ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನಡೆದ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಸುಭಾಷ್ ಅವರು ಕೇಂದ್ರ ಚುನಾವಣೆ ಆಯೋಗ ನೇಮಿಸಿದ ಕೋಯಿಕೋಡ್, ಕಾಸರಗೋಡು, ಕಣ್ಣೂರು, ವಯನಾಡ್ ಜಿಲ್ಲೆಗಳ ಇಲೆಕ್ಟ್ರಲ್ ರೋಲ್ ಒಬ್ಸರ್ವರ್ ಕೂಡ ಆಗಿದ್ದಾರೆ.
ಸಂಸತ್ ಚುನಾವಣೆಯ ಮುಂಚಿತವಾಗಿ ಲೋಪದೋಷಗಳಿಲ್ಲದ ಮತದಾತರ ಪಟ್ಟಿ ಪ್ರಕಟಿಸುವ ಯತ್ನ ನಡೆಯುತ್ತಿದೆ. ಅರ್ಹರಾಗಿರುವ ಒಬ್ಬ ವ್ಯಕ್ತಿಯ ಹೆಸರೂ ಪಟ್ಟಿಯಿಂದ ಹೊರಗುಳಿಯಕೂಡದು.
ಒಬ್ಬರಿಗೆ ಒಂದಕ್ಕಿಂತ ಹೆಚ್ಚು ಮತದಾತರ ಪಟ್ಟಿಯಲ್ಲಿ ಹೆಸರಿರಕೂಡದು. ಅನರ್ಹರ ಮತ್ತು ನಿಧನರಾದವರ ಹೆಸರು ಪಟ್ಟಿಯಲ್ಲಿ ಉಳಿಯಕೂಡದು.
ಪ್ರಜಾಪ್ರಭುತ್ವ ನೀತಿಯನ್ನು ಸಕ್ಷಮಗೊಳಿಸುವ ಮೂಲಧಾತು ಮತದಾತರ ಪಟ್ಟಿಯಾಗಿದೆ ಎಂದವರು ತಿಳಿಸಿದರು.
2018 ಜನವರಿ ಒಂದು, 2019
ಜನವರಿ ಒಂದು ಗಣನೆಯಲ್ಲಿರಿಸಿ
18 ವರ್ಷ ಪ್ರಾಯ ಪೂರ್ಣಗೊಳ್ಳುವವರನ್ನುಪಟ್ಟಿಯಲ್ಲಿ ಅಳವಡಿಸಬಹುದು. ಟ್ರಾನ್ಸ್ಜೆಂಟರ್, ವಿಕಲಚೇತನರು,
ವಿದೇಶದಲ್ಲಿರುವ ಭಾರತೀಯರು ಮೊದಲಾದವರನ್ನೂ ಮತದಾರ ಪಟ್ಟಿಯಲ್ಲಿ ಸೇರ್ಪಡೆಗೊಳಿಸುವ ಯತ್ನ ತ್ವರಿತಗೊಳ್ಳಬೇಕಾಗಿದೆ ಎಂದವರು ತಿಳಿಸಿದರು.
ಬೂತ್ ಮಟ್ಟದಲ್ಲಿ ಚಟುವಟಿಕೆ ತ್ವರಿತಗೊಳ್ಳಲಿ
: ಜಿಲ್ಲೆಯ ಎಲ್ಲ ಬೂತ್ ಮಟ್ಟದ ಮತದಾರ ಪಟ್ಟಿ ನವೀಕರಣ ಬೂತ್ ಲೈವನ್ ಆಫೀಸರ್ಗಳು, ಏಜೆಂಟರೂಗಳ ನೇತೃತ್ವದಲ್ಲಿ ತ್ವರಿತಗತಿಯಲ್ಲಿ ನಡೆಯಬೇಕು. ಬೂತ್ ಲೈವನ್ ಏಜೆಂಟರನ್ನು ನೇಮಿಸದೇ ಇರುವ ರಾಜಕೀಯ ಪಕ್ಷಗಳು ತಕ್ಷಣ ಈ ಕಾರ್ಯ ನಡೆಸಬೇಕು ಎಂದು ನುಡಿದರು.
ಒಂದು ವಾರದ ಅವಧಿಯಲ್ಲಿ ಬೂತ್ ಮಟ್ಟದ ಸಭೆ ನಡೆಸಿ ಈ ಸಂಬಂಧ ಚಟುವಟಿಕೆ ತ್ವರಿತಗೊಳಿಸಬೇಕು. ತಪ್ಪು ತಿದ್ದುಪಡಿ,
ಭಾವಚಿತ್ರ ವ್ಯತ್ಯಾಸ ಇತ್ಯಾದಿ ಕುರಿತು ಮತದಾರರಲ್ಲಿ ಜಾಗೃತಿ ಮೂಡಬೇಕು. ಆಯಾ ವಿಧಾನಸಭಾ ಕ್ಷೇತ್ರದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಹೆಸರು ಸೇರಿಸಿ ಮತ್ತು ಕಳೆಯಲಾದ 20
ಬೂತ್ ಗಳ ವಿಚಾರವನ್ನು ನೇರವಾಗಿ ತಪಾಸಣೆ ನಡೆಸಲಾಗುವುದು.
ಜಿಲ್ಲಾಧಿಕಾರಿ ಡಾ.ಸಜಿತ್ ಬಾಬು, ಚುನಾವಣೆ ವಿಭಾಗ ಸಹಾಯಕ ಜಿಲ್ಲಾಧಿಕಾರಿ ಎ.ಕೆ.ರಮೇಂದ್ರನ್, ತಹಸೀಲ್ದಾರರು, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.