವಾರ್ಥ ಹಾಗೂ ಪ್ರಾಮಾಣಿಕ ಸೇವಾ ಮನೋಭಾವ ಜನ ಮೆಚ್ಚುಗೆ ಗಳಿಸಿತು. ಸ್ಥಳೀಯ ವ್ಯಾಪಾರಿಗಳು ಪಾನೀಯ ಹಾಗೂ ಸಿಹಿತಿಂಡಿ ನೀಡಿ ಪ್ರೋತ್ಸಾಹಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಾರದಾ ವೈ, ಉಪಾಧ್ಯಕ್ಷ ಅಬೂಬಕ್ಕರ್ ಸಿದ್ದಿಕ್ ಖಂಡಿಗೆ, ಆರೋಗ್ಯ ಶಿಕ್ಷಣ ಸ್ಥಾಯೀ ಸಮಿತಿ ಅಧ್ಯಕ್ಷೆ ಆಯಿಷಾ ಎ.ಎ., ನಿವೃತ್ತ ಉಪನೊಂದಾವಣಾಧಿಕಾರಿ ಮುಹಮ್ಮದಾಲಿ ಪೆರ್ಲ, ಗ್ರಾಮ ಪಂಚಾಯತಿ ಪ್ರತಿನಿಧಿಗಳು, ಪೆರ್ಲ ನಾಲಂದಾ ಮಹಾವಿದ್ಯಾಲಯದ ಎನ್ ಎಸ್ ಎಸ್ ಘಟಕದ ಸದಸ್ಯರು, ಪೆರ್ಲ ಶ್ರೀ ಸತ್ಯನಾರಾಯಣ ಪ್ರೌಢಶಾಲೆಯ ಎನ್ ಸಿ ಸಿ, ಕುಟಂಬಶ್ರೀ ಕಾರ್ಯಕತರ್ೆಯರು, ವಿವಿಧ ಸಂಘಟನೆಗಳ ಸದಸ್ಯರು ಶುಚೀಕರಣ ಯಜ್ಞದಲ್ಲಿ ಜೊತೆಗೂಡಿದರು.
ಕಾಟುಕುಕ್ಕೆ ಹೈಯರ್ ಸೆಕೆಂಡರಿ ಶಾಲೆಯ ಎನ್ ಎಸ್ ಎಸ್ ಯೋಜನಾಧಿಕಾರಿ ಮಹೇಶ ಏತಡ್ಕ, ಅರ್ಥಶಾಸ್ತ್ರ ಅಧ್ಯಾಪಿಕೆ ವಾಣಿ ಕೆ. ನೇತೃತ್ವ ವಹಿಸಿದರು.