ಮಂಜೇಶ್ವರ: ಕಡಂಬಾರು ಅರಿಬೈಲು ಶ್ರೀ ನಾಗಬ್ರಹ್ಮ ಯುವಕ ಮಂಡಲದ 36 ನೇ ವಾಷರ್ಿಕೋತ್ಸವ ಡಿ.4 ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ಅರಿಬೈಲು ಕಂಬಳಗದ್ದೆ ಸಮೀಪ ನಡೆಯಲಿದೆ.
ರಾತ್ರಿ 8 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ವಿಶ್ವ ಹಿಂದು ಪರಿಷತ್ ಮಾತೃ ಶಕ್ತಿ ಮಂಗಳೂರು ಗ್ರಾಮಾಂತರ ಜಿಲ್ಲಾ ಅಧ್ಯಕ್ಷೆ ಮೀರಾ ಆಳ್ವ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಚಲನಚಿತ್ರ ನಟ ಅರವಿಂದ್ ಬೋಳಾರ, ಸುದೇಶ್ ಕುಮಾರ್ ರೈ ಬಿ, ಪುರುಷೋತ್ತಮ್ ಕೆ.ಭಂಡಾರಿ, ಅಶ್ವಥ್ ಪೂಜಾರಿ ಲಾಲ್ಬಾಗ್, ವಿಕ್ರಮದತ್ತ ಭಾಗವಹಿಸುವರು.
ಕೃಷ್ಣ ಶೆಟ್ಟಿ ಅರಿಬೈಲು, ವಿಶ್ವನಾಥ ಶೆಟ್ಟಿ ಅರಿಬೈಲು ಹೊಸಮನೆ ಉಪಸ್ಥಿತರಿರುವರು. ಹಿರಿಯ ಕೃಷಿ ಕಾಮರ್ಿಕರಾದ ಕಲ್ಯಾಣಿ ಅರಿಬೈಲು, ಮುಂಡಿ ಅರಿಬೈಲು ಅವರನ್ನು ಸಮ್ಮಾನಿಸಲಾಗುವುದು.
ರಾತ್ರಿ 10.30 ರಿಂದ ಮ್ಯೂಸಿಕಲ್ ನೈಟ್, ವಿಭಿನ್ನ ನೃತ್ಯ ಕಾರ್ಯಕ್ರಮ ಜರಗಲಿದೆ. ಅಪರಾಹ್ನ 2 ಕ್ಕೆ ಅರಿಬೈಲು ಕಂಬಳ, ಸಂಜೆ 6 ಕ್ಕೆ ಯಕ್ಷ-ಗಾನ-ವೈಭವ, ರಾತ್ರಿ 10 ಕ್ಕೆ ನಾಗಬ್ರಹ್ಮ ದೇವರ ಮಹಾಪೂಜೆ ನಡೆಯಲಿದೆ.