ಮಧೂರು: ವಿದ್ಯಾಥರ್ಿಗಳ ಕಲಿಕೆ ಸದೃಢವಾಗಬೇಕಾದರೆ ಮೊದಲು ಮಾತೃ ಭಾಷೆ ಗಟ್ಟಿಗೊಳ್ಳಬೇಕು. ಅದಕ್ಕಾಗಿ ವಿದ್ಯಾಥರ್ಿಗಳು ಮಾತೃ ಭಾಷೆಯಾದ ಕನ್ನಡದಲ್ಲಿ ಸಾಕಷ್ಟು ಪ್ರಾವಿಣ್ಯವನ್ನು ಗಳಿಸಿಕೊಳ್ಳಬೇಕು ಎಂದು ಕೂಡ್ಲು ಶ್ರೀ ಗೋಪಾಲಕೃಷ್ಣ ಪ್ರೌಢಶಾಲಾ ಮುಖ್ಯ ಶಿಕ್ಷಕ ಶ್ರೀಹರಿ ನೀಲಂಗಳ ಹೇಳಿದರು.
ಕೂಡ್ಲು ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆಯಲ್ಲಿ ಮಧುರ ಕನ್ನಡ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಾಲಾಭಿವೃದ್ದಿ ಸಮಿತಿ ಸಂಚಾಲಕಿ ಸುದಕ್ಷಿಣ ಟಿ.ಪಿ. ಅಧ್ಯಕ್ಷತೆ ವಹಿಸಿದ್ದರು. ಅಧ್ಯಾಪಕರಾದ ವಿಶಾಲಾಕ್ಷ ಪುತ್ರಕಳ, ಗಣೇಶ್ಕುಮಾರ್ ಎಸ್. ಶುಭ ಹಾರೈಸಿದರು. ಶ್ರೀಲತಾ ಕೆ. ಸ್ವಾಗತಿಸಿ, ಆಶಾಕುಮಾರಿ ಕೆ. ವಂದಿಸಿದರು.