ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕಡಿಮೆಯಾಗುತ್ತಿದ್ದಂತೆ ಇದೀಗ ಕೇಂದ್ರ ಸಕರ್ಾರ ಎಲ್ಪಿಜಿ ಗ್ರಾಹಕರಿಗೆ ಸಿಹಿಸುದ್ದಿ ನೀಡಿದೆ.
ಕೇಂದ್ರ ಸಕರ್ಾರ ಸಬ್ಸಿಡಿ ಸಹಿತ 14 ಕೆಜಿ ತೂಕದ ಸಿಲಿಂಡರ್ ಬೆಲೆಯಲ್ಲಿ 6.52 ರು.ಗಳ ಕಡಿತ ಮಾಡಲಾಗಿದೆ. ಶುಕ್ರವಾರ ರಾತ್ರಿಯಿಂದಲೇ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 500.90 ರುಪಾಯಿಗೆ ಸಿಲಿಂಡರ್ ಲಭ್ಯವಾಗಿದೆ.
ಕಳೆದ ಆರು ತಿಂಗಳಿಂದ ಬೆಲೆ ಏರಿಕೆ ಕಂಡಿದ್ದ ಎಲ್ಪಿಜಿ ದರ ಇದೀಗ ಮೊದಲ ಬಾರಿಗೆ ಇಳಿಕೆ ಕಂಡಿದೆ. ಸಬ್ಸಿಡಿ ರಹಿತ ಎಲ್ಪಿಜಿ ದರ 133 ರೂ. ಕಡಿಮೆಯಾಗಿದೆ.