HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                    ಬೇಕಲದಲ್ಲಿ ಯೋಗ ಟೂರಿಸಂ ವಿಚಾರಗೋಷ್ಠಿ ಮತ್ತು ಕಾಯರ್ಾಗಾರ
                ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸಲಷ್ಟೇ ಪ್ರವಾಸಿಗರು ಆಗಮಿಸುವುದಿಲ್ಲ-ಡಾ.ಎ.ಶ್ರೀನಿವಾಸ್
     ಮುಳ್ಳೇರಿಯ: ಪ್ರಕೃತಿ ಮತ್ತು ಭೌಗೋಳಿಕ ಸೌಂದರ್ಯವನ್ನು ವೀಕ್ಷಿಸಲಷ್ಟೇ ಪ್ರವಾಸಿಗರು ಆಗಮಿಸುವುದಿಲ್ಲ. ಉತ್ತರ ಮಲಬಾರು ಪ್ರಾಂತ್ಯದ ಸಾಂಸ್ಕೃತಿಕ ವೈಶಿಷ್ಟ್ಯತೆ, ಜೀವನ ಶೈಲಿಯನ್ನು ಅರಿಯಲು ಮತ್ತು ಇಲ್ಲಿನ ಗ್ರಾಮೀಣ ಭಕ್ಷ್ಯಗಳನ್ನು ಸವಿಯಲು ಪ್ರವಾಸಿಗರು ಆಗಮಿಸುತ್ತಾರೆ. ಕೇರಳೋತ್ತರದ ಜಿಲ್ಲೆಗಳಾದ ಕಾಸರಗೋಡು, ಕಣ್ಣೂರು, ಕಲ್ಲಿಕೋಟೆ ಸಾಂಸ್ಕೃತಿಕ ವಿಶೇಷತೆಗಳನ್ನು ಹೊಂದಿದ್ದು, ಇವುಗಳನ್ನು ವಿಶೇಷ ರೀತಿಯನ್ನು ಪ್ರದಶರ್ಿಸಿ ಪ್ರವಾಸೋದ್ಯಮ ಕ್ಷೇತ್ರವನ್ನು ಮಾದರಿಯಾಗಿಸಬೇಕಿದೆ ಎಂದು ಕಾಸರಗೋಡು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ.ಎ.ಶ್ರೀನಿವಾಸ್ ಅಭಿಪ್ರಾಯಪಟ್ಟರು.
   ಬೇಕಲ ರೆಸಾಟರ್್ ಅಭಿವೃದ್ಧಿ ಪ್ರಾಧಿಕಾರ(ಬಿ.ಆರ್.ಡಿ.ಸಿ) ಸ್ಮೈಲ್ ಯೋಜನೆಯಡಿ ಹಮ್ಮಿಕೊಂಡಿದ್ದ ಯೋಗ ಪ್ರವಾಸ ವಿಚಾರಗೋಷ್ಠಿಯನ್ನು ಶನಿವಾರ ಬೇಕಲದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
   ಪ್ರವಾಸಿಗರನ್ನು ಆಕಷರ್ಿಸುವ ಪ್ರಮುಖ ಸಾಧನ ಯೋಗ ಟೂರಿಸಂ ಆಗಿದ್ದು, ಇದಕ್ಕೆ ಹೆಚ್ಚಿನ ಒತ್ತು ನೀಡಬೇಕಾಗಿದೆ ಎಂದರು. ಶಾರೀರಿಕ ಆರೋಗ್ಯ, ಬೌದ್ಧಿಕ ವಿಕಸನದೊಂದಿಗೆ, ಮನಸ್ಸಿಗೆ ಆಹ್ಲಾದವನ್ನು ನೀಡುವ ಯೋಗವನ್ನು ಪ್ರವಾಸೋದ್ಯಮ ಅಭಿವೃದ್ಧಿಯ ಭಾಗವಾಗಿಸುವುದು ಜೌಚಿತ್ಯಪೂರ್ಣವಾಗಿದೆ ಎಂದು ಅವರು ತಿಳಿಸಿದರು.
    ಕಾಞಂಗಾಡು ಬ್ಲಾಕ್ ಪಂಚಾಯತಿ ಅಧ್ಯಕ್ಷೆ ಎಂ.ಗೌರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ರಾಜ್ಯ ಯೋಗ ಅಸೋಸಿಯೇಶನ್ ಸಹ ಕಾರ್ಯದಶರ್ಿ ಕೆ.ಟಿ ಕೃಷ್ಣದಾಸ್ ಶುಭಾಶಂಸನೆಗೈದರು. ಬಿ.ಆರ್.ಡಿ.ಸಿ ನಿದರ್ೇಶಕ ಟಿ.ಕೆ ಮನ್ಸೂರ್ ಸ್ವಾಗತಿಸಿ, ಪ್ರಬಂಧಕ ಕೆ.ಎಂ.ರವೀಂದ್ರನ್ ವಂದಿಸಿದರು. 
    ಯೋಗ ವಿಚಾರಗೋಷ್ಠಿ ಮತ್ತು ಕಾಯರ್ಾಗಾರದಲ್ಲಿ ಉತ್ತರ ಮಲಬಾರಿನ ವಿವಿಧ ಜಿಲ್ಲೆಗಳಿಂದ 125 ಮಂದಿ ಯೋಗಾಸಕ್ತರು ಭಾಗವಹಿಸಿದ್ದರು. ಸಿ.ಎಸ್.ವಿನೋದ್, ಡಾ.ಹಿರಣ್.ಬಿ.ನಾಯರ್, ಸ್ಮೈಲ್ ಯೋಜನೆಯಡಿ ಉದ್ದಿಮೆದಾರರಾಗಿರುವ ಜಿ.ಅಂಬುಜಾಕ್ಷನ್, ಫರ್ಹಾನ್.ಎ.ಕೆ, ಪಿ.ರಾಮಚಂದ್ರನ್ ಮೊದಲಾದವರು ವಿಚಾರಗೋಷ್ಠಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಾತನಾಡಿದರು. ಸಂಜೆ ನಡೆದ ಸಮಾರೋಪ ಕಾರ್ಯಕ್ರಮದಲ್ಲಿ ಜಿಲ್ಲಾ ಯೋಗ ಅಸೋಸಿಯೇಶನ್ ಅಧ್ಯಕ್ಷ ಪಿ.ಪಿ.ಸುಕುಮಾರನ್ ಉದ್ಘಾಟಿಸಿದರು. ಬಿ.ಆರ್.ಡಿ.ಸಿ ಪ್ರಬಂಧಕ ಯು.ಎಸ್.ಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು.
     ಸ್ಮೈಲ್ ಯೋಜನೆ ಏನು?!
  ಸ್ಮೈಲ್ ಯೋಜನೆಯ ಮೂಲಕ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಆಸಕ್ತರು ತೊಡಗಿಕೊಳ್ಳಬಹುದಾಗಿದೆ. ಸ್ಮೈಲ್(ಸ್ಮಾಲ್ ಅಂಡ್ ಮೀಡಿಯಂ ಇಂಡಸ್ಟ್ರೀಸ್ ಲೆವೆರೇಜಿಂಗ್ ಎಕ್ಸಪೀರಿಯನ್ಶಲ್ ಟೂರಿಸಂ)-'ಸಣ್ಣ ಮತ್ತು ಮಧ್ಯಮ ಕೈಗಾರಿಕೋದ್ಯಮ ಶಕ್ತಿಯ ಮೂಲಕ ಪ್ರವಾಸಿಗರಿಗೆ ಅನುಭವದ ಸವಿ' ಉಣಿಸುವುದಾಗಿದೆ. ಗ್ರಾಮೀಣ ಆಥರ್ಿಕತೆಗೂ ಪುಷ್ಠಿ ನೀಡಬಲ್ಲ ಪ್ರವಾಸೋದ್ಯಮ ಯೋಜನೆ ಇದಾಗಿದ್ದು, ಪ್ರವಾಸಿ ಆಕರ್ಷಣೆಯಲ್ಲೂ ಪ್ರಮುಖ ಪಾತ್ರ ವಹಿಸಲಿದೆ. ಕೇರಳ ಪ್ರವಾಸೋದ್ಯಮ ಇಲಾಖೆ ವತಿಯಿಂದ ಉತ್ತರ ಮಲಬಾರಿನಲ್ಲಿ ಕೈಗೆಟುವ ರೀತಿಯಲ್ಲಿ ಸಣ್ಣ ಮಟ್ಟದ ಹೋಂ ಸ್ಟೇ ನಿಮರ್ಾಣದಲ್ಲಿ ಆಸಕ್ತರಿಗೆ ಈಗಾಗಲೇ ಮನ್ನಣೆ ನೀಡಲಾಗಿದೆ. ಕುಟುಂಬಶ್ರೀ ಸಂಘದಿಂದ ಪ್ರವಾಸಿಗರನ್ನು ಆಕಷರ್ಿಸುವ ಖಾದ್ಯ ವೈವಿಧ್ಯಗಳನ್ನು ಪರಿಚಯಿಸುವ ಹೋಟೆಲ್ಗಳು ಆರಂಭವಾಗಿವೆ. ಯೋಗದ ಮೂಲಕ ಪ್ರವಾಸಿ ಆಕರ್ಷಣೆಗೆ ಬಿ.ಆರ್.ಡಿ.ಸಿ ಹೊಸ ಯೋಜನೆ ರೂಪಿಸಿದ್ದು, ಜಿಲ್ಲೆಯ ವಿವಿಧ ರೆಸಾಟರ್್ ಹಾಗೂ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರಿಗೆ ಅನುಕೂಲವಾಗುವಂತೆ ಯೋಗದ ಪರಿಚಯ ಮತ್ತು ಕಲಿಕೆಯನ್ನು ಆರಂಭಿಸಬಹುದಾಗಿದೆ. ಕ್ರೂಸ್ ಬೋಟ್ ಯೋಜನೆ, ಕರಕುಶಲ ಮಳಿಗೆಗಳು ಸೇರಿದಂತೆ ಗ್ರಾಮೀಣ ಪ್ರವಾಸ ವೈಶಿಷ್ಟ್ಯತೆಗಳನ್ನು ಸ್ಮೈಲ್ ಯೋಜನೆಯ ಭಾಗವಾಗಿವೆ. 

     

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries