ಉಪ್ಪಳ: ಯಕ್ಷ ಧ್ರುವ ಪಟ್ಲ ಫೌಂಡೇಶನ್ ಮಂಗಳೂರು ಇದರ ಉಪ್ಪಳ ಘಟಕದ ವಿಶೇಷ ಸಭೆ ಉಪ್ಪಳದ ಪಂಚಮಿ ಪ್ಲಾಝಾದಲ್ಲಿ ಇತ್ತೀಚೆಗೆ ಜರಗಿತು.
ಘಟಕದ ಉಪಾಧ್ಯಕ್ಷ ಪದ್ಮನಾಭ ಭಂಡಾರಿ ಮುಳಿಂಜ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಜನವರಿ 27ರಂದು ವಾಷರ್ಿಕ ದಿನಾಚರಣೆಯನ್ನು ಕೊಂಡೆವೂರು ಕ್ಷೇತ್ರದಲ್ಲಿ ನಡೆಸಲು ತೀಮರ್ಾನಿಸಲಾಯಿತು ಹಾಗೂ ಪಟ್ಲ ಫೌಂಡೇಶನ್ ಉಪ್ಪಳ ಘಟಕದ ವತಿಯಿಂದ ಉಚಿತವಾಗಿ ಯಕ್ಷಗಾನ ತರಬೇತಿ ಯೋಜನೆಯಡಿ ತರಬೇತಿ ಪಡೆದ ಕೊಂಡೆವೂರು ಶಾಲಾ ವಿದ್ಯಾಥರ್ಿ ತಂಡದ ರಂಗಪ್ರವೇಶ ನಡೆಸಲು ಹಾಗೂ ಪ್ರಸಿದ್ಧ ಕಲಾವಿದರಿಂದ ಯಕ್ಷಗಾನ ಪ್ರದರ್ಶನ ಏರ್ಪಡಿಸಲು ತೀಮರ್ಾನಿಸಲಾಯಿತು. ಉಪ್ಪಳ ಘಟಕದ ಸಂಚಾಲಕ ಯೋಗೀಶರಾವ್ ಚಿಗುರುಪಾದೆ ಸಭೆ ನಿರ್ವಹಿಸಿದರು.