ಜಿಲ್ಲೆಯ 6 ಬ್ಲೋಕ್ ಗಳಲ್ಲೂ ಉಚಿತ ರೂಪದಲ್ಲಿ ಔಷಧ ವಿತರಣೆ ನಡೆಯಲಿದೆ. ಆಯಾ ಪಂಚಾಯತ್ನಲ್ಲಿ ದ್ರವ ಔಷಧ ಸಿಂಡಣೆಗೆ ಸಂಬಂಧಿತ ಚಟುವಟಿಕೆಗಳ ಕುರಿತು ಸ್ಥಳೀಯ ಕೃಷಿಅಧಿಕಾರಿಗೆ ಹೊಣೆನೀಡಲಾಗಿದೆ. ಪನಿಯೂರು ಒಂದು,
ಕರಿಯಿಲಾಂಜಿ,
ಕರಿಮುಂಡ ಎಂಬ ವರ್ಗದ ಕಾಳುಮೆಣಸು ಪ್ರಧಾನವಾಗಿ ಜಿಲ್ಲೆಯಲ್ಲಿ ಬೆಳೆಯಲಾಗುತ್ತಿದೆ.
ಇವುಗಳನ್ನು ಬಾಧಿಸುವ ಎಲ್ಲ ರೀತಿಯ ರೋಗಗಳಿಗೆ ಅಕೋಮಿನ್ ಸ್ಪ್ರೇ ಪರಿಣಾಮಕಾರಿ ಔಷಧವಾಗಿದೆ ಎಂದು ಕೃಷಿ ಅಭಿವೃದ್ಧಿ ಇಲಾಖೆ ನಿರೀಕ್ಷಿಸಿದೆ. 10 ದಿನಗಳ ಅಂತರದಲ್ಲಿ ಎರಡು ಬಾರಿ ಕೃಷಿಭವನ ಮೂಲಕ ಕೃಷಿ ಕ್ರಿಯಾ ಸೇನೆ, ಅಗ್ರೋಸರ್ವೀಸ್ ಸೆಂಟರ್ ಇತ್ಯಾದಿ ಸಂಸ್ಥೆಗಳ ತಾಂತ್ರಿಕ ಸಹಾಯದೊಂದಿಗೆ ಔಷಧ ಸಿಂಡಣೆ ನಡೆಸಲಾಗುವುದು. ಡಿ.31ರ ಮುಂಚಿತವಾಗಿ ಔಷಧ ಸಿಂಡಣೆ ಪೂರ್ಣಗೊಳಿಸಿ ಪ್ರಧಾನ ಕೃಷಿ ಅಧಿಕಾರಿಗಳು ಕೃಷಿ ಇಲಾಖೆಗೆ ವರದಿ ಸಲ್ಲಿಸುವಂತೆ ಆದೇಶಿಸಲಾಗಿದೆ.
ಕಾಳುಮೆಣಸಿನ ರೋಗಬಾಧೆ ನಿವಾರಣೆಗೆ ಔಷಧ ಸಿಂಪಡಣೆಗೆ ಕ್ರಮ
0
ನವೆಂಬರ್ 30, 2018