ಕುಂಬಳೆ: `ಕನ್ನಡದ ಉಳಿವು-ಕನ್ನಡಿಗರ ಗೆಲುವು' ಪರಿಕಲ್ಪನೆಯಲ್ಲಿ ಡಿ.2 ರಂದು ರಾಣಿಬೆನ್ನೂರಿನಲ್ಲಿ ಕನ್ನಡ ಸಾಹಿತ್ಯೋತ್ಸವ ಜರಗಲಿದೆ. ಸವಣೂರಿನ ವರುಣ್ ಕಲಾಸಾಹಿತ್ಯ ಸಾಂಸ್ಕೃತಿಕ ಸಂಸ್ಥೆಯ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಲಿದೆ. ಚುಟುಕು ಸಾಹಿತ್ಯ ಪರಿಷತ್ತಿನ ಸಂಸ್ಥಾಪಕ ಹಾಗು ಕೇಂದ್ರ ಸಮಿತಿ ಪ್ರಧಾನ ಸಂಚಾಲಕ ಡಾ.ಎಂ.ಜಿ.ಆರ್.ಅರಸ್ ಸಾಹಿತ್ಯೋತ್ಸವವನ್ನು ಉದ್ಘಾಟಿಸುವರು.
ಇದೇ ಸಂದರ್ಭದಲ್ಲಿ ಶತಕವಿಗೋಷ್ಠಿ ನಡೆಯಲಿದ್ದು ಕಾಸರಗೋಡಿನ ಹಿರಿಯ ಕವಿ, ಪತ್ರಕರ್ತ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಅವರ ಅಧ್ಯಕ್ಷತೆಯಲ್ಲಿ ಸಾಂಸ್ಕೃತಿಕ ಸಂಘಟಕ, ಸಾಹಿತಿ ಕಾಸರಗೋಡು ಅಶೋಕ ಕುಮಾರ್ ಉದ್ಘಾಟಿಸುವರು. ದಿನಪೂತರ್ಿ ನಡೆಯುವ ಕಾರ್ಯಕ್ರಮದಲ್ಲಿ ಸಾಹಿತ್ಯ ಚಿಂತನ-ಮಂಥನ, ಕೃತಿಗಳ ಬಿಡುಗಡೆ, ಪ್ರಶಸ್ತಿ ಪ್ರದಾನ, ಸಮ್ಮಾನ, ಸಾಂಸ್ಕೃತಿಕ ವೈವಿಧ್ಯ ಜರಗಲಿದೆ. ಪುಸ್ತಕ ಪ್ರದರ್ಶನ, ಚಿತ್ರಕಲಾ ಪ್ರದರ್ಶನ, ಮಾರಾಟ ವ್ಯವಸ್ಥೆಗೊಳಿಸಲಾಗಿದ್ದು, ಕನರ್ಾಟಕ ಮತ್ತು ಹೊರನಾಡಿನ ಸಾಹಿತಿ - ಕಲಾವಿದರು ಭಾಗವಹಿಸುವರು. ಸವಣೂರು ಮೆಸ್ಕಾಂನ ಅಭಿಯಂತರ ನಾಗರಾಜ್ ನೇತೃತ್ವದ ತಂಡ ಸತ್ಯ ಹರಿಶ್ಚಂದ್ರ ನಾಟಕದ ಆಯ್ದ ದೃಶ್ಯಾವಳಿಯನ್ನು ನೃತ್ಯರೂಪದಲ್ಲಿ ಪ್ರದಶರ್ಿಸುವರು. ಮಾನ್ವಿ ಎಂ.ಜೈನ್ ಅವರಿಂದ ನಾಟ್ಯ ತರಂಗ ನಡೆಯಲಿದೆ. ಡಾ.ಸುರೇಶ್ ನೆಗಳಗುಳಿ, ನಾರಾಯಣ ರೈ ಕುಕ್ಕುವಳ್ಳಿ, ರತ್ನಾ ಹಾಲಪ್ಪ ಗೌಡ, ಚೇತನಾ ಕುಂಬ್ಳೆ, ಶ್ವೇತಾ ಕಜೆ, ದಯಾನಂದ ರೈ ಕಳುವಾಜೆ, ಶಮರ್ಿಳಾ ಬಜಕೂಡ್ಲು, ಶ್ರೀನಿವಾಸ ಸ್ವರ್ಗ, ಗುಣಾಜೆ ರಾಮಚಂದ್ರ ಭಟ್, ಜಯ ಮಣಿಯಂಪಾರೆ, ತಾರಾನಾಥ ಬೋಳಾರ್ ಮೊದಲಾದವರು ವಿವಿಧ ಗೋಷ್ಠಿಗಳಲ್ಲಿ ಭಾಗವಹಿಸುವರು.
ಪುತ್ತೂರು, ಕಾಸರಗೋಡು, ಮಂಗಳೂರು ವಿಭಾಗದ ಸಾಹಿತಿಗಳು, ಕಲಾವಿದರು ಸಾಹಿತ್ಯೋತ್ಸವದಲ್ಲಿ ಬಹುಸಂಖ್ಯೆಯಲ್ಲಿ ಭಾಗವಹಿಸುವರೆಂದು ವರುಣ್ ಕಲಾ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆಯ ಪ್ರಧಾನ ಸಂಚಾಲಕ ರಾಮಕೃಷ್ಣ ಸವಣೂರು ತಿಳಿಸಿದ್ದಾರೆ.