ಮುಳ್ಳೇರಿಯ: ಮುಳ್ಳೇರಿಯ ಹವ್ಯಕ ಮಂಡಲದ ಮಾಸಿಕ ಸಭೆಯು ಗುತ್ತಿಗಾರು ವಲಯ ಅಧ್ಯಕ್ಷ ಅಡಿಕೆ ಹಿತ್ಲು ಸೀತಾರಾಮ ಭಟ್ ಅವರ ಮನೆಯಲ್ಲಿ ಇತ್ತೀಚೆಗೆ ಜರಗಿತು.
ದೀಪಜ್ವಲನ, ಧ್ವಜಾರೋಹಣ, ಶಂಖನಾದ, ಗುರುವಂದನೆ, ಗೋಸ್ತುತಿಯೊಂದಿಗೆ ಸಭೆ ಪ್ರಾರಂಭವಾಯಿತು. ಕಾರ್ಯದಶರ್ಿ ಬಾಲಸುಬ್ರಹ್ಮಣ್ಯ ಭಟ್ ಸರ್ಪಮಲೆ ಪ್ರಾಸ್ತಾವಿಕ ನುಡಿಗಳನ್ನಾಡಿ, ಗತ ಸಭೆಯ ವರದಿಯನ್ನು ಮಂಡಿಸಿದರು. ಕೋಶಾಧ್ಯಕ್ಷ ಸುಬ್ರಹ್ಮಣ್ಯ ಭಟ್ ಗಬ್ಲಡ್ಕ ಅವರು ಲಕ್ಷ್ಮೀಲಕ್ಷಣದ ಮಾಹಿತಿ ನೀಡಿ ಲೆಕ್ಕಪತ್ರ ಮಂಡಿಸಿದರು. ವಲಯ ಪದಾಧಿಕಾರಿಗಳು ವಲಯ ವರದಿಗಳನ್ನಿತ್ತರು. ವಿಭಾಗ ಪ್ರಧಾನರು ಆಯಾ ವಿಭಾಗಗಳ ವರದಿ ನೀಡಿ ಮಾಹಿತಿಗಳನ್ನಿತ್ತರು.
ಮಂಡಲ ಗುರಿಕ್ಕಾರರಾದ ಸತ್ಯನಾರಾಯಣ ಭಟ್ ಮೊಗ್ರ ಮಾತನಾಡಿ ಶ್ರೀ ಅಖಿಲ ಹವ್ಯಕ ಮಹಾ ಸಭಾ ಬೆಂಗಳೂರು ಇದರ ನೇತೃತ್ವದಲ್ಲಿ ಡಿ.28 ರಿಂದ 30 ರ ವರೆಗೆ ಜರಗಲಿರುವ ವಿಶ್ವ ಹವ್ಯಕ ಸಮ್ಮೇಳನದ ಬಗ್ಗೆ ಸಮಗ್ರ ಮಾಹಿತಿಗಳನ್ನಿತ್ತರು. ಬಜಕೂಡ್ಲು ಅಮೃತಧಾರಾ ಗೋಶಾಲೆಗೆ ನಿರಂತರವಾಗಿ ಮೇವಿನ ಹುಲ್ಲನ್ನು ಸಾಗಿಸುವ ವಿಶೇಷ ಯೋಜನೆ `ಗೋವಿಗಾಗಿ ಮೇವು ಶ್ರಮದಾನ ಮತ್ತು ಮೇವು ಬ್ಯಾಂಕ್' ಕುರಿತು ಮಂಡಲ ವಿದ್ಯಾಥರ್ಿ ವಾಹಿನಿ ಪ್ರಧಾನ ಕೇಶವ ಪ್ರಸಾದ್ ಎಡಕ್ಕಾನ ಮಾಹಿತಿಗಳನ್ನು ನೀಡಿದರು.
ಈ ಸಂದರ್ಭದಲ್ಲಿ ಶ್ರೀ ಮಠದ ವತಿಯಿಂದ ಒದಗಿಸುತ್ತಾ ಇರುವ ವಿದ್ಯಾ ಸಹಾಯ ನಿಧಿಯನ್ನು ಮೂವತ್ತೆರಡು ಮಂದಿ ಅರ್ಹ ವಿದ್ಯಾಥರ್ಿಗಳಿಗೆ 120000 ರೂ. ಮೊತ್ತವನ್ನು ವಿತರಿಸಲಾಯಿತು.
ಎರಡು ಬಾರಿ ವಲಯಾಧ್ಯಕ್ಷರಾಗಿ ಸೇವೆ ಮಾಡಿದ ಸಾಮಾಜಿಕ ಮುಂದಾಳೂ, ಗುರಿಕ್ಕಾರರೂ ಆಗಿರುವ ನಿವೃತ್ತ ಸಹಕಾರಿ ಉದ್ಯೋಗಿ ದೇರಳಕಟ್ಟೆಯಲ್ಲಿರುವ ಕಾನತ್ತೂರು ಸುಬ್ರಹ್ಮಣ್ಯ ಭಟ್ ಅವರನ್ನು ಈ ಸಮಯದಲ್ಲಿ ಗೌರವಿಸಿ ಸಮ್ಮಾನಿಸಲಾಯಿತು. ಮಂಡಲಾಧ್ಯಕ್ಷ ಪ್ರೊ.ಶ್ರೀಕೃಷ್ಣ ಭಟ್ ಅಧ್ಯಕ್ಷತೆ ವಹಿಸಿದ್ದರು. ಸಾಮೂಹಿಕ ಭಜನಾ ರಾಮಾಯಣ, ಸಾಮೂಹಿಕ ರಾಮಜಪ, ಶಾಂತಿಮಂತ್ರ, ಧ್ವಜಾರೋಹಣ, ಶಂಖನಾದವಾಗಿ ಸಭೆ ಮುಕ್ತಾಯವಾಯಿತು.