ನವದೆಹಲಿ: ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ(ನೀಟ್) ತೆಗೆದುಕೊಳ್ಳುವ ಅಭ್ಯಥರ್ಿಗಳಿಗೆ ಸಿಬಿಎಸ್ ಇ ನಿಗದಿಪಡಿಸಿದ್ದ ಗರಿಷ್ಠ 25 ವರ್ಷ ವಯೋಮಿತಿಯನ್ನು ಸುಪ್ರೀಂ ಕೋಟರ್್ ಗುರುವಾರ ರದ್ದುಗೊಳಿಸಿದೆ.
ಗರಿಷ್ಠ 25 ವರ್ಷ ವಯೋಮಿತಿ ಪ್ರಶ್ನಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅಜರ್ಿಯ ವಿಚಾರಣೆ ನಡೆಸಿದ ಕೋಟರ್್, 25 ವರ್ಷ ಮೇಲ್ಪಟ್ಟವರೂ 2019ರ ನೀಟ್ ಪರೀಕ್ಷೆ ತೆಗೆದುಕೊಳ್ಳಬಹುದು ಎಂದು ಹೇಳಿದೆ.
ಇದೇ ವೇಳೆ ಕನಿಷ್ಠ ವಯೋಮಿತಿಯಿಂದಾಗಿ ಅಜರ್ಿ ಸಲ್ಲಿಸುವ ಅವಕಾಶ ವಂಚಿತರಾಗಿದ್ದ ಎಂಬಿಬಿಎಸ್ ಹಾಗೂ ಬಿಡಿಎಸ್ ಆಕಾಂಕ್ಷಿ ಅಭ್ಯಥರ್ಿಗಳಿಗೆ ಅಜರ್ಿ ತುಂಬಲು ಒಂದು ವಾರ ಅವಧಿ ವಿಸ್ತರಿಸಿ ಕೋಟರ್್ ಆದೇಶಿಸಿದೆ. ನಾಳೆ ಅಜರ್ಿ ಸಲ್ಲಿಸಲು ಕೊನೆಯ ದಿನವಾಗಿತ್ತು. ನೀಟ್ ಪರೀಕ್ಷೆ ಬರೆಯಲು ಸಾಮಾನ್ಯ ವರ್ಗದ ಅಭ್ಯಥರ್ಿಗಳಿಗೆ ಗರಿಷ್ಠ 25 ವರ್ಷ ಹಾಗೂ ಮೀಸಲಾತಿ ವರ್ಗದ ಅಭ್ಯಥರ್ಿಗಳಿಗೆ ಗರಿಷ್ಠ 30 ವರ್ಷ ವಯೋಮಿತಿ ನಿಗದಿಪಡಿಸಿ ಸಿಬಿಎಸ್ ಇ ಅಧಿಸೂಚನೆ ಹೊರಡಿಸಿತ್ತು.