ನವದೆಹಲಿ: ಇತ್ತೀಚಿಗಷ್ಟೇ ವಿಸರ್ಜನೆಯಾಗಿರುವ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಗೆ ಮೇ 21ರೊಳಗೆ ಚುನಾವಣೆಗೆ ನಡೆಸಬೇಕಾಗಿದ್ದು, ಚುನಾವಣಾ ಆಯೋಗ ಮುಂದಿನ ವರ್ಷ ನಡೆಯುವ ಲೋಕಸಭೆ ಚುನಾವಣೆಯೊಂದಿಗೆ ಕಣಿವೆ ರಾಜ್ಯದ ಚುನಾವಣೆ ನಡೆಸುವ ಸಾಧ್ಯತೆ ಇದೆ ಎಂದು ಗುರುವಾರ ಉನ್ನತ ಮೂಲಗಳು ತಿಳಿಸಿವೆ.
ಜಮ್ಮು ಮತ್ತು ಕಾಶ್ಮೀರ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರು ನವೆಂಬರ್ 21ರಂದು ವಿಭಿನ್ನ ಸಿದ್ಧಾಂತ ಹೊಂದಿದ ಪಕ್ಷಗಳ ಮೈತ್ರಿಕೂಟದಿಂದ ಸ್ಥಿರ ಸಕರ್ಾರ ನೀಡಲು ಸಾಧ್ಯವಿಲ್ಲ ಎಂದು ಹೇಳಿ ವಿಧಾನಸಭೆಯನ್ನು ವಿಸಜರ್ಿಸಿದ್ದರು.
ಸುಪ್ರೀಂ ಕೋಟರ್್ ಆದೇಶದ ಪ್ರಕಾರ, ವಿಧಾನಸಭೆ ವಿಸರ್ಜನೆಯಾದ ಆರು ತಿಂಗಳೊಳಗೆ ಚುನಾವಣೆ ನಡೆಸಬೇಕು. ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆ ನಡೆಸಲು ಚುನಾವಣಾ ಆಯೋಗಕ್ಕೆ ಮೇ 21ರವರೆಗೆ ಸಮಯ ಇದ್ದು, ಅದೇ ವೇಳೆಗೆ ಲೋಕಸಭೆಯ ಅವಧಿ ಸಹ ಮುಗಿಯುವುದರಿಂದ ಸಾರ್ವತ್ರಿಕ ಚುನಾವಣೆಯೊಂದಿಗೆ ಕಾಶ್ಮೀರ ಚುನಾವಣೆ ನಡೆಸುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ವಿಧಾಸಭೆಯ ಅವಧಿ ಮಾಚರ್್ 16, 2021ಕ್ಕೆ ಅಂತ್ಯಗೊಳಲಿತ್ತು. ಆದರೆ ಬಿಜೆಪಿ, ಪಿಡಿಪಿಗೆ ನೀಡಿದ್ದ ಬೆಂಬಲ ಹಿಂಪಡೆ ನಂತರ ಕಾಶ್ಮೀರದಲ್ಲಿ ಆರು ತಿಂಗಳ ರಾಜ್ಯಪಾಲರ ಆಡಳಿತ ಜಾರಿಯಲ್ಲಿತ್ತು. ರಾಜ್ಯಪಾಲರ ಆರು ತಿಂಗಳ ಆಡಳಿತ ಅಂತ್ಯಗೊಳ್ಳುತ್ತಿದ್ದಂತೆ ಪಿಡಿಪಿ, ಕಾಂಗ್ರೆಸ್ ಮತ್ತು ಎನ್ ಸಿ ಸೇರಿಕೊಂಡು ಮೈತ್ರಿ ಸಕರ್ಾರ ರಚನೆಗೆ ಮುಂದಾಗಿದ್ದವು. ಆದರೆ ಇದಕ್ಕೆ ಅವಕಾಶ ಕೊಡದ ಮಲಿಕ್ ಅವರು ವಿಧಾನಸಭೆಯನ್ನು ವಿಸಜರ್ಿಸಿದ್ದಾರೆ.