ಕಾಸರಗೋಡು: ಜಿಲ್ಲಾ ಶಿಶುಕಲ್ಯಾಣ ಸಮಿತಿ ನೇತೃತ್ವದಲ್ಲಿ ಈ ತಿಂಗಳ 8ರಂದು ರಾಷ್ಟ್ರೀಯ ಬಾಲಚಿತ್ರ ರಚನೆ ಸ್ಪರ್ಧೆ ಮತ್ತು
22,23ರಂದು ಆದಿವಾಸಿ ಮಕ್ಕಳೀಗೆ ಪಳ್ಳೀಕ್ಕರೆ ಬೀಚ್ ನಲ್ಲಿ ಕಳೀಯರಂಙ್ ಶಿಬಿರ ನಡೆಸಲು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆ ನಿರ್ಧರಿಸಿದೆ.
ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಶಿಶು ಕಲ್ಯಾಣ ಅಧಿಕಾರಿ ಪಿ.ಬಿಜು,
ಸಮಾಜಿಕ ನ್ಯಾಯ ಅಧಿಕಾರಿ ಪಿ.ಡೀನಾ ಭರತನ್, ಶಿಶು ಕಲ್ಯಾಣ ಸಮಿತಿ ಜಿಲ್ಲಾ ಕಾರ್ಯದರ್ಶಿ ಮಧು ಮುದಿಯಕ್ಕಾಲ್,
ಎಂ.ಪಿ.ವಿ.ಜಾನಕಿ,
ಎಚ್.ಕೃಷ್ಣರಾಜ್ ಮೊದಲಾದವರು ಉಪಸ್ಥಿತರಿದ್ದರು.
8ರಂದು ನಾಯನ್ಮಾರುಮೂಲೆ ತನ್ ಬೀಹುಲ್ ಇಸ್ಲಾಂ ಹೈಯರ್ ಸೆಕಂಡರಿ ಶಾಲೆಯಲ್ಲಿ ರಾಷ್ಟ್ರೀಯ ಬಾಲಚಿತ್ರ ರಚನೆ ಸ್ಪರ್ಧೆ ನಡೆಯಲಿದೆ. ಸಾಮಾನ್ಯ ವಿಭಾಗದಲ್ಲಿ 5ರಿಂದ 9 ವರ್ಷ ಪ್ರಾಯದ ವಿದ್ಯಾರ್ಥಿಗಳು, 10ರಿಂದ 16 ವರ್ಷ ಪ್ರಾಯದ ವಿದ್ಯಾರ್ಥಿಗಳು ಭಾಗವಹಿಸುವ ಎರಡು ರೀತಿಯ ಸ್ಪರ್ಧೆಗಳಿರುವುವು.
ವಿಭಿನ್ನ ಸಾಮರ್ಥ್ಯದವರ ವಿಭಾಗದಲ್ಲಿ
5ರಿಂದ
10 ವರ್ಷ ಪ್ರಾಯದ 11ರಿಂದ 18 ವರ್ಷ ಪ್ರಾಯದ ವಿದ್ಯಾರ್ಥಿಗಳಿಗಾಗಿ ಸ್ಪರ್ಧೆ ಇರುವುದು. ವಿಜೇತರಿಗೆ ಟ್ರಾಫಿ ಮತ್ತು ಅರ್ಹತಾಪತ್ರ ನೀಡಲಾಗುವುದು. ಆಯ್ದ 5 ಅತ್ಯುತ್ತಮ ಚಿತ್ರಗಳನ್ನು ರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಕಳುಹಿಸಲಾಗುವುದು. ಆಸಕ್ತರು ಶಾಲಾ ಮುಖ್ಯಶಿಕ್ಷಕರ ದೃಡೀಕರಣ ಪತ್ರ ಸಹಿತ ಡಿ.8ರಂದು ಬೆಳಗ್ಗೆ
9.30ಕ್ಕೆ ಆಗಮಿಸಬೇಕು. ಎರಡು ತಾಸು ಅವಧಿಯಲ್ಲಿ ಸ್ಪರ್ಧೆ ನಡೆಯಲಿದೆ. ಹೆಚ್ಚಿನ ಮಾಹಿತಿಗೆ
9447652335, 9447526356, 9447649957 ನ್ನು ಸಂಪರ್ಕಿಸಬುದು.