ಕಾಸರಗೋಡು: ಮಲಬಾರ್ ದೇವಸ್ವಂ ಬೋರ್ಡ್ ನ ಸ್ವಾಮ್ಯದಲ್ಲಿರುವ ಮಂಜೇಶ್ವರ ತಾಲೂಕಿನ ಬಡಾಜೆ ಶ್ರೀ ಮಹಾಲಿಂಗೇಶ್ವರ ದೇವಾಲಯ ಮತ್ತು ಕಾಸರಗೋಡು ತಾಲೂಕಿನ ಕುಂಬಡಾಜೆಯ ಅಳಿಂಜೆ ಶ್ರೀ ಮಹಾವಿಷ್ಣು ದೇವಾಲಯಕ್ಕೂ ಪರಂಪರಾಗತ ಟ್ರಸ್ಟಿಗಳ ನೇಮಕಾತಿ ನಡೆಯಲಿದೆ. ಸ್ಥಳೀಯ ನಿವಾಸಿಗಳಾದ ಹಿಂದೂ ಧರ್ಮೀಯರು ಅರ್ಜಿ ಸಲ್ಲಿಸಬಹುದು. ಡಿ.19ರ ಸಂಜೆ 5 ಗಂಟೆಗೆ ಮುಂಚಿತವಾಗಿ ದೇವಸ್ವಂ ಬೋರ್ಡಿನ ಕಾಸರಗೋಡು ವಿಭಾಗಕ್ಕೆ ಒಳಪಟ್ಟ ನೀಲೇಶ್ವರದಲ್ಲಿರುವ ಸಹಾಯಕ ಕಮೀಷನರ್ ಅವರ ಕಚೇರಿಗೆ ಅರ್ಜಿ ಸಲ್ಲಿಸಬೇಕು.
ಅರ್ಜಿಫಾರಂ ದೇವಸ್ವಂ ಬೋರ್ಡ್ ನ ವೆಬ್ಸೈಟ್ ನಿಂದ ಯಾ ನೀಲೇಶ್ವರದ ಕಮೀಷನರ್ ಕಚೇರಿಯಿಂದ ಉಚಿತವಾಗಿ ಪಡೆದುಕೊಳ್ಳಬಹುದು. ಹಿಂದೆ ನೀಡಲಾದ ಆದೇಶ ಪ್ರಕಾರ ಅರ್ಜಿ ಸಲ್ಲಿಸಿದವರು ಮತ್ತೆ ಸಲ್ಲಿಸಬೇಕಾಗಿಲ್ಲ.