ನವದೆಹಲಿ: ಭಾರತೀಯ ಶೂಟರ್ ಅಭಿನವ್ ಬಿಂದ್ರಾ ಮತ್ತೊಮ್ಮೆ ಭಾರತೀಯರು ಹೆಮ್ಮೆ ಪಡುವ ಅತ್ಯುಚ್ಚ ಗೌರವ ತನ್ನದಾಗಿಸಿದ್ದಾರೆ. ಬಿಂದ್ರಾ ಅವರಿಗೆ ವಿಶ್ವದ ಅತ್ಯುನ್ನತ ಶೂಟಿಂಗ್ ಪ್ರಶಸ್ತಿ " ದಿ ಬ್ಲೂ ಕ್ರಾಸ್" ಪುರಸ್ಕಾರ ಲಭಿಸಿದೆ.
ಬ್ಲೂ ಕ್ರಾಸ್ ಪ್ರಶಸ್ತಿಯು ಅಂತರಾಷ್ಟ್ರೀಯ ಶೂಟಿಂಗ್ ಫೆಡರೇಷನ್ (ಐಎಸ್ಎಸ್ಎಫ್) ನೀಡುವ ಅತ್ಯುನ್ನತ ಗೌರವವಾಗಿದ್ದು ಇದನ್ನು ಪಡೆದ ಭಾರತದ ಮೊದಲ ಶೂಟರ್ ಎಂಬ ಖ್ಯಾತಿ ಅಭಿನವ್ ಬಿಂದ್ರಾ ಅವರದಾಗಿದೆ.
ಶೂಟಿಂಗ್ ಕ್ಷೇತ್ರದಲ್ಲಿ ಅತ್ಯುನ್ನತ ಸಾಧನೆ ಮಾಡಿದ ಕ್ರೀಡಾ ಸಂಸ್ಥೆಯ ಸದಸ್ಯರಿಗೆ ಈ ಪುರಸ್ಕಾರ ನೀಡಲಾಗುತ್ತದೆ.ಒಲಂಪಿಕ್ ಶೂಟಿಂಗ್ ವೈಯುಕ್ತಿಕ ವಿಭಾಗದಲ್ಲಿ ಚಿನ್ನದ ಪದಕ ಗಳಿಸಿದ ಏಕೈಕ ಭಾರತೀಯರಾಗಿರುವ ಬಿಂದ್ರಾ "ಮ್ಯೂನಿಚ್ ನಲ್ಲಿ ನಡೆಯುವ ಸಮಾರಂಭದಲ್ಲಿ ಶೂಟಿಂಗ್ ಗಾಗಿನ ಅತ್ಯುನ್ನತ ಪ್ರಶಸ್ತಿ ಬ್ಲೂ ಕ್ರಾಸ್ ಸ್ವೀಕರಿಸಲು ನನಗೆ ಅತ್ಯಂತ ಆನಂದವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.