ಭಾರತ ರತ್ನ ವಾಜಪೇಯಿ ಅವರ ಕವನಗಳು ಶಾಲಾ ಪಠ್ಯದಲ್ಲಿ ಅಳವಡಿಸಬೇಕು : ತಾರಾನಾಥ ಬೋಳಾರು
ಕಾಸರಗೋಡು: ಭಾರತ ರತ್ನ, ಅಜಾತಶತ್ರು, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಕವನಗಳು ಶಾಲಾ ಪಠ್ಯದಲ್ಲಿ ಅಳವಡಿಸಿಕೊಳ್ಳಬೇಕೆಂದು ಹಿರಿಯ ಚಿತ್ರ ನಟ, ನಿದರ್ೇಶಕ ತಾರಾನಾಥ ಬೋಳಾರು ಅವರು ಹೇಳಿದರು.
ಭಾರತೀಯ ಜನತಾ ಪಾಟರ್ಿ ಸಾಂಸ್ಕೃತಿಕ ಸೆಲ್ ಇದರ ವತಿಯಿಂದ ಕಾಸರಗೋಡು ನಗರಸಭಾ ವನಿತಾ ಭವನದಲ್ಲಿ ಭಾನುವಾರ ಆಯೋಜಿಸಿದ ಕವನಗಳ ಮೂಲಕ ವಾಜಪೇಯಿ ಅವರಿಗೆ ಶ್ರದ್ಧಾಂಜಲಿ ಅಪರ್ಿಸುವ ಅಟಲ್ ಕಾವ್ಯಾಂಜಲಿ-2018 ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ಮಹಾನ್ ವ್ಯಕ್ತಿತ್ವದ ವಾಜಪೇಯಿ ಅವರು ಮಿನುಗುವ ಧ್ರುವ ತಾರೆ. ಅವರ ಆದರ್ಶಗಳನ್ನು ಯುವ ತಲೆಮಾರಿಗೆ ದಾಟಿಸುವ ಕೆಲಸವಾಗಬೇಕು. ರಾಜಕೀಯ ಚಾಣಕ್ಯ ಎಂದೇ ಗುರುತಿಸಿಕೊಂಡಿರುವ ಅವರು ಒಬ್ಬ ರಾಜಕಾರಣಿ ಮಾತ್ರವಾಗಿರದೆ ಸಮಾಜ ಸೇವಕ, ಕವಿ ಹೃದಯಿ ವ್ಯಕ್ತಿತ್ವವನ್ನು ಹೊಂದಿದವರು. ಅವರ ಒಂದೊಂದು ಕವನವೂ ಅರ್ಥಪೂರ್ಣ ಹಾಗು ದೇಶ ಪ್ರೇಮದ ಪಾಠವನ್ನು ಹೇಳಿಕೊಡುತ್ತದೆ. ಜೀವನದ ಕೊನೆಯ ವರೆಗೂ `ದೇಶ ಮೊದಲು' ಉಳಿದವು ನಂತರ ಎಂಬ ಆದರ್ಶವನ್ನು ಉಳಿಸಿಕೊಂಡು ಬಂದವರು. ಅವರ ಒಂದೊಂದು ಸಂದೇಶವು ಇಂದಿನ ರಾಜಕಾರಣಿಗಳಿಗೆ ಪಾಠವಾಗಬೇಕು ಎಂದು ಅವರು ಈ ಸಂದರ್ಭ ತಿಳಿಸಿದರು.
ಅಟಲ್ ಕಾವ್ಯಾಂಜಲಿ ಸ್ವಾಗತ ಸಮಿತಿ ಅಧ್ಯಕ್ಷ ಪ್ರೊ.ಎ.ಶ್ರೀನಾಥ್ ಅಧ್ಯಕ್ಷತೆ ವಹಿಸಿದರು. ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ರಾಧಾಕೃಷ್ಣ ಕೆ.ಉಳಿಯತ್ತಡ್ಕ, ಪ್ರಭಾಕರ ಕಲ್ಲೂರಾಯ ಬನದಗದ್ದೆ, ಶ್ರೀನಿವಾಸ ಆಳ್ವ ಕಳತ್ತೂರು, ಕೇಳು ಮಾಸ್ಟರ್ ಅಗಲ್ಪಾಡಿ, ಎ.ಆರ್.ಸುಬ್ಬಯ್ಯಕಟ್ಟೆ, ಮಹಿಳಾ ಸಮಿತಿ ಸಂಚಾಲಕಿ ಸಂಧ್ಯಾ ಗೀತಾ ಬಾಯಾರು, ಅಖಿಲೇಶ್ ನಗುಮುಗಂ, ಶ್ರೀಕೃಷ್ಣಯ್ಯ ಅನಂತಪುರ ಮೊದಲಾದವರು ಉಪಸ್ಥಿತರಿದ್ದರು.
ಸ್ವಾಗತ ಸಮಿತಿ ಸಂಚಾಲಕ ಕೆ.ಎಸ್.ಶ್ರೀಕಾಂತ್ ನೆಟ್ಟಿಣಿಗೆ ಸ್ವಾಗತಿಸಿ, ಬಿಜೆಪಿ ಕಾಸರಗೋಡು ಜಿಲ್ಲಾ ಅಧ್ಯಕ್ಷ, ಜಿಲ್ಲಾ ಪಂಚಾಯತಿ ಸದಸ್ಯ ನ್ಯಾಯವಾದಿ ಕೆ.ಶ್ರೀಕಾಂತ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾಗಣೇಶ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ನೂರರಷ್ಟು ಮಂದಿ ಕವನವನ್ನು ವಾಚಿಸುವ ಮೂಲಕ ವಾಜಪೇಯಿ ಅವರಿಗೆ ನುಡಿನಮನ ಸಲ್ಲಿಸಿದರು.ಕಾರ್ಯಕ್ರಮ ವಿಶಿಷ್ಟವಾಗಿ ಈ ಮೂಲಕ ಗುರುತಿಸಲ್ಪಟ್ಟಿತು.