ಮಂಜೇಶ್ವರ: ಕೇರಳ ಸರಕಾರದ ರಿಸ್ಕ್ ಫಂಡ್ ಯೋಜನೆಯ ಪ್ರಕಾರ ಬ್ಯಾಂಕ್ನಿಂದ ಸಾಲ ತೆಗೆದು ಅವಧಿಯೊಳಗೆ ಪಾವತಿಸದಿದ್ದಲ್ಲಿ ಅಥವಾ ಆ ಅವಧಿಯೊಳಗಾಗಿ ಸಾಲಗಾರರು ಮರಣ ಹೊಂದಿದ್ದಲ್ಲಿ ಆ ಹಣವನ್ನು ಸರಕಾರ ನೀಡುತ್ತದೆ. ಈ ಪ್ರಕಾರವಾಗಿ ವಕರ್ಾಡಿ ಸೇವಾ ಸಹಕಾರಿ ಬ್ಯಾಂಕ್ನಿಂದ ಸಾಲ ತೆಗೆದು ಮಂಜಪ್ಪ ಶೆಟ್ಟಿ ಪೆರ್ಮನಂಜಿ ಅವರು ತೆಂಗಿನ ಮರವೇರಿ ಬಿದ್ದು ಅಸುನೀಗಿದ ಕಾರಣ ಅವರ ಕೃಷಿ ಸಾಲದ ಹಣವಾದ ರೂ.40468 ನ್ನು ಅವರ ಪತ್ನಿಯಾದ ರಾಧಾ ಅವರಿಗೆ ಬ್ಯಾಂಕ್ನ ಅಧ್ಯಕ್ಷ ದಿವಾಕರ್ ಎಸ್. ಚೆಕ್ನ್ನು ನೀಡುವುದರ ಮೂಲಕ ಸಾಲವನ್ನು ಮನ್ನಾ ಗೊಳಿಸಲಾಯಿತು.
ಈ ಸಂದರ್ಭ ಕಾರ್ಯದಶರ್ಿ ಶ್ರೀವತ್ಸ ಭಟ್, ಉಪಾಧ್ಯಕ್ಷ ಅಬ್ದುಲ್ಲಾ, ನಿದರ್ೇಶಕರಾದ ಸೀತಾರಾಮ ಬೇರಿಂಜ, ಸೀತಾರಾಮ ಪೂಜಾರಿ, ಜಯಾ, ರೋನಿ ಡಿ'ಸೋಜ, ರಾಜೇಶ್ ಡಿ'ಸೋಜ, ಭಿಪಾತಿಮ, ಸುನಿತಾ ಡಿ'ಸೋಜ, ಕಮಲಾಕ್ಷಿ, ಮೊಹಮ್ಮದ್ ಇಕ್ಬಾಲ್ ಉಪಸ್ಥಿತರಿದ್ದರು.