ಉಪ್ಪಳ: ಕೊಂಡೆವೂರಿನ ಶ್ರೀ ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರ ನೇತೃತ್ವದಲ್ಲಿ ಫೆಬ್ರವರಿ 18ರಿಂದ 24ರ ವರೆಗೆ ಶ್ರೌತಯಾಗಗಳಲ್ಲಿ ಅತಿ ವಿಶಿಷ್ಟವಾದ ವಿಶ್ವಜಿತ್ ಅತಿರಾತ್ರ ಸೋಮಯಾಗವು ನಡೆಯಲಿದೆ. ಇದರ ಪೂರ್ವಭಾವಿಯಾಗಿ "ಶ್ರೀ ವಿಷ್ಣು ಸಹಸ್ರನಾಮ ಪಾರಾಯಣ ಅಭಿಯಾನ"ದ ರಥಯಾತ್ರೆಯು ಪರಮಪೂಜ್ಯರ ಮಾರ್ಗದರ್ಶನದಲ್ಲಿ, ವೇದಮೂತರ್ಿ ಹರಿನಾರಾಯಣ ಮಯ್ಯ ಕುಂಬಳೆ ಇವರ ಪೌರೋಹಿತ್ಯದಲ್ಲಿ ಜಿಲ್ಲೆಯ ಪ್ರಮುಖ ಶ್ರದ್ಧಾಕೇಂದ್ರಗಳಲ್ಲಿ ಸಂಚರಿಸುವುದರ ಜೊತೆಗೇ ಶ್ರೀವಿಷ್ಣುಸಹಸ್ರನಾಮ ಪಾರಾಯಣದ ಮಹತ್ವದ ಕುರಿತು ಜನಜಾಗೃತಿಯನ್ನೂ ಮಾಡುತ್ತಿದೆ. ಮಂಜೇಶ್ವರ ತಾಲೂಕಿನ ವಕರ್ಾಡಿ ಪಂಚಾಯತ್ ವ್ಯಾಪ್ತಿಯಲ್ಲಿ ಡಿ. 1 ರಿಂದ 05 ರವರೆಗೆ ವಿವಿಧ ಕೇಂದ್ರಗಳಲ್ಲಿ ಪ್ರತಿದಿನ ಸಂಜೆ 6 ರಿಂದ 7.30 ರ ವರೆಗೆ ಅಭಿಯಾನ ಕಾರ್ಯಕ್ರಮ ನಡೆಯಲಿದೆ.
ಡಿ. 01 ರಂದು ದೈಗೋಳಿಯ ಶ್ರೀ ಸಾಯಿ ಸೇವಾ ಪ್ರತಿಷ್ಠಾನ, 2ರಂದು ಮುರತ್ತಣೆ ಶ್ರೀ ಕೃಷ್ಣಜನ್ಮಾಷ್ಟಮಿ ಸಮಿತಿ, 3 ರಂದು ಬಾಕ್ರಬೈಲು ಪಾತೂರಿನ ಶ್ರೀ ಸೂಯರ್ೇಶ್ವರ ದೇವಸ್ಥಾನ,4 ರಂದು ದೇವಂತಪಡ್ಪು ಶ್ರೀವಿಷ್ಣುಮೂತರ್ಿ ದೇವಸ್ಥಾನ, 05 ರಂದು ವಕರ್ಾಡಿ ಸುಂಕದಕಟ್ಟೆಯ ಶ್ರೀ ದುಗರ್ಾಪರಮೇಶ್ವರಿ ಭಜನಾಮಂದಿರ ಈ ಅಭಿಯಾನದ ರಥವು ಶ್ರೀಮಹಾವಿಷ್ಣು ದೇವರ ವಿಗ್ರಹದೊಂದಿಗೆ ಆಗಮಿಸಲಿದ್ದು ಆ ಸಂದರ್ಭದಲ್ಲಿ ಭಜನೆ, ಸಾಮೂಹಿಕ ಶ್ರೀವಿಷ್ಣುಸಹಸ್ರನಾಮ ಪಾರಾಯಣ, ಸತ್ಸಂಗ ನಡೆಯಲಿದೆ. ಭಕ್ತಾದಿಗಳು ತಮ್ಮಲ್ಲಿಯ ಕಾರ್ಯಕ್ರಮದ ಪೂರ್ಣಯಶಸ್ಸಿಗೆ ಸಹಕರಿಸಿ ಯಜ್ಞೇಶ್ವರನಾದ ಶ್ರೀಮಹಾವಿಷ್ಣುವಿನ ಕೃಪೆಗೆ ಪಾತ್ರರಾಗಬೇಕಾಗಿ ಶ್ರೀವಿಷ್ಣು ಸಹಸ್ರನಾಮ ಅಭಿಯಾನದ ಸಂಘಟಕರು ವಿನಂತಿಸಿದ್ದಾರೆ.